ಮಲ್‌ಜಅ ವಿಮೆನ್ಸ್ ಕಾಲೇಜು ಮುಂದಿನ ಸಾಲಿನ ದಾಖಲಾತಿ ಪತ್ರ ಬಿಡುಗಡೆ

PATHRIKE ಉಜಿರೆ: ಇಲ್ಲಿನ ಮಲ್‌ಜಅ ಸಮನ್ವಯ ಶಿಕ್ಷಣ ಕೇಂದ್ರ, ದಅವಾ ಮತ್ತು ರಿಲೀಫ್ ಸೆಂಟರ್ ಹಾಗೂ ವಿಮೆನ್ಸ್ ಕಾಲೇಜಿನ 2017-18 ನೆ ಸಾಲಿನ ದಾಖಲಾತಿ ಪತ್ರದ ಬಿಡುಗಡೆ ಸಮಾರಂಭವು ಇತ್ತೀಚೆಗೆ ಮಲ್‌ಜಅ ಕ್ಯಾಂಪಸ್‌ನಲ್ಲಿ ಮಾಸಿಕ ದಿಕ್ರ್ ಸ್ವಲಾತ್ ಕಾರ್ಯಕ್ರಮದಂದು ನಡೆಯಿತು. ಸಂಸ್ಥೆಯ ಚೇರ್‌ಮೆನ್ ಸಯ್ಯಿದ್ ಅಲವಿ ಜಲಾಲುದ್ದೀನ್ ತಂಙಳ್ ಅವರು ಪತ್ರದ ಬಿಡುಗಡೆ ನಡೆಸಿಕೊಟ್ಟರು. ಈ ಸಂದರ್ಭ ಸಾದಾತ್ ತಂಙಳ್ ಕರ್ವೇಲ್ ಆಶೀರ್ವಚನಗೈದರು.
ನೆರಿಯ ಗ್ರಾಮದ ಶಾಹಿದಾ ಬಾನು ಅವರ ಪರವಾಗಿ ಎಸ್ಸೆಸ್ಸೆಫ್ ಡಿವಿಷನ್ ಎಕ್ಸ್‌ಕ್ಯೂಟಿವ್ ರಫೀಕ್ ಮದನಿ ಪ್ರಥಮ ಪತ್ರ ಸ್ವೀಕರಿಸಿದರು. ಈ ಸಂದರ್ಭ ಮಲ್‌ಜಅ ವಿಮೆನ್ಸ್ ಕಾಲೇಜು ಪ್ರೋಫೆಸರ್ ಅಶ್ರಫ್ ಸಖಾಫಿ ಮಂಜೇಶ್ವರ, ಝುಬೈರ್ ಮದನಿ, ಶರೀಅತ್ ಮತ್ತು ದಅವಾ ಪ್ರೋಫೆಸರ್ ಆಸಿಫ್ ಅಹ್‌ಸನಿ ಕನ್ಯಾರಕೋಡಿ, ಪ್ರೊ. ಶಾಹುಲ್ ಹಮೀದ್ ಅಹ್‌ಸನಿ ನಾವೂರು, ಕಮಾಲ್ ಮಾಸ್ಟರ್, ಜನರಲ್ ಮೆನೇಜರ್ ಶರೀಫ್ ಬೆರ್ಕಳ, ಸದಕತುಲ್ಲಾ ಮೊದಲಾದವರು ಉಸ್ಥಿತರಿದ್ದರು. ಪ್ರಸ್ತುತ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ವಿಮೆನ್ಸ್ ಶರೀಅತ್ ಕಾಲೇಜಿನಲ್ಲಿ ೨೧೦ ವಿದ್ಯಾರ್ಥಿನಿಯರು ಅಭ್ಯಸಿಸುತ್ತಿದ್ದು ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.