ಕುಂಬಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ: ಡಾ| ಅಣ್ಣಯ್ಯ ಕುಲಾಲ್

Kumba sambrama copyಕುಂಬಾರರ ಸೇವಾ ಸಂಘದಿಂದ ಮಾಗಣೆ ಸಭೆ ‘ಕುಂಭ ಸಂಭ್ರಮ’

ವೃತ್ತಿ ನಿರತರಿಗೆ, ನಾಟಿವೈದ್ಯರಿಗೆ, ಸಾಧಕರಿಗೆ ಸನ್ಮಾನ
ಈ ಸಂದರ್ಭದಲ್ಲಿ ಕುಂಬಾರಿಕೆ ವೃತ್ತಿ ಮಾಡುತ್ತಿರುವ ದಿ| ಮೋನಪ್ಪ ಕುಂಬಾರ (ಮರಣೋತ್ತರ) ಅವರ ಪತ್ನಿ ವಾರಿಜ ಮಾಯಿಲಪ್ಪ ಕುಂಬಾರ ಉಜಿರೆ, ಉಮಣ ಕುಂಬಾರ ನಾವೂರು, ಚೆನ್ನ ಕುಂಬಾರ ಬಂಗಾಡಿ, ಧರ್ಣಪ್ಪ ಕುಂಬಾರ ಚಾರ್ಮಾಡಿ, ಬೊಮ್ಮಣ್ಣ ಕುಂಬಾರ ಕಳೆಂಜ, ವೆಂಕಪ್ಪ ಕುಂಬಾರ ಬಂದಾರು, ಶಿವಪ್ಪ ಕುಂಬಾರ ಇಳಂತಿಲ, ಸೇಸಪ್ಪ ಪಟ್ರಮೆ, ವೆಂಕಪ್ಪ ಕುಂಬಾರ ಚಾರ್ವಾಕ, ಚೆನ್ನಪ್ಪ ಕುಂಬಾರ ಕಡಬ, ಉಮ್ಮಪ್ಪ ಕುಂಬಾರ ಅಲಂಕಾರು, ನಾಟಿ ವೈದ್ಯರಾದ ಜಿನ್ನಪ್ಪ ಕುಂಬಾರ ಚಾರ್ಮಾಡಿ, ಜಿನ್ನಪ್ಪ ಕುಂಬಾರ ಇಚಿಲಂಪಾಡಿ, ಮುಂಡಪ್ಪ ಕುಂಬಾರ ಕಡಬ, ಸಾಧಕಿ ಕು| ಹರ್ಷಿತಾ ಇವರನ್ನು ಸನ್ಮಾನಿಸಲಾಯಿತು. ಮಾಗಣೆಯ ಗುರಿಕಾರರನ್ನು, ಗ್ರಾ.ಪಂ ಅಧ್ಯಕ್ಷ, ಸದಸ್ಯರನ್ನು, ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ವೆಂಕಪ್ಪ ಬಂದಾರು ಮತ್ತು ತಿಮ್ಮಪ್ಪ ಚಾರ್ವಾಕ ಅನಿಸಿಕೆ ವ್ಯಕ್ತಪಡಿಸಿದರು.

ಬೆಳ್ತಂಗಡಿ : ಕುಂಬಾರರ ಸೇವಾ ಸಂಘ ಬೆಳ್ತಂಗಡಿ ಇದರ ವತಿಯಿಂದ ಸ್ವಜಾತಿ ಬಾಂಧವರ ಮಾಗಣೆ ಸಭೆ, ಕುಂಬಾರಿಕೆ ವೃತ್ತಿ ನಿರತ ಮಾಗಣೆಯ ಹಿರಿಯರಿಗೆ, ನಾಟೀ ವೈದ್ಯರಿಗೆ ಮತ್ತು ಸ್ವಜಾತಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಪ್ರತಿಭಾ ಪ್ರದರ್ಶನ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳ ಸಮ್ಮೀಳನ ಕುಂಭ ಸಂಭ್ರಮ-2017 ಜ.15ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ವೈಭವ ಪೂರ್ಣವಾಗಿ ನಡೆಯಿತು.
ಕಾರ್ಯಕ್ರಮವನ್ನು ಬೆಳ್ತಂಗಡಿ ಮಾಗಣೆಯ ಗುರಿಕಾರರಾದ ಅಣ್ಣಪ್ಪ ಕುಲಾಲ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ ಬೆಂಗಳೂರಿನ ಕಾರ್ಯಾಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್ ಅವರು ಮಾತನಾಡಿ, ಪಂಚಭೂತಗಳಿಲ್ಲದೆ ಕುಂಬಾರರ ಬದುಕಿಲ್ಲ, ಮಣ್ಣು, ನೀರು, ಅಗ್ನಿ, ಆಕಾಶ ಕುಂಬಾರಿಕೆಗೆ ಅಗತ್ಯ, ಕುಂಬಾರರು ಪ್ರಕೃತಿಯ ಜೊತೆ ವಾಸಿಸುವ ನಿಜವಾದ ಮಣ್ಣಿನ ಮಕ್ಕಳು ಎಂದರು. ಸರಕಾರದ ಯಾವುದೇ ಸೌಲಭ್ಯಗಳಿಲ್ಲದೆ ಕೊಪ್ಪದಲ್ಲಿ ಬದುಕಿ ಮಣ್ಣಿನ ಮಡಕೆ ಮಾಡಿ ಸಂಕಷ್ಟದಲ್ಲಿ ಜೀವಿಸುತ್ತಿರುವವರು ಕುಂಬಾರರು. ಎಲ್ಲಾ ರೀತಿಯಲ್ಲಿಯೂ ಕಡೆಗಣಿಸಲ್ಪಟ್ಟಿದ್ದಾರೆ. ಇವರು ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ. ಇಂತಹ ಕುಂಬಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕೆಲಸನ್ನು ಸರಕಾರ ಮಾಡಬೇಕು. ಕುಂಬಾರ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು. ಗುರಿಕಾರರು ಹಿಂದಿನ ಕಟ್ಟು ಪಾಡುಗಳನ್ನು ಉಳಿಸುವ ಕೆಲಸ ಮಾಡುತ್ತಿರುವುದರಿಂದ ನಮ್ಮ ಸಂಸ್ಕೃತಿ-ಸಂಪ್ರಾದಾಯಗಳು ಉಳಿದಿದೆ. ಇವರು ಧರ್ಮರಾಯನ ರೀತಿಯಲ್ಲಿ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಮೂಡ ನಂಬಿಕೆಯನ್ನು ಬಿಟ್ಟು ಮೂಲ ನಂಬಿಕೆಯೊಂದಿಗೆ ಸಂಘಟಿತರಾಗಬೇಕು, ಮೂಲ್ಯರು, ಕುಂಬಾರರು, ಕುಲಾಲರು ಒಟ್ಟು ಸೇರಿ ಸಂಘಟನೆಯನ್ನು ಬಲಪಡಿಸಿ, ಹೋರಾಟದ ಕಿಚ್ಚನ್ನು ಹೆಚ್ಚಿಸಿದಾಗ ಮಾತ್ರ ನಮ್ಮ ಹಕ್ಕೋತ್ತಾಯಗಳು ಈಡೇರಲು ಸಾಧ್ಯವಿದೆ ಎಂದು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಂಬಾರರ ಸೇವಾ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷ ಹೆಚ್. ಪದ್ಮಕುಮಾರ್ ಅವರು ಮಾತನಾಡಿ ಶ್ರಿಂಗೇರಿ ಕೊಪ್ಪ ಮೂಲದವರಾದ ಕುಂಬಾರರಿಗೆ ಮಣ್ಣೇ ಬದುಕಿನ ಜೀವಾಳವಾಗಿದೆ. ಅತ್ಯಂತ ನಿಷ್ಠಾವಂತರಾಗಿ, ಸತ್ಯವಂತರಾಗಿ ಬದುಕಿದ ಕುಂಬಾರು ಬೆಳ್ತಂಗಡಿಯಲ್ಲಿ ೭ ಮಾಗಣೆ ಮತ್ತು ಪುತ್ತೂರಿನಲ್ಲಿ ೫ ಮಾಗಣೆಯನ್ನು ಹೊಂದಿದ್ದಾರೆ. ನಾವು ಸಂಘಟಿತರಾಗಬೇಕು, ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸರಕಾರ ಕುಂಬಾರಿಕೆ ವೃತ್ತಿ ನಿರತರಿಗೆ ಮಾಶಾಸನ ಮತ್ತು ಕುಂಬಾರಿಗೆ ಸಹಾಯಧನ ನೀಡಬೇಕು ಈ ನಿಟ್ಟಿನಲ್ಲಿ ಈ ಸಮಾವೇಶ ನಡೆಯುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಯುವ ಘಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಹರೀಶ್ ಕಾರಿಂಜ ಮಾತನಾಡಿ ಮೂಲ್ಯ, ಕುಲಾಲ, ಕುಂಬಾರರು ಒಟ್ಟಾಗಿ ಸಂಘಟಿತರಾಗಿ ನಮ್ಮ ಬಲ ಪ್ರದರ್ಶನ ಮಾಡಿದಾಗ ಮಾತ್ರ ನಮಗೆ ಸೌಲಭ್ಯಗಳು ದೊರೆಯಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. ಮೂಲ್ಯರ ಯಾನೆ ಕುಂಬಾರರ ತಾಲೂಕು ಸಂಘದ ಉಪಾಧ್ಯಕ್ಷ ದಿನಕರ ಬಂಗೇರ ಮಾತನಾಡಿ ಕುಂಬಾರರ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖವಾದ ಮಾಗಣೆಯ ಮಹತ್ವ ಇಂದು ಈ ಸಮ್ಮೇಳನದ ಮೂಲಕ ಎಲ್ಲರಿಗೂ ತಿಳಿಯುವಂತಾಯಿತು. ನಾವೆಲ್ಲ ನಮ್ಮಲ್ಲಿರುವ ಭಿನ್ನಾಭಿಪ್ರಾಯವನ್ನು ಮರೆತು ಒಟ್ಟಾಗಿ ನಮ್ಮ ಶ್ರೋಯೋಭಿವೃದ್ಧಿಗೆ ಹೋರಾಟ ಮಾಡೋಣ ಎಂದು ಕರೆ ನೀಡಿದರು. ಶೈಕ್ಷಣಿಕ ಕ್ಷೇತ್ರ-ಡಾ| ರಮೇಶ್ ನೇತ್ರ ತಜ್ಞರು ಸರಕಾರಿ ಆಸ್ಪತ್ರೆ ಚಿಕ್ಕಮಗಳೂರು, ಸಾಮಾಜಿಕ ಕ್ಷೇತ್ರ- ಮಹೇಶ್ ಕೆ. ಗ್ರಾ.ಪಂ. ಸದಸ್ಯರು ಲಾಲ, ಧಾರ್ಮಿಕ ಕ್ಷೇತ್ರ-ವಿಜಯ ಗೌರವಾಧ್ಯಕ್ಷರು ಕುಂಭಶ್ರೀ ಗೆಳೆಯರ ಬಳಗ ಕಾಯರ್ತಡ್ಕ ಇವರು ಉಪನ್ಯಾಸ ನೀಡಿದರು. ಸಮಾರೋಪ ಸಮಾ ರಂಭದಲ್ಲಿ ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಬಂದಾರು ಗ್ರಾ.ಪಂ. ಅಧ್ಯಕ್ಷ ಉದಯ ಕುಮಾರ್ ಬಿ.ಕೆ, ಸಂಘಟನೆ ಕುರಿತು ಯಕ್ಷಗಾನ ಕಲಾವಿದ ಪದ್ಮನಾಭ ಇಳಂತಿಲ, ಮಹಿಳಾ ಸಬಲೀಕರಣ ಕುರಿತು ಸಂಘದ ಸದಸ್ಯೆ ಶ್ರೀಮತಿ ಉಷಾ ಸಂಜೀವ ಬಿ.ಹೆಚ್, ಕುಂಬಾರರ ಕಟ್ಟುಪಾಡುಗಳ ಕುರಿತು ಸಂಘದ ಗೌರವಾಧ್ಯಕ್ಷ ಸಂಜೀವ ಕುಂಬಾರ, ಮಹಿಳೆ ಮತ್ತು ಮಕ್ಕಳ ಪಾಲನೆ ಬಗ್ಗೆ ಸಂಜಯನಗರ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಜಲಜ ಸಂಜೀವ ಎನ್. ಇವರು ವಿಷಯ ಮಂಡಿಸಿದರು. ಈ ಸಂದರ್ಭದಲ್ಲಿ ಸಂಜೀವ ಕಾಯರ್ತಡ್ಕ ಇವರ ಮಾಹಿತಿಯಲ್ಲಿ ರಚನೆಯಾದ ಕುಂಬಾರರ ಕಟ್ಟುಪಾಡುಗಳು ಪುಸ್ತಕವನ್ನು ಪದ್ಮಕುಮಾರ್ ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ಜಗದೀಶ್, ಖಜಾಂಚಿ ಸಂಜೀವ ಬಿ.ಹೆಚ್, ಜೊತೆ ಕಾರ್ಯದರ್ಶಿ ಸಾಗರ್, ಸಂಘ ಟನಾ ಕಾರ್ಯದರ್ಶಿಗಳಾದ ದಯಾನಂದ ಮುತ್ತಪ್ಪ, ಜನಾರ್ದನ ಸಂಜೀವ ಎನ್. ಉಪಸ್ಥಿತ ರಿದ್ದರು. ಪಿಡ್ಲ್ಯೂಡಿ ಗುತ್ತಿಗೆದಾರ ದಯಾನಂದ ಸ್ವಾಗತಿಸಿ, ಹೆಚ್. ಪದ್ಮಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದೀಶ್ ಕುಂಬಾರ ವರದಿ ವಾಚಿಸಿದರು. ಬಿ.ಹೆಚ್. ರಾಜೀವ್ ಮತ್ತು ಚಿದಾನಂದ ಕಾರ್ಯಕ್ರಮ ನಿರೂಪಿಸಿದರು. ಸಾಗರ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.