ಬಳೆಂಜ ಗ್ರಾ.ಪಂ ಮಾಜಿ ಉಪಾಧ್ಯಕ್ಷರಾಗಿದ್ದ ಪಿ. ಕೆ ಶರೀಫ್ ನಿಧನ

nidhana ಪೆರಾಲ್ದರಕಟ್ಟೆ: ಇಲ್ಲಿನ ನಿವಾಸಿ, ಸಾಮಾಜಿಕ ಕಾರ್ಯಕರ್ತರಾಗಿದ್ದ ಬಳೆಂಜ ಗ್ರಾ. ಪಂ ಮಾಜಿ ಉಪಾಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ಪಿ. ಕೆ ಶರೀಫ್ ಅವರು ಜ. 23 ರಂದು ಪೆರಾಲ್ದರಕಟ್ಟೆಯ ತನ್ನ ಸಹೋದರನ ಮನೆಯಲ್ಲಿ ನಿಧನರಾಗಿದ್ದಾರೆ. ಕೆಲಕಾಲದಿಂದ ಅಸೌಖ್ಯಕ್ಕೊಳಗಾಗಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದವರು ಎರಡು ದಿನಗಳಿಂದ ತೀವ್ರ ಅಸ್ವಸ್ಥಗೊಂಡಿದ್ದರು.
ಮೃತರ ಮನೆಗೆ ಶಾಸಕ ವಸಂತ ಬಂಗೇರ, ಪ್ರಮುಖರಾದ ಗೋಪಿನಾಥ ನಾಯಕ್, ಆಲ್ಫೋನ್ಸ್ ಫ್ರಾಂಕೋ, ಹೈದರ್ ಮದ್ದಡ್ಕ, ಅಬ್ದುಲ್ ರಹಿಮಾನ್ ಸುನ್ನತ್‌ಕೆರೆ, ರಿಯಾಝ್ ಕಟ್ಟೆ, ಸಲೀಂ ಕುತ್ಲೂರು, ಮುಹಮ್ಮದ್ ರಫಿ, ನಝೀರ್ ಕಾಂತಿಜಾಲು, ವಿನ್ಸೆಂಟ್ ಡಿಸೋಜಾ, ವಸಂತ ಬಿ. ಕೆ ಮೊದಲಾದವರು ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.