ಉಜಿರೆ : ನೀನಾಸಂ ನಾಟಕಗಳು

  ಉಜಿರೆ: ಇಲ್ಲಿಯ ಸಮೂಹ ಸಂಸ್ಥೆಯ ಜ.30 ಹಾಗೂ 31ರಂದು ಉಜಿರೆಯಲ್ಲಿ ಕಾಲಂದುಗೆ ಗೆಜ್ಜೆ ಹಾಗೂ ಅತ್ತದರಿ ಇತ್ತಪುಲಿ ನಾಟಕಗಳು ಪ್ರದರ್ಶನಗೊಳ್ಳಲಿದೆ. ಸಮೂಹ ರಜತಮಹೋತ್ಸವ ವರ್ಷ (1992-2017) ವಿವಿಧ ರೀತಿಯ ಚಟುವಟಿಕೆಗಳನ್ನು ಈಗಾಗಲೇ ಆಯೋಜಿಸಲಾಗಿದೆ. ನೃತ್ಯ, ನಾಟಕ, ಸಂಗೀತ, ಯಕ್ಷಗಾನ, ಮಕ್ಕಳ ನಾಟಕೋತ್ಸವ, ರಂಗತರಬೇತಿ ಶಿಬಿರ ಇತ್ಯಾದಿಗಳು. ವಿಶೇಷವಾಗಿ ಎ.20 ರಿಂದ 4 ದಿನಗಳ ಅವಧಿಯ ದಕ್ಷಿಣೋತ್ತರ ಜಿಲ್ಲೆಗಳ ಹೈಸ್ಕೂಲ್ ವಿದ್ಯಾರ್ಥಿಗಳ ಪ್ರತಿಭಾ ವಿಕಾಸಕ್ಕಾಗಿ ಮಕ್ಕಳ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಎಲ್ಲಾ ಹೈಸ್ಕೂಲ್‌ಗಳ ವಿದ್ಯಾರ್ಥಿಗಳಿಗೆ ಪ್ರಥಮ ಆಧ್ಯತೆ ನೀಡಲಾಗುವುದು ಎಂದು ಸಮೂಹ ಉಜಿರೆ ಪ್ರಕಟಣೆಯಲ್ಲಿ ತಿಳಿಸಿದೆ.
ವಿವರಗಳಿಗೆ ಸಂಪರ್ಕಿಸಿ: ಸುನಿಲ್ ಪಂಡಿತ, ಸಂಚಾಲಕರು, ಮಕ್ಕಳ ನಾಟಕೋತ್ಸವ ಸಮಿತಿ 9449191327 ಅಥವಾ ಎಸ್.ಜಿ. ಭಟ್ 9448935144.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.