ನಾಳ: ಶ್ರೀ ದುರ್ಗಾಶಕ್ತಿ ಮಾತೃ ಮಂಡಳಿ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

16Nala copyಬೆಳ್ತಂಗಡಿ: ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಹಿಳೆಯರ ಸಂಘಟನೆಯನ್ನು ಮಾಡುವ ದೃಷ್ಟಿಯಿಂದ ಆರಂಭವಾದ ಶ್ರೀ ದುರ್ಗಾಶಕ್ತಿ ಮಾತೃ ಮಂಡಳಿಯ ಉದ್ಘಾಟನೆ ದೇವಸ್ಥಾನದಲ್ಲಿ ನೆರವೇರಿತು.

ಗೇರುಕಟ್ಟೆಯ ಗೀತಾ ಅನಂತ್ ಭಟ್ ಶ್ರೀ ದುರ್ಗಾಶಖ್ತಿ ಮಾತೃ ಮಂಡಳಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ದೇವಸ್ಥಾನದ ವ್ಯವಸ್ಥಪನಾ ಸಮಿತಿ ಅಧ್ಯಕ್ಷ ವಸಂತ ಮಜಲು ಮಾತನಾಡಿ, ದೇವಸ್ಥಾನದ ಅಭಿವೃದ್ದಿಯಲ್ಲಿ ಮಹಿಳೆಯರ ಪಾತ್ರವೂ ಇದೆ. ಮನೆಯಲ್ಲಿ ತಾಯಿ ಹೇಗೆ ಮಕ್ಕಳನ್ನು ಸಂಸ್ಕಾರಯುತರನ್ನಾಗಿಸಲು ಅಗತ್ಯವೋ ಹಾಗಯೇ ದೇವಸ್ಥಾನದಲ್ಲಿಯೂ ಎಲ್ಲ ಮಹಿಳೆಯರು ತಮ್ಮ ಮಕ್ಕಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಬರುವ ಮೂಲಕ ಮಕ್ಕಳಿಗೆ ದೇವರ ಬಗ್ಗೆ ಭಕ್ತಿ ಉಂಟು ಮಾಡಬೇಕು ಎಂದರು.
ಶ್ರೀ ದುರ್ಗಾಶಕ್ತಿ ಮಾತೃ ಮಂಡಳಿ ಅಧ್ಯಕ್ಷ ವಿಜಯ ಪುರಂದರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಂಬಾ ಬಿ. ಆಳ್ವ, ಭಾರತಿ ವಂಜಾರೆ, ವಿಜಯ ಪ್ರಸಾದ್ ಇದ್ದರು.
ವಿನೋದ ಸ್ವಾಗತಿಸಿದರು. ಸುಗುಣಾ ಎಸ್. ಆಳ್ವ ಕಾರ್ಯಕ್ರಮ ನಿರೂಪಿಸಿ, ವಿನೋಧಿನಿ ವಂದಿಸಿದರು.
ಬಳಿಕ ದೀಶಕ್ತಿ ಮಹಿಳಾ ಯಕ್ಷ ಬಳಗ ಪುತ್ತೂರು ಇವರಿಂದ ವಿದುರಾತಿಥ್ಯ- ಧುರವೀಳ್ಯ ಯಕ್ಷಗಾನ ತಾಳಮದ್ಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ರೈ ಕಕ್ಕೆಪದವು, ಕಾವ್ಯಶ್ರೀ ಅಜೇರು, ಚೆಂಡೆ ಮದ್ದಳೆಯಲ್ಲಿ ಶಿತಿಕಂಠ ಭಟ್, ಶ್ರೀಮತಿ ನಾಯಕ್ ಅಜೇರು, ಮುಮ್ಮೇಳದಲ್ಲಿ ಪದ್ಮಾ ಕೆ.ಆರ್. ಆಚಾರ್ಯ, ಸುಮಂಗಳಾ ರತ್ನಾಕರ್, ವೀಣಾ ನಾಗೇಶ್ ತಂತ್ರಿ, ಜಯಲಕ್ಷ್ಮೀ ವಿ. ಭಟ್, ವೀಣಾ ಸರಸ್ವತೀ ನಿಡ್ವಣ್ಣಾಯ, ಪ್ರೇಮಾ ಕಿಶೋರ್, ಶ್ರೀವಿದ್ಯಾ ಜೆ.ರಾವ್ ಭಾಗವಹಿಸಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.