ಜ.14: ಭಗವತಿ ಕ್ಷೇತ್ರದಲ್ಲಿ ಸರ್ವೇಶ್ವರೀ ದೇವಿ ಪೂಜೆ

ಮೇಲಂತಬೆಟ್ಟು : ಮೇಲಂತಬೆಟ್ಟು ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಶ್ರೀ ಸರ್ವೇಶ್ವರಿ ದೇವಿಯ ಪೂಜೆ ಕೇರಳ ಶಿವಗಿರಿ ಮಠ ವರ್ಕಳದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ಕ್ಷೇತ್ರದ ವಠಾರದಲ್ಲಿ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ ತಿಳಿಸಿದ್ದಾರೆ.
ಅಂದು ರಾತ್ರಿ 8.30ಕ್ಕೆ ವಿಶೇಷವಾಗಿ ರಂಗಪೂಜೆ, ಶ್ರೀ ಅಯ್ಯಪ್ಪ ಸ್ವಾಮಿ ಪೂಜೆ, ಸಂಕ್ರಾಂತಿ ಪೂಜೆ, ಶ್ರೀ ದೇವಿಗೆ ಹೂವಿನ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 5ಗಂಟೆಯಿಂದ ಶ್ರೀ ದೇವಿ ಭಗವತಿ ಅಮ್ಮ ಭಜನಾ ಮಂಡಳಿ ಮತ್ತು ಶ್ರೀ ಕ್ಷೇ.ಧ.ಗ್ರಾ.ಯೋಜನೆ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಲಿದೆ. ಸರ್ವೇಶ್ವರಿ ದೇವಿಯ ಪೂಜೆಯಲ್ಲಿ ಮಹಿಳೆಯವರು ಭಾಗವಹಿಸಬಹುದು. ಈ ಎಲ್ಲಾ ಕಾರ್ಯಕ್ರಮದಲ್ಲಿ ಭಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ವಿನಂತಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.