ಉಜಿರೆ ಜಿಲ್ಲಾ ಸಾಹಿತ್ಯ ಸಮ್ಮೇಳನ ಭರದ ಸಿದ್ದತೆ

ujireಉಜಿರೆ : ಉಜಿರೆಯಲ್ಲಿ ಜನವರಿ 27 ರಿಂದ 28ರ ವರೆಗೆ ನಡೆಯಲಿರುವ 21ನೇ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಿದ್ದತೆಗಳು ಭರದಿಂದ ಸಾಗಿದ್ದು ದಿನಗಣನೆ ಆರಂಭವಾಗಿದೆ.
ವಾಗ್ಮಿ, ಚಿಂತಕ, ಸಂಶೋದಕ ಹಾಗೂ ಜನಪದ ವಿದ್ವಾಂಸ ಡಾ. ಚಿನ್ನಪ್ಪಗೌಡ ಅವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಸಮ್ಮೇಳನದ ಲಾಂಚನವನ್ನು ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಕೋರಿದ್ದಾರೆ.
ಸಮ್ಮೇಳನ ಅರ್ಥಪೂರ್ಣ ಹಾಗೂ ಸ್ಮರಣೀಯವಾಗಬೇಕೆಂಬ ಸಂಕಲ್ಪದೊಂದಿಗೆ ಉಜಿರೆಯಲ್ಲಿ ಸಿದ್ದತೆಗಳು ನಡೆದಿವೆ. ಸುಮಾರು 23 ಸಮಿತಿಗಳು ಈ ದೀಸೆಯಲ್ಲಿ ಕಾರ್ಯೊನ್ಮುಖವಾಗಿವೆ. ಸಮ್ಮೇಳನದ ದಿನದಂದು ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಿದ್ದತೆ ನಡೆದಿದ್ದು, ಸ್ಮರಣ ಸಂಚಿಕೆ, ಪುಸ್ತಕ ಮಳಿಗೆ, ಸಾಂಸ್ಕೃತಿಕ ಉತ್ಸವ, ವೈಚಾರಿಕ ಗೋಷ್ಠಿಗಳು ಸಮ್ಮೇಳನದ ಪ್ರಮುಖ ಅಂಶಗಳಾಗಲಿವೆ. ಸಾಹಿತ್ಯಾಭಿಮಾನಿಗಳಿಗೆ ಊಟೋಪಚಾರದ ವ್ಯವಸ್ಥೆ ಕೂಡಾ ಕಲ್ಪಿತವಾಗಲಿದೆ. ಬೆಳ್ತಂಗಡಿ ತಾಲೂಕಿನ ಸಾಹಿತ್ಯಾಭಿಮಾನಿಗಳು, ನಾಗರಿಕರು ಸಮ್ಮೇಳನದ ಯಶಸ್ಸಿಗೆ ಅತ್ಯುತ್ಸಾಹದ ಸಹಕಾರ ವ್ಯಕ್ತಪಡಿಸಿದ್ದು ಸ್ಥಳೀಯ ಶಾಸಕ ವಸಂತ ಬಂಗೇರ ಅವರ ನೇತೃತ್ವದಲ್ಲಿ ನಡೆದ ಸರಕಾರಿ ಅಧಿಕಾರಿಗಳ ಹಾಗೂ ತಾಲೂಕಿನ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲೂ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ವ್ಯಕ್ತವಾಗಿದೆ. ತಾಲೂಕಿನ ಶಿಕ್ಷಕ ಸಂಘಟನೆಯವರೂ ಕೂಡಾ ಸಮ್ಮೇಳನಕ್ಕೆ ಪೂರ್ಣ ಮನಸ್ಸಿನ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹಂತದ ಮಕ್ಕಳ ಪಾಲ್ಗೂಳ್ಳುವಿಕೆಯ ಪ್ರತ್ಯೇಕ ಮಕ್ಕಳ ಸಮ್ಮೇಳನ ಈ ಸಾರಿಯ ಸಾಹಿತ್ಯ ಸಮ್ಮೇಳನದ ವೈಶಿಷ್ಟ್ಯಗಳಲ್ಲೊಂದಾಗಿದ್ದು ಇದು ಜ.೨೮ ರಂದು ಬೆಳಗ್ಗೆ ಉಜಿರೆ ಕಾಲೇಜಿನ ಇಂದ್ರಪ್ರಸ್ಥದಲ್ಲಿ ನಡೆಯಲಿದೆ. ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಾಲಯದ ಆವರಣದಲ್ಲಿ ವಿಶಾಲ ಪ್ರದೇಶದಲ್ಲಿ ಸಮ್ಮೇಳನ ವೇದಿಕೆ, ಊಟದ ವ್ಯವಸ್ಥೆ, ಮಳಿಗೆಗಳ ಬಗ್ಗೆ ನೀಲನಕ್ಷೆ ರೂಪುಗೊಂಡಿದ್ದು ಜಿಲ್ಲೆಯಾದ್ಯಂತ ಬಹುಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.