ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಲಂಕಾರ ಪೂಜೆ

pooje 1 copy ಹುಣ್ಸೆಕಟ್ಟೆ : ಪ್ರಗತಿಬಂಧು ಜ್ಞಾನವಿಕಾಸ ಸ್ವಸಹಾಯ ಸಂಘಗಳ ಒಕ್ಕೂಟ ಬೆಳ್ತಂಗಡಿ ಬಿ ಹುಣ್ಸೆಕಟ್ಟೆ, ನವಜೀವನ ಸಮಿತಿ ಹುಣ್ಸೆಕಟ್ಟೆ, ಜನಜಾಗೃತಿ ಗ್ರಾಮ ಸಮಿತಿ ಹುಣ್ಸೆಕಟ್ಟೆ ಇವುಗಳ ಆಶ್ರಯದಲ್ಲಿ ಜ.8ರಂದು ಗ್ರಾಮ ಸುಭೀಕ್ಷೆಗಾಗಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೆಂಬರ್ಜೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಪಂಚಾಮೃತಾಭಿಷೇಕ, 351 ಸಿಯಾಳಾಭಿಷೇಕ, ಅಲಂಕಾರ ಪೂಜೆ ಸಹಿತ ಮಹಾಪೂಜೆಯನ್ನು ವೇದಮೂರ್ತಿ ಸುರೇಶ್ ಐತಾಳ್ ಇವರ ನೇತೃತ್ವದಲ್ಲಿ ನಡೆಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಲೆಕ್ಕಪತ್ರ ಪರಿಶೋಧಕ ಶ್ರೀಮತಿ ಸುಗುಣ ಹಾಗೂ ಯೋಜನೆಯ ತಾಲೂಕು ಕೃಷಿ ಅಧಿಕಾರಿ ರಾಮ್ ಕುಮಾರ್ , ಬೆಳ್ತಂಗಡಿ ಜನಜಾಗೃತಿ ವಲಯಾಧ್ಯಕ್ಷ ಜೆರ್ಮಿಡೇಸ್, ಒಕ್ಕೂಟದ ಅಧ್ಯಕ್ಷ ದಯಾನಂದ ಕೋಟ್ಯಾನ್, ಸೇವಾ ಪ್ರತಿನಿಧಿ ಶ್ರೀಮತಿ ಜಯಶೀಲ, ನವಜೀವನ ಸಮಿತಿ ಅಧ್ಯಕ್ಷ ರಾಮಣ್ಣ ಪೂಜಾರಿ ಹಾಗೂ ಒಕ್ಕೂಟ ಪದಾಧಿಕಾರಿಗಳು ಹಾಗೂ ಸದಸ್ಯರು, ಊರಿನ ಭಗವದ್ಭಕ್ತರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.