ಮೇಲಂತಬೆಟ್ಟು ಭಗವತಿ ಕ್ಷೇತ್ರದಲ್ಲಿ ಶ್ರೀ ಸರ್ವೇಶ್ವರಿ ದೇವಿಯ ಪೂಜೆ

Melanthabettu sarveshwari pooje copyಮೇಲಂತಬೆಟ್ಟು : ಮೇಲಂತಬೆಟ್ಟು ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಶ್ರೀ ಸರ್ವೇಶ್ವರಿ ದೇವಿಯ ಪೂಜೆ ಕೇರಳ ಶಿವಗಿರಿ ಮಠ ವರ್ಕಳದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ಅಪಾರ ಸಂಖ್ಯೆಯ ಭಕ್ತರ ಉಪಸ್ಥಿತಿಯಲ್ಲಿ ವೈಭವ ಪೂರ್ಣವಾಗಿ ಜರುಗಿತು.
ಸಂಜೆ 5 ಗಂಟೆಯಿಂದ ಶ್ರೀ ದೇವಿ ಭಗವತಿ ಅಮ್ಮ ಭಜನಾ ಮಂಡಳಿ ಮತ್ತು ಶ್ರೀ ಕ್ಷೇ.ಧ.ಗ್ರಾ.ಯೋಜನೆ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಸ್ವಾಮೀಜಿರವರ ನೇತೃತ್ವದಲ್ಲಿ ಸರ್ವೇಶ್ವರಿ ದೇವಿಯ ಪೂಜೆ ಜರುಗಿತು. ಈ ಸಂದರ್ಭ ಆಶೀರ್ವಚನ ನೀಡಿದ ಸ್ವಾಮೀಜಿಯವರು ಸರ್ವೇಶ್ವರಿ ದೇವಿಯ ಪೂಜೆಯಿಂದ ನಮ್ಮ ಜೀವನದ ಕಷ್ಟ, ನಷ್ಟಗಳು ದೂರವಾಗಿ ನಮ್ಮಲ್ಲಿ ಆತ್ಮವಿಶ್ವಾಸ ಸಕಲ ಅಷ್ಟೈಶ್ವರ್ಯಗಳು ನೆಲೆಯಾಗುತ್ತದೆ. ಮನೆಯಲ್ಲಿ ಬೆಳೆ ಧವಸ ಧಾನ್ಯಾಧಿಗಳು ತುಂಬಿ ನಮ್ಮ ಸಂಸಾರದಲ್ಲಿ ಸುಖ, ನೆಮ್ಮದಿ ನೆಲೆಯಾಗುತ್ತದೆ. ವಿವಾಹ ತೊಂದರೆಗಳು, ಮನಃಕ್ಲೇಶ, ಧನವ್ಯಯ ಮೊದಲಾದ ಸಂಕಷ್ಟಗಳು ನಿವಾರಣೆಯಾಗುತ್ತದೆ ಎಂದು ಹೇಳಿ ಮನೆಯಲ್ಲಿ ಮಹಿಳೆಯರು ಆಚರಿಸಿಕೊಂಡು ಬರಬೇಕಾದ ನಿಯಮಗಳು, ಸಾಂಪ್ರಾದಾಯಗಳನ್ನು ವಿವರಿಸಿದರು. ಮಹಿಳೆಯವರು ಹೆಚ್ಚಿನ ಸಂಖ್ಯೆಯಲ್ಲಿ ಪೂಜಾ ಕಾರ್ಯದಲ್ಲಿ ಭಾಗವಹಿಸಿದರು.
ರಾತ್ರಿ ೮.೩೦ಕ್ಕೆ ವಿಶೇಷವಾಗಿ ರಂಗಪೂಜೆ, ಶ್ರೀ ಅಯ್ಯಪ್ಪ ಸ್ವಾಮಿ ಪೂಜೆ, ಸಂಕ್ರಾಂತಿ ಪೂಜೆ, ಶ್ರೀ ದೇವಿಗೆ ಹೂವಿನ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ರಘುನಾಥ ಶಾಂತಿ ಅರ್ಚಕರು ಬೆಳ್ತಂಗಡಿ, ಹೆಜಮಾಡಿ ಮಹೇಶ್ ಶಾಂತಿ ಅರ್ಚಕರು, ರಾಜೇಶ್ ಶಾಂತಿ ಇಂದಬೆಟ್ಟು, ಕ್ಷೇತ್ರದ ಪ್ರಧಾನ ಅರ್ಚಕ ಯಶವಂತ ಶಾಂತಿ ಪೂಜಾ ವಿಧಿಗಳನ್ನು ನೆರವೇರಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ, ಪೂಜಾ ಸಮಿತಿ ಅಧ್ಯಕ್ಷ ರಮೇಶ್ ಬಂಗೇರ ಅಂಕಾಜೆ, ಭಜನಾ ಸಮಿತಿ ಅಧ್ಯಕ್ಷ ತಿಮ್ಮಪ್ಪ ಪೂಜಾರಿ ಮಾಪಾಲಾಡಿ, ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಊರ ಪರವೂರ ಭಕ್ತರು, ಸರಕಾರಿ ಇಲಾಖಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.