ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಗೆ ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

  ಗುರುವಾಯನಕೆರೆ : ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ನಿಟ್ಟೆ ಶಿಕ್ಷಣ ಸಂಸ್ಥೆ ಕೊಡಮಾಡುತ್ತಿರುವ ದಿ|| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಅತ್ಯುತ್ತಮ ಶಾಲಾ ಪ್ರಶಸ್ತಿಗೆ ಸರಕಾರಿ ಪ್ರೌಢ ಶಾಲೆ, ಗುರುವಾಯನಕೆರೆಗೆ ಆಯ್ಕೆಯಾಗಿದ್ದು, ಪ್ರಶಸ್ತಿಯೊಂದಿಗೆ 10 ಲಕ್ಷ ರೂ. ನಗದು ಪುರಸ್ಕಾರವನ್ನು ನೀಡಲಾಗುತ್ತಿದೆ.
ಕಳೆದ 5 ವರ್ಷಗಳಿಂದ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ 100% ಫಲಿತಾಂಶವನ್ನು ದಾಖಲಿಸುತ್ತಿರುವ ನಮ್ಮೂರ ಪ್ರೌಢ ಶಾಲೆ ಗುರುವಾಯನಕೆರೆ, ಅತ್ಯುತ್ತಮ ಗುಣಮಟ್ಟದ ಶಿಕ್ಷಣ, ಶಿಸ್ತು, ಕಲಿಕಾ ಶ್ರದ್ಧೆಯುಳ್ಳ ತಾಲೂಕಿನ ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಕಳೆದ ವರ್ಷದ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಹಾಜರಾದ 82 ವಿದ್ಯಾರ್ಥಿಗಳಲ್ಲಿ 81 ವಿದ್ಯಾರ್ಥಿಗಳು ಪ್ರಥಮ ದರ್ಜೆ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು ಫಲಿತಾಂಶದ ಗುಣಮಟ್ಟದ ಅಂಕಿ ಅಂಶಗಳಲ್ಲಿ ದಕ್ಷಿಣ ಕನ್ನಡದ ಸರಕಾರಿ ಪ್ರೌಢ ಶಾಲೆಗಳಲ್ಲಿಯೇ ಅತ್ಯುತ್ತಮ ಗುಣಮಟ್ಟದ ಫಲಿತಾಂಶ ಪಡೆದ ಶಾಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶಿಕ್ಷಕರ ನಿಷ್ಠೆ, ಕಾರ್ಯಶ್ರದ್ಧೆ, ವಿದ್ಯಾರ್ಥಿಗಳ ಶಿಸ್ತು, ಚಟುವಟಿಕೆ ಆಧಾರಿತ ಕಲಿಕೆ ಹಾಗೂ ಚಿತ್ರಕಲಾ ಅಧ್ಯಾಪಕ ವಿ.ಕೆ. ವಿಟ್ಲ ಅವರ ಕಲಾ ಕುಂಚದಲ್ಲಿ ಅರಳಿರುವ ಶಾಲೆಯ ವರ್ಣಮಯ ಚಿತ್ರಗಳುಳ್ಳ ಗೋಡೆಗಳು ಹಾಗೂ ಸ್ವಚ್ಛ, ನಿರ್ಮಲ ವಠಾರ ಎಲ್ಲರ ಮನಸೂರೆಗೊಳ್ಳುತ್ತದೆ.
ಪ್ರಕೃತ 240 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಮುಖ್ಯೋಪಾಧ್ಯಾಯರ ಹುದ್ದೆ, ಗಣಿತ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯೊಂದಿಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳು ಖಾಲಿ ಇದೆ. ಅದಾಗ್ಯೂ ಶಾಲೆಯಲ್ಲಿ ಭರಪೂರ ಶಿಕ್ಷಣೋತ್ಸಾಹ, ಚಟುವಟಿಕೆ, ಸಮೃದ್ಧ ವಾತಾವರಣ ಇದೆ. ಈಗಾಗಲೇ ಈ ಶಾಲೆಯು ಹಲವಾರು ಪ್ರಶಸ್ತಿ ಅಭಿನಂದನೆಗಳಿಗೆ ಭಾಜನವಾಗಿದೆ. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ವಸಂತ ಬಂಗೇರ, ಕುವೆಟ್ಟು ಕ್ಷೇತ್ರ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಮಮತಾ ಎಂ. ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಗೋಪಿನಾಥ ನಾಯಕ್ ಹಾಗೂ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಕೋಟ್ಯಾನ್, ಎಸ್‌ಡಿಎಂಸಿ ವೃಂದ, ಶಾಲಾಭಿಮಾನಿಗಳು ಹಾಗೂ ಉದಾರದಾನಿಗಳಾಗಿರುವ ಅಲ್ಫೋನ್ಸ್ ಫ್ರಾಂಕೊ ಮತ್ತು ಆನಂದ ಶೆಟ್ಟಿ ಐಸಿರಿ ಅವರ ನೆರವನ್ನು ಶಾಲಾ ಶಿಕ್ಷಕವೃಂದ ನೆನೆದುಕೊಳ್ಳುತ್ತದೆ. ಅಲ್ಲದೆ ಶಾಸಕರು ಪ್ರತೀವರ್ಷ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಿ ಶಿಕ್ಷಕರನ್ನು ಮತ್ತು ಮಕ್ಕಳನ್ನು ಇನ್ನಷ್ಟು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಾ ಬರುತ್ತಿದ್ದಾರೆ.
ಶಾಶ್ವತ ಕಾಮಗಾರಿಗೆ ಅನುದಾನ ಬಳಕೆಗೆ ನಿರ್ಧಾರ:
ಇದೀಗ ಪ್ರಶಸ್ತಿಯೊಂದಿಗೆ ಶಾಲೆಗೆ ದೊರೆತಿರುವ ರೂ.10 ಲಕ್ಷ ಅನುದಾನವನ್ನು ಸಮುದಾಯದ ಸಹಭಾಗಿತ್ವದಲ್ಲಿ ಸುಸಜ್ಜಿತ ಸಭಾಂಗಣ, ಶಾಲಾ ಕ್ರೀಡಾಂಗಣ ವಿಸ್ತರಣೆ, ಆಧುನಿಕ ತಂತ್ರಜ್ಞಾನ ಅಳವಡಿಸಿ ಇ-ಇಜಟಿ ತರಗತಿ, ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ನೀಡುವ ಯೋಜನೆಗಳನ್ನು ಹಮ್ಮಿಕೊಂಡು ವಿನಿಯೋಗಿಸುವ ಕ್ರಮಗಳನ್ನು ಮಂಡಳಿ ಕೈಗೊಳ್ಳಲು ತೀರ್ಮಾನ ಮಾಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.