ಜ.15: ಕುಂಭ ಸಂಭ್ರಮ-2017

  ಬೆಳ್ತಂಗಡಿ: ಕುಂಬಾರರ ಸೇವಾ ಸಂಘ ಬೆಳ್ತಂಗಡಿ ಇದರ ವತಿಯಿಂದ ಸ್ವಜಾತಿ ಬಾಂಧವರ ಮಾಗಣೆ ಸಭೆ ಕುಂಭ ಸಂಭ್ರಮ-2017 ಕಾರ್ಯಕ್ರಮವು ಜ.15ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಭವನದಲ್ಲಿ ಜರಗಲಿದೆ.
ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಮಾಗಣೆ ಗುರಿಕಾರರಾದ ಅಣ್ಣಪ್ಪ ಕುಲಾಲ್ ನೆರವೇರಿಸಲಿದ್ದಾರೆ. ಬೆಳ್ತಂಗಡಿ ಕುಂಬಾರರ ಸೇ.ಸಂಘದ ಅಧ್ಯಕ್ಷ ಹೆಚ್. ಪ್ರದ್ಮಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಗಣೆ ಗುರಿಕಾರ ಬಿ. ದೂಮ ಕುಲಾಲ್, ಬೆಂಗಳೂರು ರಾಜ್ಯ ಕುಂಬಾರರ ಮಹಾ ಸಂಘದ ಅಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್, ಬೆಂಗಳೂರು ಯುವ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಹರೀಶ್ ಕಾರಿಂಜ, ಗುರುವಾಯನಕೆರೆ ಮೂಲ್ಯರ ಯಾನೆ ಕುಂಬಾರರ ತಾಲೂಕು ಸಂಘದ ಉಪಾಧ್ಯಕ್ಷ ದಿನಕರ ಬಂಗೇರ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕುಂಬಾರಿಕೆ ವೃತ್ತಿ ಮಾಡುತ್ತಿರುವ ಹಿರಿಯ ವ್ಯಕ್ತಿಗಳಿಗೆ, ನಾಟಿ ವೈದ್ಯರುಗಳಿಗೆ ಸನ್ಮಾನ ಕಾರ್ಯಕ್ರಮ, ಉಪನ್ಯಾಸ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.