ಸಂಘದ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ, ತಲಕಳ ಮೇಳದಿಂದ ಯಕ್ಷಗಾನ ಬಯಲಾಟ

Advt_NewsUnder_1
Advt_NewsUnder_1
Advt_NewsUnder_1

ಮಚ್ಚಿನ ದೇವರಗುಂಡಿಯಲ್ಲಿ 25ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆmachina majigalige sanmana copyಸಂಘದ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ

ಮಚ್ಚಿನ : ಇಲ್ಲಿನ ಒಳಪ್ರದೇಶವಾದ ದೇವರಗುಂಡಿ ಎಂಬಲ್ಲಿನ ಸಾರ್ವಜನಿಕ ಶ್ರೀ ದೇವರ ಕಟ್ಟೆಯ ಬಳಿ 25ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಪೂಜೆ ಪ್ರಾರಂಭಿಸಿದ ಪ್ರಮುಖ ನಾಲ್ವರನ್ನು ಗುರುತಿಸುವ ಕಾರ್ಯಕ್ರಮ ಜ.೧೪ ರಂದು ನಡೆಯಿತು.
ಇದರ ಅಂಗವಾಗಿ ನಡೆದ ಧಾರ್ಮಿಕ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಪ್ರಸ್ತುತ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಕೆ. ಗುರುಪ್ರಸಾದ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ್ದಲ್ಲದೆ, ಕೊನೆಯಲ್ಲಿ ಅಧ್ಯಕ್ಷೀಯ ಮಾತುಗಳನ್ನಾಡಿದರು.
ದಿಕ್ಸೂಚಿ ಭಾಷಣವನ್ನು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಮಿತಿ ಪ್ರ. ಕಾರ್ಯದರ್ಶಿಯೂ ಆಗಿರುವ ಕೆವಿಜಿ ದಂತ ಮಹಾವಿದ್ಯಾಲಯದ ದಂತ ವಿಭಾಗದ ಮುಖ್ಯಸ್ಥರೂ ಹಾಗು ಪ್ರೊಫೆಸರ್ ಡಾ| ಎಂ.ಎಂ. ದಯಾಕರ್ ನೆರವೇರಿಸಿದರು.
ಅತಿಥಿಗಳಾಗಿ ಹಾಲು ಒಕ್ಕೂಟದ ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ, ತಾ.ಪಂ. ಮಡಂತ್ಯಾರು ಕ್ಷೇತ್ರದ ಸದಸ್ಯೆ ವಸಂತಿ, ಮಚ್ಚಿನ ಗ್ರಾ.ಪಂ. ಉಪಾಧ್ಯಕ್ಷ ಚಂದ್ರಶೇಖರ ಬಿ.ಎಸ್, ಮಡಂತ್ಯಾರಿನ ಹಿರಿಯ ವೈದ್ಯ ಡಾ| ಕೆ.ಎಮ್. ಶೆಟ್ಟಿ ಶುಭ ಕೋರಿದರು. ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯೆ ಸೋಮಾವತಿ, ಶಿವರಾಮ ಕಾರಂದೂರು, ಶಿವಪ್ಪ ಮಾಣೂರು ಉಪಸ್ಥಿತರಿದ್ದರು. ಮಚ್ಚಿನ ಶ್ರೀ ಅನಂತೇಶ್ವರ ದೇವಸ್ಥಾನದ ಅನುವಂಶಿಯ ಆಡಳಿತ ಮೊಕ್ತೇಸರ ಎಂ. ಹರ್ಷ ಸಂಪಿಗೆತ್ತಾಯ ಶುಭಾಶಯ ಕೋರಿದರು. ಕುಮಾರಿ ಚರಿತ್ರಾ ಪ್ರಾರ್ಥನೆ ಹಾಡಿದರು. ಉಪಾಧ್ಯಕ್ಷ ರಮೇಶ್ ಮೂಲ್ಯ, ಕಾರ್ಯದರ್ಶಿ ಭಾಸ್ಕರ ಮೂಲ್ಯ, ಕೋಶಾಧಿಕಾರಿ ಧರ್ಣಪ್ಪ ಮೂಲ್ಯ ಸೇರಿದಂತೆ ಎಲ್ಲ ಸದಸ್ಯರು ಸಹಕಾರ ನೀಡಿದರು. ಸಹ ಕಾರ್ಯದರ್ಶಿ ಶೈಲೇಶ್ ಕುಮಾರ್ ಧನ್ಯವಾದವಿತ್ತರು.
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಸ್ಥಾಪಕರಿಗೆ ಗೌರವಾರ್ಪಣೆ :
ಸದ್ರಿ ಸ್ಥಳದಲ್ಲಿ ಅಯೋಧ್ಯೆಯ ವಿವಾದದ ಸಂದರ್ಭ ಕ್ಷೋಭೆಯಾಗದಿರಲು ಮತ್ತು ಜನರ ಭಾವನೆಯ ಒಗ್ಗಟ್ಟಿಗೆ ಸಂಬಂಧಿಸಿದಂತೆ ಪ್ರಾರಂಭಿಸಲಾಗಿರುವ ಈ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕೈಂಕರ್ಯ ಸ್ಥಾಪಿಸಿದ ಗುರುಪ್ರಸಾದ್, ರಾಮಣ್ಣ ಮೂಲ್ಯ, ಗಂಗಾಧರ ಕುಲಾಲ್ ಅವರನ್ನು ಸನ್ಮಾನಿಸಲಾಯಿತು. ಗೋಪಾಲ ಪೂಜಾರಿ ಕೋಲಾಜೆ ಕಾರ್ಯಕ್ರಮ ನಿರೂಪಿಸಿದರು. ರಾತ್ರಿ ತಲಕಳ ಶ್ರೀ ಕಾಶೀ ವಿಶ್ವನಾಥೇಶ್ವರ ಮಹಾಗಣಪತಿ ಯಕ್ಷಗಾನ ಮಂಡಳಿಯಿಂದ ಶ್ರೀ ಶಬರಿಮಲೆ ಅಯ್ಯಪ್ಪ ಯಕ್ಷಗಾನ ಬಯಲಾಟ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.