ಉಜಿರೆ ಶ್ರೀ ಜನಾರ್ದನ ದೇವರಿಗೆ ನೂತನ ಚಂದ್ರ ಮಂಡಲ ರಥ ಸಮರ್ಪಣೆ

  ಉಜಿರೆ : ಉಜಿರೆಯ ಉದ್ಯಮಿ ಶ್ರೀ ದುರ್ಗಾ ನಿಲಯದ ಶ್ರೀಮತಿ ಸುನಂದಾ ಮತ್ತು ಯು. ಸದಾಶಿವ ಶೆಟ್ಟಿ ಮತ್ತು ಕುಟುಂಬಸ್ಥರು ಶ್ರದ್ಧಾ ಭಕ್ತಿಯೊಂದಿಗೆ ಉಜಿರೆಯ ಶ್ರೀ ಜನಾರ್ದನ ದೇವರಿಗೆ ಸೇವಾ ರೂಪವಾಗಿ ನೂತನ ಚಂದ್ರ ಮಂಡಲ ರಥವನ್ನು ಸಮರ್ಪಿಸಲು ಸಂಕಲ್ಪ ಮಾಡಿದ್ದಾರೆ.
ಅತ್ಯಂತ ವಿನೂತನವಾಗಿ ಕಾಷ್ಠ ಶಿಲ್ಪಗಳ ಆಕರ್ಷಕ ಕೆತ್ತನೆಗಳೊಂದಿಗೆ ನಿರ್ಮಿಸಲಾದ ಈ ನೂತನ ಚಂದ್ರಮಂಡಲ ರಥವನ್ನು ದೇವರಿಗೆ ಸಮರ್ಪಿಸುವ ಕಾರ್ಯಕ್ರಮ ಇಂದು (ಜ.19ರಂದು) ಗುರುವಾರ ಸಂಜೆ ಶುಭ ಮೂಹೂರ್ತದಲ್ಲಿ ಸದಾಶಿವ ಶೆಟ್ಟಿ, ಅವರ ಧರ್ಮಪತ್ನಿ ಶ್ರೀಮತಿ ಸುನಂದಾ, ಪುತ್ರರಾದ ರಮೇಶ್ ಶೆಟ್ಟಿ, ಉಮೇಶ್ ಶೆಟ್ಟಿ, ಮಕ್ಕಳು, ಅಳಿಯಂದಿರು ಹಾಗೂ ಕುಟುಂಬಸ್ಥರು ಹಾಗೂ ಭಕ್ತರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಪೂರ್ವಾಭಾವಿಯಾಗಿ ಇಂದು ಬೆಳಗ್ಗೆ ಗಂಟೆ 9ಕ್ಕೆ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಬಳಿಯ ಶ್ರೀ ದುರ್ಗಾ ವುಡ್ ಇಂಡಸ್ಟ್ರೀಸ್‌ನಿಂದ ವಾಹನ ಜಾಥಾದೊಂದಿಗೆ ಚಂದ್ರ ಮಂಡಲ ರಥವನ್ನು ಉಜಿರೆಯ ದುರ್ಗಾ ನಿಲಯಕ್ಕೆ ತರಲಾಯಿತು. ಅಲ್ಲಿಂದ ಸಂಜೆ 4.30ಕ್ಕೆ ಭವ್ಯ ಮೆರವಣಿಗೆಯಲ್ಲಿ ಉಜಿರೆ ಜನಾರ್ದನ ದೇವಸ್ಥಾನಕ್ಕೆ ತರಲಾಗುವುದು. ಈ ಸಂದರ್ಭ ನಡೆಯುವ ಧರ್ಮ ಸಭೆಯಲ್ಲಿ ವಜ್ರದೇಹಿ ಮಠ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಯ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ, ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಇವರ ಗೌರವ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ. ಜ.೨೦ರಂದು ಶುಕ್ರವಾರ ರಾತ್ರಿ ನೂತನ ಚಂದ್ರಮಂಡಲ ರಥದಲ್ಲಿ ದೇವರ ರಥೋತ್ಸವ ಕಾರ್ಯಕ್ರಮ ಜರುಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.