ಬೆಳ್ತಂಗಡಿ : ನಗದು ರಹಿತ ವ್ಯವಹಾರಗಳ ಮಹತ್ವ ಮಾಹಿತಿ ಕಾರ್ಯಕ್ರಮ

«ZÀºÀgÀಬೆಳ್ತಂಗಡಿ : ಭಾರತದ ಇತ್ತೀಚಿಗಿನ ಅರ್ಥವ್ಯವಸ್ಥೆಯ ಬದಲಾವಣೆಯಿಂದಾಗಿ ನಗದು ರಹಿತ ವ್ಯವಹಾರಗಳು ಮಹತ್ವ ಪಡೆದಿದ್ದು ನಗರದಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶದಲ್ಲೂ ಕೂಡ ದಿನನಿತ್ಯದ ವ್ಯವಹಾರ ಪರಿಣಾಮ ಬೀರುತ್ತಿದೆ. ಆ ನಿಟ್ಟಿನಲ್ಲಿ ಗ್ರಾಮೀಣ ನಗದುರಹಿತ ವ್ಯವಹಾರಕ್ಕೆ ನಾಗರೀಕರು ಮತ್ತು ವ್ಯಾಪಾರಿಗಳು ಯಾವ ರೀತಿ ಬದಲಾಗಬೇಕು ಎಂಬ ವಿಷಯದ ಕುರಿತಾಗಿ ಇಂದು(ಜ.21) ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ತಾಲೂಕು ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು.
ಚಾರ್ಟರ್ಡ್ ಎಕೌಂಟೆಂಟ್ಸ್ ಬೆಳ್ತಂಗಡಿ, ಆದಾಯ ತೆರಿಗೆ ಸಲಹೆಗಾರರು ಮತ್ತು ಸಹಕಾರಿ ಯೂನಿಯನ್ ಸಹಯೋಗದೊಂದಿಗೆ ಈ ಸಂಕಿರಣ ಹಮ್ಮಿಕೊಳ್ಳಲಾಯಿತು. ನಗದು ರಹಿತ ವ್ಯವಹಾರ ಎಂದರೇನು? ಇದರಿಂದಾಗುವ ಲಾಭ ಏನು? ಆದಾಯ ತೆರಿಗೆ ವ್ಯಾಪ್ತಿಗಳೇನು? ಅದರಿಂದ ವ್ಯಾಪಾರಿಗಳಿಗಾಗುವ ಲಾಭ ಏನು? ಎಂಬುದರ ಬಗ್ಗೆ, ಪಾನ್ ಕಾರ್ಡ್ ಬಗ್ಗೆ ಹಾಗೂ ಮುಂದಕ್ಕೆ ಜಾರಿಯಾಗಲಿರುವ ಗೂಡ್ಸ್ ಏಂಡ್ ಸರ್ವಿಸ್ ಟ್ಯಾಕ್ಸ್ (ಜಿಎಸ್‌ಟಿ) ಇದರ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್.ಗೋಖಲೆ ವಹಿಸಿದ್ದರು. ನಗರ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್ದ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಎಸ್.ಎಸ್ ನಾಯಕ್ ಆಗಮಿಸಿದ್ದರು. ಚಾರ್ಟರ್ಡ್ ಎಕೌಂಟೆಂಟ್ ಗಾಯತ್ರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜೈಸನ್ ಸ್ವಾಗತಿಸಿ, ತುಳಸಿದಾಸ್ ಪೈ ಮಡಂತ್ಯಾರ್ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.