ಸೈಂಟ್ ಲಾರೆನ್ಸ್ ಪ್ರಧಾನ ವಿದ್ಯಾಲಯ ಸ್ವಚ್ಛತಾ ಆಂದೋಲನ

hunsekatte  saint lorence copyಹುಣ್ಸೆಕಟ್ಟೆ : ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಕರೆಯಂತೆ ರಾಜ್ಯ ವ್ಯಾಪ್ತಿ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಆಂದೋಲನದ ಪರವಾಗಿ ಪ್ರಗತಿಬಂಧು, ಜ್ಞಾನ ವಿಕಾಸ, ಸ್ವಸಹಾಯ ಸಂಘಗಳ ಒಕ್ಕೂಟ ಬೆಳ್ತಂಗಡಿ ಬಿ ಹುಣ್ಸೆಕಟ್ಟೆ ಇದರ ವತಿಯಿಂದ ಸೈಂಟ್ ಲಾರೆನ್ಸ್ ಪ್ರಧಾನ ವಿದ್ಯಾಲಯ ಸುದೆಮುಗೇರು ಬೆಳ್ತಂಗಡಿ, ಇಲ್ಲಿ ಸ್ವಚ್ಛತಾ ಕಾರ‍್ಯಕ್ರಮವನ್ನು ಮಾಡಲಾಯಿತು.
ಕಾರ್ಯಕ್ರಮಕ್ಕೆ ಸೈಂಟ್ ಲಾರೆನ್ಸ್ ಚರ್ಚ್‌ನ ಧರ್ಮಗುರುಗಳಾದ ಫಾ| ಬಿನೋಯಿ ಜೋಸೆಫ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ದಯಾನಂದ ಕೋಟ್ಯಾನ್, ಸೇವಾ ಪ್ರತಿನಿಧಿ ಶ್ರೀಮತಿ ಜಯಶೀಲ, ಒಕ್ಕೂಟದ ಮಾಜಿ ಉಪಾದಕ್ಷೆ ಪ್ರೇಮ ದೇವಾಡಿಗ, ನವಜೀವನ ಸಮಿತಿ ಹುಣ್ಸೆಕಟ್ಟೆ ಇದರ ಅಧ್ಯಕ್ಷ ರಾಮಣ್ಣ ಪೂಜಾರಿ, ಜನಜಾಗೃತಿ ಗ್ರಾಮ ಸಮಿತಿ ಹುಣ್ಸೆಕಟ್ಟೆ ಇದರ ಅಧ್ಯಕ್ಷ ಜನಾರ್ಧನ ಸುದೆಮುಗೇರು ಹಾಗೂ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು, ಚರ್ಚ್‌ನ ವಠಾರವನ್ನು ಸ್ವಚ್ಛಗೊಳಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.