ನಾಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಹಯೋಗದಲ್ಲಿ ಸ್ವಚ್ಚ ಶ್ರದ್ಧಾ ಕೇಂದ್ರ-ಸ್ವಚ್ಚ ಭಾರತ ಅಭಿಯಾನದಲ್ಲಿ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ಮಜಲು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ವಲಯ ಮೇಲ್ವಿಚಾರಕ ಸುರೇಶ್ ಗೌಡ, ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ, ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಉಪಾಧ್ಯಕ್ಷರಾದ ಸದಾಶಿವ ನಾಕ್, ಕೇಶವ ಪೂಜಾರಿ, ಸಾರ್ವಜನಿಕ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಸುಧಾಕರ ಮಜಲು, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಲಿಂಗಪ್ಪ ಗೌಡ, ಪುರಂದರ ಶೆಟ್ಟಿ, ಶ್ರೀ ದುರ್ಗಾಶಕ್ತಿ ಮಾತೃಮಂಡಳಿ ಅಧ್ಯಕ್ಷೆ ವಿಜಯ ಪುರಂದರ ಶೆಟ್ಟಿ, ದೇವಸ್ಥಾನದ ಮೆನೇಜರ್ ಗಿರೀಶ್ ಶೆಟ್ಟಿ, ಸೇವಾ ಪ್ರತಿನಿಧಿಗಳಾದ ವಿನೋದಾ, ನಳಿನಿ ಇದ್ದರು. ದೇವಸ್ಥಾನದ ಗರ್ಭಗುಡಿಯ ಹೊರಭಾಗ, ಸುತ್ತುಪೌಳಿ, ಹೋರಾಂಗಣ, ಅನ್ನಛತ್ರ, ಸೇರಿದಂತೆ ದೇವಳದ ಸುತ್ತಮುತ್ತವನ್ನು ಸ್ವಚ್ಚಗೊಳಿಸಲಾಯಿತು.