ಜ.13-15 ಬೆಳ್ತಂಗಡಿ ತಾಲೂಕು ಮಟ್ಟದ ಸ್ಕೌಟ್ ರ‍್ಯಾಲಿ

  ಮಡಂತ್ಯಾರು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಡಂತ್ಯಾರು ಸಂಸ್ಥೆಯ 2016-17ರ ಸಾಲಿನ ರೋವರ‍್ಸ್ ರೇಂಜರ‍್ಸ್ ಸಮಾಗಮ, ಸ್ಕೌಟ್ಸ್ ಗೈಡ್ಸ್ ಮೇಳ ಮತ್ತು ಕಬ್ಸ್ ಬುಲ್‌ಬುಲ್ಸ್ ಉತ್ಸವವು ಜ.13 ರಿಂದ 15ರ ವರೆಗೆ ಮಚ್ಚಿನ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆಯಲಿದೆ.
ಈ ರ‍್ಯಾಲಿಯನ್ನು ಜ.13 ರಂದು ಸಂಜೆ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸರಕಾರದ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯೆ ಮಮತಾ ಎಂ. ಶೆಟ್ಟಿ, ತಾ.ಪ ಸದಸ್ಯೆ ವಸಂತಿ ಎಂ, ಮಚ್ಚಿನ ಗ್ರಾ.ಪಂ ಅಧ್ಯಕ್ಷೆ ಹರ್ಷಲತಾ, ದ.ಕ ಜಿಲ್ಲಾ ಸ್ಕೌಟ್ ಆಯುಕ್ತ ಎನ್.ಜಿ.ಮೋಹನ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಜಯಣ್ಣ ಹೆಚ್ ಮತ್ತು ಮಚ್ಚಿನ ಗ್ರಾ.ಪಂ ಸರ್ವ ಸದಸ್ಯರು ಭಾಗವಹಿಸಲಿದ್ದಾರೆ.
ಜ.14 ರ ಸಾಯಂಕಾಲ ನಡೆಯಲಿರುವ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಚ್ಚಿನ ಗ್ರಾ.ಪಂ ಉಪಾಧ್ಯಕ್ಷ ಚಂದ್ರಶೇಖರ್, ಸದಸ್ಯರಾದ ಚಂದ್ರಕಾಂತ ನಿಡ್ಡಾಜೆ, ಕಮಲ, ಸೋಮಾವತಿ ಹಾಗೂ ಬೆಳ್ತಂಗಡಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಸುರೇಂದ್ರ ಎಸ್ ಭಾಗವಹಿಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಸ್ಕೌಟ್ ಸಂಸ್ಥೆಯ ಅಧ್ಯಕ್ಷರಾಗಿರುವ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ವಹಿಸಿಕೊಳ್ಳಲಿದ್ದಾರೆ.
ಈ ರ‍್ಯಾಲಿಯಲ್ಲಿ ಧ್ವಜಸ್ಥಂಭ ರಚನೆ, ಸುಧಾರಿತ ಗುಢಾರ ರಚನೆ, ಗ್ಯಾಡ್ಜೆಟ್ ರಚನೆ, ಧ್ವಜವಂದನೆ, ಶಿಬಿರಾಗ್ನಿ, ಬಿ.ಪಿ ವ್ಯಾಯಾಮ, ರಸಪ್ರಶ್ನೆ, ಗಾಳಿಪಟ ತಯಾರಿ, ಬೆಂಕಿ ಬಳಸದೆ ಅಡುಗೆ ತಯಾರಿ, ಕರಕುಶಲ ವಸ್ತುಗಳ ತಯಾರಿ, ದೇಶಭಕ್ತಿ ಗೀತೆ, ಸಾಹಸಮಯ ಚಟುವಟಿಕೆಗಳು, ನಗರ ಮೆರವಣಿಗೆ, ಸರ್ವಧರ್ಮ ಪ್ರಾರ್ಥನೆಗಳಂತಹ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿದೆ ಎಂದು ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಗಣೇಶ್ ನಾಯಕ್, ಸ್ಕೌಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ ಶಾಂತಾರಾಮ ಪ್ರಭು, ಕೋಶಾಧಿಕಾರಿ ರವೀಂದ್ರ ರಾವ್, ರ‍್ಯಾಲಿ ನಿರ್ದೇಶಕರಾದ ಬೇಬಿ ಸುಪ್ರಿತಾ ಬಿ.ಎನ್, ಜತೆ ಕಾರ್ಯದರ್ಶಿ ಧರಣೇಂದ್ರ ಕೆ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.