ಸಾಹಿತ್ಯ ಸಮ್ಮೇಳನ ನಮ್ಮ ಮನೆಯ ಕಾರ್ಯಕ್ರಮ: ಶಾಸಕ ಬಂಗೇರ

Advt_NewsUnder_1
Advt_NewsUnder_1
Advt_NewsUnder_1

Ujire jilla sahithya sabhe copyಸರಕಾರಿ ಅಧಿಕಾರಿಗಳು, ಸಂಘ ಸಂಸ್ಥೆ ಪದಾಧಿಕಾರಿಗಳು, ಸಮಿತಿಯ ಪದಾಧಿಕಾರಿಗಳ ಜಂಟಿ ಸಭೆ

ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು

* ರವೀಂದ್ರ ಒಪ್ಪಂತಾಯ ಮಾತನಾಡಿ, ಸಮ್ಮೇಳನದ ದಿನಗಳಲ್ಲಿ ಗುರುವಾಯನಕೆರೆಯಿಂದ ಉಜಿರೆ ವರೆಗೆ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಪೊಲೀಸ್ ಕ್ರಮ ಆಗಬೇಕು ಮತ್ತು ಬೆಳಾಲಿನಿಂದ ಉಜಿರೆಗೆ ಬರುವ ರಸ್ತೆ ತೀರಾ ನಾದುರಸ್ಥಿಯಲ್ಲಿದ್ದು ಗುಂಡಿ ಮುಚ್ಚುವ ಕೆಲಸ ಆಗಬೇಕು ಎಂದರು. ಎರಡಕ್ಕೂ ಕ್ರಮ ಕೈಗೊಳ್ಳುವು ದಾಗಿ ಶಾಸಕರು ಭರವಸೆ ನೀಡಿದರು.
* ಶಾಲಾ ಮಕ್ಕಳ ಭಾಗವಹಿಸುವಿಕೆಯ ಅನುಕೂಲಕ್ಕಾಗಿ ಬಸ್ಸಿನ ವ್ಯವಸ್ಥೆ ಬಂದರೆ ಒಳ್ಳೆದು.
* ಸಮ್ಮೇಳನದ ದಿನಗಳಲ್ಲಿ ಉಜಿರೆಯಲ್ಲಿ ಸ್ವಚ್ಚತೆಗೆ ಆಧ್ಯತೆ ಕೊಡಬೇಕು. ಪ್ರತೀ ಸರಕಾರಿ ನೌಕರರೂ (ಎ ಇಂದಿ ಡಿ ವರೆಗೆ) ಸಮ್ಮೇಳನ ಸದಸ್ಯತ್ವವನ್ನು ಪಡೆಯುವುದನ್ನು ಕಡ್ಡಾಯಗೊಳಿಸಿದಲ್ಲಿ ಸಂಪನ್ಮೂಲ ಕ್ರೂಢೀಕರಣ ಸುಲಭ ಸಾಧ್ಯವಾಗಲಿದೆ ಎಂದು ಗಮಕ ಪರಿಷತ್ ಅಧ್ಯಕ್ಷರೂ ಆಗಿರುವ ಸುರೇಶ್ ಕುದ್ರಂತಾಯ ಹೇಳಿದರು.
* ತಾಲೂಕಿನಲ್ಲಿ 680 ಶಿಕ್ಷಕರಿದ್ದು ಕನಿಷ್ಠ ತಲಾ ೧೦೦ ರೂ. ನಂತೆ ದೇಣಿಗೆ ಸಂಗ್ರಹಿಸಿ ಕೊಡುತ್ತೇವೆ. ಮಕ್ಕಳನ್ನು ಸಮ್ಮೇಳನಕ್ಕೆ ಕರೆತರುವುದು ಮತ್ತು ಮಕ್ಕಳಿಂದ ತಲಾ 10 ರೂ. ಗಳಂತೆ ದೇಣಿಗೆ ಸಂಗ್ರಹಿಸುವ ಬಗ್ಗೆ ವಲಯವಾರು ಮಟ್ಟದಲ್ಲಿ ವಿಂಗಡಿಸಿ ಮಾಡಿದಲ್ಲಿ ಅನುಕೂಲವಾಗಲಿದೆ. ಸಮ್ಮೇಳನದಲ್ಲಿ ಭಾಗವಹಿಸಲು ಓಓಡಿ ನೀಡಲಾಗಿದೆ. ಶನಿವಾರ ಒಂದು ದಿನ ಜಿಲ್ಲೆಯಲ್ಲಿ ಶಾಲೆ ರಜೆ ಘೋಷಿಸಿದರೆ ಮಕ್ಕಳನ್ನು ಕರೆತರಲು ಸುಲಭ ಎಂದು ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ಹೆಗ್ಡೆ ಹಟ್ಟಾಜೆಗುತ್ತು ಹೇಳಿದರು. ಈ ಬಗ್ಗೆ ಕ್ರಮಕೈಗೊಳ್ಳು ವುದಾಗಿ ಶಾಸಕರು ಭರವಸೆ ನೀಡಿದರು.
* ಸಹಕಾರಿ ಸಂಘದಿಂದ ಸಹಕಾರ ನೀಡಲಾಗುವುದು. ಯೋಗೀಶ್ ಕುಮಾರ್ ಕೆ. ಎಸ್.
* ಮಕ್ಕಳ ಸಾಹಿತ್ಯ ಸಮ್ಮೇಳನದ ಬಗ್ಗೆ ಸೋಮಶೇಖರ ಶೆಟ್ಟಿ ಮಾಹಿತಿ ನೀಡಿದರು.
* ಲಯನ್ಸ್ ಕ್ಲಬ್‌ನ ಸಹಕಾರದ ಬಗ್ಗೆ ಅಧ್ಯಕ್ಷೆ ಸುಶೀಲಾ ಎಸ್. ಹೆಗ್ಡೆ ಅವರು ಸಮಿತಿ ಜೊತೆ ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಬೆಳ್ತಂಗಡಿ : ಸುಮಾರು 20 ವರ್ಷಗಳ ನಂತರ ನಮ್ಮ ತಾಲೂಕಿನಲ್ಲಿ ಮತ್ತೊಮ್ಮೆ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮಹಾಭಾಗ್ಯ ನಮ್ಮ ಪಾಲಿಗೆ ದೊರೆತಿದ್ದು ಈ ಕಾರ್ಯಕ್ರಮವನ್ನು ನಾವೆಲ್ಲರೂ ನಮ್ಮ ಮನೆಯ ವೈಯುಕ್ತಿ ಕಾರ್ಯಕ್ರಮವೆಂದೇ ಪರಿಗಣಿಸಿ, ಶ್ರಮ ಪಟ್ಟು ಕಾರ್ಯನಿರ್ವಹಿಸಿ ಯಶಸ್ವಿಗೊಳಿಸಬೇಕು ಎಂದು ಶಾಸಕ ವಸಂತ ಬಂಗೇರ ಹೇಳಿದರು.
ಜನವರಿ 27, 28, 29 ರಂದು ಉಜಿರೆಯಲ್ಲಿ ನಡೆಯುವ ದ.ಕ.ಜಿಲ್ಲಾ ಮಟ್ಟದ 21ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗಾಗಿ ಜ. 9 ರಂದು ಬೆಳ್ತಂಗಡಿ ಎಸ್‌ಡಿಎಂ ಕಲಾಭವನದಲ್ಲಿ ಕರೆಯಲಾಗಿದ್ದ ಸ್ವಾಗತ ಸಮಿತಿ ಪದಾಧಿಕಾರಿಗಳು, ಸರಕಾರಿ ಇಲಾಖಾ ಮುಖ್ಯಸ್ಥರುಗಳು, ಶಿಕ್ಷಕರ ಸಂಘ ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಚ್ಚ ಭಾಷೆ, ಸ್ವಚ್ಚ ಜೀವನ, ಸ್ವಚ್ಚ ಸಮಾಜ ಸಮ್ಮೇಳನದ ಧ್ಯೇಯ: ಕಲ್ಕೂರ
ಸಮ್ಮೇಳನದ ಆಶಯದ ಮಾತುಗಳನ್ನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಅವರು, ಈ ಬಾರಿ ಸ್ವಚ್ಚ ಭಾಷೆ- ಸ್ವಚ್ಚ ಜೀವನ- ಸ್ವಚ್ಚ ಸಮಾಜ ಎಂಬ ಪ್ರಮುಖ ಪರಿಕಲ್ಪನೆಯಡಿ ಸಮ್ಮೇಳನ ನಡೆಸಲು ಉದ್ಧೇಶಿಸಿದ್ದೇವೆ. ಮೈಸೂರು ಒಡೆಯರಾಗಿದ್ದ ಕೃಷ್ಣ ರಾಜ ಒಡೆಯರ್ ಅವರು ಪ್ರಾರಂಭಿಸಿದ ಸಾಹಿತ್ಯ ಸಮ್ಮೇಳನ ಪರಿಕಲ್ಪನೆ ಇಂದು ಇಲ್ಲಿವರೆಗೆ ಮುಂದುವರಿದುಕೊಂಡು ಬಂದಿದೆ. 1998ರಲ್ಲಿ ಬೆಳ್ತಂಗಡಿ ಸಿವಿಸಿ ಸಭಾಂಗಣದಲ್ಲಿ ಅಮೃತ ಸೋಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆದಿತ್ತು. ದೀರ್ಘ ಅವಧಿಯ ಬಳಿಕ ಇದೀಗ ಮತ್ತೊಮ್ಮೆ ಬೆಳ್ತಂಗಡಿ ತಾಲೂಕಿಗರಿಗೆ ಅವಕಾಶ ಕೂಡಿ ಬಂದಿದೆ. ಇಲ್ಲಿ ಏನೇ ಕಾರ್ಯಕ್ರಮ ಆದರೂ ಅದು ಪರಿಪೂರ್ಣ ನೆಲೆಗಟ್ಟು ಹೊಂದಿರುತ್ತದೆ. ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರ ಗೌರವಾಧ್ಯಕ್ಷತೆಯಲ್ಲಿ ಉಜಿರೆಯ ದಣಿಗಳಾದ ವಿಜಯರಾಘವ ಪಡುವೆಟ್ನಾಯ ಅವರ ಮುತ್ಸದ್ದಿತನದಲ್ಲಿ ಕಾರ್ಯಕ್ರಮ ನಡೆಯಲಿದೆ. ಹಳೆ ಬೇರು ಹೊಸ ಚಿಗುರು ಎಂಬಂತೆ ಪ್ರತಾಪಸಿಂಹ ನಾಯಕ್ ಆದಿಯಾಗಿ ಯುವಕರನ್ನೂ ಸಮಿತಿಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ತಿಳಿಸಿದರು. ಎಲ್ಲರೂ ಈ ಕನ್ನಡದ ಕೈಂಕರ್ಯ ಒಂದಾಗಿ ಕೈ ಜೋಡಿಸಬೇಕು ಎಂದು ಕೇಳಿಕೊಂಡರು. ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ| ಎಂ.ಪಿ. ಶ್ರೀನಾಥ್ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ವಿಜಯರಾಘವ ಪಡುವೆಟ್ನಾಯ ಅವರು ಮಾತನಾಡಿ, ಉಳಿದ ಕಡೆಗಳಲ್ಲಿ ವ್ಯವಸ್ಥೆಯ ದೃಷ್ಟಿಯಿಂದ ಸಮ್ಮೇಳನವನ್ನು ಅಳೆಯುವ ಕೆಲಸವಾದರೆ ಇಲ್ಲಿ ಅರ್ಥಪೂರ್ಣತೆಯ ರೀತಿಯಲ್ಲಿ ಎಲ್ಲರೂ ಕೊಂಡಾಡುವಂತಾಗಬೇಕು ಎಂದು ಇಂಗಿತ ವ್ಯಕ್ತಪಡಿಸಿದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಪ್ರತಾಪಸಿಂಹ ನಾಯಕ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಮ್ಮೇಳನದ ದೃಷ್ಟಿಯಿಂದ ಕೇವಲ ಸ್ವಾಗತ ಸಮಿತಿ ಮತ್ತು ಪರಿಷತ್ ಮಾತ್ರ ಎಂಬುದು ಆಗದೆ ತಾಲೂಕಿನ ಪ್ರತೀ ಮನೆಯಿಂದ 2 ತೆಂಗಿನಕಾಯಿಯಾದರೂ ಸರಿ ಎಲ್ಲರೂ ಇದರಲ್ಲಿ ಸಣ್ಣ-ದೊಡ್ಡ ದೇಣಿಗೆ ನೀಡಿ ಸಂಭ್ರಮಿಸುವಂತಾಗಬೇಕು ಎಂದರು.
ಸಭೆಯಲ್ಲಿ ಜೆಸಿಐ ಉಜಿರೆ ಮತ್ತು ಬೆಳ್ತಂಗಡಿ ಪದಾಧಿಕಾರಿಗಳು, ಲಯನ್ಸ್ ಕ್ಲಬ್, ಮಾಜಿ ಸೈನಿಕರ ಸಂಘ, ಗಮಕ ಕಲಾ ಪರಿಷತ್, ಜಿ.ಪಂ. ಸದಸ್ಯರಾದ ಸೌಮ್ಯಲತಾ ಮತ್ತು ಮಮತಾ ಎಂ. ಶೆಟ್ಟಿ, ಎಸ್.ಡಿ.ಎಂ. ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಕೆ.ಎಸ್. ಮೋಹನ್‌ನಾರಾಯಣ್, ಶ್ರೀಧರ ಜಿ. ಭಿಡೆ, ಯದುಪತಿ ಗೌಡ, ಸಂಪತ್ ಬಿ. ಸುವರ್ಣ, ಟಿ.ಕೆ. ಶರತ್, ಜಗದೀಶ್ ಇಂಜಿನಿಯರ್, ಅನಿಲ್ ನಾಯ್ಗ, ಶಿವಶಂಕರ ಭಟ್, ಶರತ್‌ಕೃಷ್ಣ ಪಡುವೆಟ್ನಾಯ, ಬಾಬು ಮುಗೇರ ಎರ್ನೋಡಿ, ಸವಿತಾ ಜಯದೇವ್, ಲೋಕೇಶ್ವರೀ ವಿನಯಚಂದ್ರ, ಎಂ.ಜಿ. ಶೆಟ್ಟಿ, ಕಾಂಚೋಡು ಗೋಪಾಲಕೃಷ್ಣ ಭಟ್, ರೂಪಾ ಜಿ. ಜೈನ್, ಮೋಹನ್ ಶೆಟ್ಟಿಗಾರ್, ಬಿ.ಎಂ. ಹಮೀದ್ ಉಜಿರೆ, ಲಕ್ಷ್ಮಣ ಸಪಲ್ಯ, ರಾಘವೇಂದ್ರ ಬೈಪಡಿತ್ತಾಯ, ರಮೇಶ್ ಮಯ್ಯ, ರಘುರಾಮ ಶೆಟ್ಟಿ ಸಾಧನ, ಟಿ.ಕೆ. ಶರತ್, ನಾಮದೇವ ರಾವ್ ಮುಂಡಾಜೆ, ಚಿದಾನಂದ ಇಡ್ಯ, ಸಂತೋಷ್ ಪಿ. ಕೋಟ್ಯಾನ್, ವಸಂತ ಶೆಟ್ಟಿ ಶ್ರದ್ಧಾ, ಪ್ರೋ. ಕೃಷ್ಣಪ್ಪ ಪೂಜಾರಿ, ಸುಧಾಮಣಿ ಆರ್, ಮೊದಲಾ ದವರೂ ಸೇರಿದಂತೆ ವಿವಿಧ ಸರಕಾರಿ ಇಲಾಖಾ ಅಧಿಕಾರಿಗಳು, ಗಣ್ಯರು ಭಾಗಿಯಾಗಿದ್ದರು. ವಾಣಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತಪಡಿಸಿದರು. ತಾ| ಕಸಾಪ ಗೌರವ ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ನಿರೂಪಿಸಿ, ಶಿಕ್ಷಕ ದೇವುದಾಸ್ ನಾಯಕ್ ಧನ್ಯವಾದವಿತ್ತರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.