ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಹಳೆಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ

ujire ಬೆಳ್ತಂಗಡಿ : ಜ್ಞಾನದ ಭಂಡಾರವಾಗಿರುವ ಪುಸ್ತಕಗಳು ಪರಸ್ಪರ ಹಂಚಿಕೆಯಾದಲ್ಲಿ ಅದರಲ್ಲಿರುವ ಅಮೂಲ್ಯ ಸಾಹಿತ್ಯ ಪ್ರಸಾರಗೊಂಡು ಅನೇಕರಿಗೆ ಪ್ರಯೋಜನವಾಗುತ್ತದೆ. ಈಗಾಗಲೇ ಕೆಲವಾರು ಮಂದಿ ಪುಸ್ತಕ ಪ್ರೇಮಿಗಳು ಸಂಗ್ರಹಿಸಿಕೊಂಡಿರುವ ಪುಸ್ತಕಗಳನ್ನು ಜನವರಿ 27, 28, 29ರಂದು ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ವಠಾರದಲ್ಲಿ ಜರುಗುವ 21ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶನ ಮತ್ತು ಕನಿಷ್ಠ ಬೆಲೆಗೆ ಮಾರಾಟ ಮಾಡುವ ಯೋಜನೆ ಹಾಕಿಕೊಳ್ಳಲಾಗಿರುತ್ತದೆ. ಕಲಿಕೆ ನಿರಂತರ, ಹೀಗಾಗಿ ಪುಸ್ತಕ ಪ್ರೇಮಿಗಳ ಮನೆಯಲ್ಲಿ ಸಂಗ್ರಹವಿರುವ ಪುಸ್ತಕಗಳನ್ನು ಸಾಹಿತ್ಯ ಸಮ್ಮೇಳನದ ವ್ಯವಸ್ಥಾಪಕರಿಗೆ ನೀಡಬಹುದು. ಹೀಗೆ ಸಂಗ್ರಹವಾಗುವ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಮೂಲಕ ಜ್ಞಾನದ ಹಸಿವನ್ನು ನೀಗಿಸುವ ವಿನೂತನ ಪ್ರಯತ್ನ ಮಾಡಲಾಗುತ್ತಿದೆ.  ಇದರೊಂದಿಗೆ ಪುಸ್ತಕ ಮಳಿಗೆಗಳಿಗೆ ಮತ್ತು ಇತರ ಮಾರಾಟ ಮಳಿಗೆಗಳಿಗೆ ಅವಕಾಶವಿದೆ. ಆದುದರಿಂದ ಸಾಹಿತ್ಯಾಸಕ್ತರಲ್ಲಿ ಇರುವ ಹಳೆಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಬಯಸಿದ್ದಲ್ಲಿ ಪ್ರದರ್ಶನ ಸಮಿತಿಯ ಸಂಯೋಜಕರಾಗಿರುವ ಕೃಷ್ಣ ಶೆಟ್ಟಿ (9449488976) ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.