ಉಜಿರೆಯಲ್ಲಿ ಮೇಳೈಸಲಿದೆ ಮಕ್ಕಳ ಸಾಹಿತ್ಯ ಸಂಭ್ರಮ

Advt_NewsUnder_1
Advt_NewsUnder_1
Advt_NewsUnder_1

ujireಬೆಳ್ತಂಗಡಿ : ಉಜಿರೆಯಲ್ಲಿ ನಡೆಯುವ ಈ ಬಾರಿಯ ಸಾಹಿತ್ಯ ಸಮ್ಮೇಳನವನ್ನು ವಿಭಿನ್ನವಾಗಿ ರೂಪಿಸುವ ನಿಟ್ಟಿನಲ್ಲಿ ಸಾಕಷ್ಟು ವಿನೂತನ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಜ. ೨೮ರಂದು ಬೆಳಿಗ್ಗೆ 10 ರಿಂದ 1 ರವರೆಗೆ ಉಜಿರೆಯ ಶ್ರೀ.ಧ.ಮ ಕಾಲೇಜಿನ ಇಂದ್ರಪ್ರಸ್ಥ ಒಳ-ಕ್ರೀಡಾಂಗಣದಲ್ಲಿ ಮಕ್ಕಳ ಸಾಹಿತ್ಯ ಸಂಸ್ಕ್ರತಿ ಸಂಭ್ರಮ ಆಯೋಜಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಯತ್ನ ನಡೆಯುತ್ತಿದ್ದು, ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸಾಹಿತ್ಯಾಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕಾರ‍್ಯಕ್ರಮ ರೂಪಿಸಲಾಗಿದೆ.
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ದಂಪತಿಗಳ ಪರಿಕಲ್ಪನೆಯಲ್ಲಿ ಮೂಡಿಬರುತ್ತಿರುವ ಈ ವಿನೂತನ ಕಾರ‍್ಯಕ್ರಮ ಮಕ್ಕಳಿಗೆ ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯೋಜನವಾಗಲಿದೆ. ಸಾಮಾನ್ಯವಾಗಿ ನಡೆಯುವ ಮಕ್ಕಳ ಸಾಹಿತ್ಯ ಸಮ್ಮೇಳನದ ಯಾವ ಛಾಯೆಯೂ ಇಲ್ಲದ, ಸುಮಾರು ೧೫೦೦ ಮಕ್ಕಳ ಸಮಾನ ಭಾಗವಹಿಸುವಿಕೆ ಇದರ ಮೂಲ ಉದ್ದೇಶ.
ಕನ್ನಡ ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಡಾ.ಬಿ.ಯಶೋವರ್ಮ ಅವರ ಮಾರ್ಗದರ್ಶದಲ್ಲಿ ನಡೆಯುತ್ತಿರುವ ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿಗಳ ಸ್ವರಚಿತ ಕವನ/ಕಥೆ ವಾಚನ, ಭಾವಗೀತೆ/ ಮಕ್ಕಳ ಗೀತೆಗಳ ಹಾಡು ಮತ್ತು ಅಭಿನಯ ಗೀತೆ, ಸಾಹಿತ್ಯದ ಕುರಿತು ಅರಿವು ಮೂಡಿಸುವ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತರ ಕುರಿತು ರಸಪ್ರಶ್ನೆ ಕಾರ‍್ಯಕ್ರಮ, ತಜ್ಞರಿಂದ ಕಥೆ ಮತ್ತು ಕವನ ರಚಿಸುವ ಬಗೆಗೆ ಮಾಹಿತಿ ಕಾರ‍್ಯಾಗಾರಗಳು ನಡೆಯಲಿದೆ.
ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿ ಸಮ್ಮೇಳನಾಧ್ಯಕ್ಷತೆ ಇರುವುದಿಲ್ಲ ಎಂಬುದರ ಜೊತೆಗೆ ಯಾವುದೇ ಸಾಹಿತ್ಯ ಸ್ಪರ್ಧೆಗಳೂ ಇಲ್ಲಿ ನಡೆಯುವುದಿಲ್ಲ. ಈಗಾಗಲೇ ಜಿಲ್ಲೆಯ ಮೂಲೆಮೂಲೆಗಳಿಂದ ಸ್ವರಚಿತ ಕಥೆ ಮತ್ತು ಕವನ ಆಹ್ವಾನಿಸಲಾಗಿದ್ದು ಇದರಲ್ಲಿ ಆಯ್ಕೆಯಾದ ಕವನ /ಕಥೆಗಳ ವಾಚನಕ್ಕೆ ಅವಕಾಶ ನೀಡಲಾಗಿದೆ.
– ಪವಿತ್ರ ಬಿದ್ಕಲ್‌ಕಟ್ಟೆ, ಭರತ್ ಭಾರದ್ವಾಜ್ ದ್ವಿತೀಯ ಪತ್ರಿಕೋದ್ಯಮ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.