ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ: ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ಸುದ್ದಿ ವೇದಿಕೆಯಿಂದ ಜನಜಾಗೃತಿ: ಡಾ. ಶಿವಾನಂದ

Advt_NewsUnder_1
Advt_NewsUnder_1
Advt_NewsUnder_1

UP Shivananda press meet copyಬೆಳ್ತಂಗಡಿ : ಸಾಮಾಜಿಕ ತಾಣಗಳಾದ ವಾಟ್ಸ್‌ಪ್ ಮತ್ತು ಫೇಸ್ಬುಕ್‌ಗಳಲ್ಲಿ ಒಳ್ಳೆಯ ಸಂದೇಶವನ್ನು ಸ್ವಾಗತಿಸುವ, ಆದರೆ ಇನ್ನೊಬ್ಬರ ಬಗ್ಗೆ ಅವಹೇಳನ, ಅಪಪ್ರಚಾರದ ಸಂದೇಶಗಳು ಬಂದಾಗ ಇದರ ಸತ್ಯಾಸತ್ಯತೆಯನ್ನು ತಿಳಿದು ವಿಮರ್ಶೆ ಮಾಡಬೇಕು, ಇದು ಸುಳ್ಳಾದರೆ ಸಂದೇಶ ಕಳುಹಿಸಿದವರ ಮನ ಪರಿವರ್ತನೆ ಮಾಡಿ ಅವರನ್ನು ಸರಿದಾರಿಗೆ ತರುವ ಸ್ವಾಸ್ಥ್ಯ ಸಮಾಜ ನಿರ್ಮಾಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸುದ್ದಿ ವೇದಿಕೆಯಿಂದ ಮಾಡಲಾಗುತ್ತಿದೆ ಎಂದು ವೇದಿಕೆಯ ನಿರ್ದೇಶಕ ಡಾ| ಯು.ಪಿ. ಶಿವಾನಂದ ಹೇಳಿದರು.
ಅವರು ಜ.೬ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ‘ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಹೇಗೆ? ಎಂಬ ಬಗ್ಗೆ ಮಾತನಾಡಿ, ನಾವು ಸಾಧ್ಯವಾದಷ್ಟು ವಾಟ್ಸಪ್ ಮತ್ತು ಫೇಸ್ಬುಕ್‌ಗಳಲ್ಲಿ ಸೇರಿಕೊಳ್ಳುವುದು ಉತ್ತಮ. ಇದರಿಂದ ನಮಗೆ ಹಲವು ಉತ್ತಮ ಮಾಹಿತಿ ದೊರೆಯುತ್ತದೆ. ಅಲ್ಲದೆ ತನ್ನ, ತನ್ನ ಸಂಸ್ಥೆಯ, ಸ್ನೇಹಿತರ, ಸಂಬಂಧಿಕರ ಬಗ್ಗೆ ಬಂದಿರುವ ಒಳ್ಳೆಯ ನ್ಯೂಸ್‌ಗಳು ಮಾತ್ರವಲ್ಲ ಅಪಪ್ರಚಾರದ ನ್ಯೂಸ್‌ಗಳ ಮಾಹಿತಿಯು ಲಭ್ಯವಾಗುತ್ತದೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ಸಂದೇಶ ಬಂದರೆ ಸ್ವೀಕರಿಸುವ, ಆದರೆ ಅದರಲ್ಲಿ ಬೇರೆಯವರ ಬಗ್ಗೆ ಅಪಪ್ರಚಾರದ, ಅವಹೇಳನ ಸಂದೇಶಗಳು ಎಂದು ಕಂಡು ಬಂದರೆ ಅದನ್ನು ರವಾನಿಸದೇ, ಈ ಸಂದೇಶ ಕಳುಹಿಸಿದವರಲ್ಲಿ ವಿಚಾರಿಸುವುದು, ಸಂದೇಶ ಕಳುಹಿಸಿದ ಉದ್ದೇಶ ಕೇಳುವುದು ಅಥವಾ ಯಾರ ಬಗ್ಗೆ ಸಂದೇಶವಿದೆಯೋ ಅವರ ಪರಿಚಯ ವಿದ್ದರೇ ಅವರಲ್ಲೇ ವಿಚಾರಿಸಿ, ಸತ್ಯಾಸತ್ಯಾತೆಯನ್ನು ತಿಳಿದುಕೊಳ್ಳು ವುದು ಅವಶ್ಯ. ಒಂದು ವೇಳೆ ಅಪಪ್ರಚಾರಕ್ಕಾಗಿ, ಅವಹೇಳನ ಕ್ಕಾಗಿ ಬ್ಲ್ಯಾಕ್‌ಮೇಲ್ ಸಂದೇಶವೆಂದು ಕಂಡು ಬಂದರೆ ಕಳುಹಿಸಿದವರನ್ನು ಗುರುತಿಸಿ ಅದರಿಂದ ತೊಂದರೆಗೊಳಗಾಗುವ ವರಿಗೆ ತಿಳಿಸುವುದು, ಜೊತೆಗೆ ಅವರ ರಕ್ಷಣೆಗೆ, ಬೆಂಬಲಕ್ಕೆ ಕೈಜೋಡಿಸುವುದು. ಅಂತಹ ಸಂದೇಶ ಕಳುಹಿಸಿದವರನ್ನು ತಮ್ಮ ಗ್ರೂಪ್‌ನಿಂದ ತೆಗೆದು ಇತರರಿಗೆ ತಿಳಿಸುವುದು. ಹೀಗೆ ಮಾಡಿದರೆ ತಮ್ಮ ಬಗ್ಗೆ ಅಥವಾ ಯಾರ ಬಗ್ಗೆಯಾದರೂ ಅಪಪ್ರಚಾರ, ಅವಹೇಳನವಾದಾಗ ರಕ್ಷಣೆ ದೊರೆಕು ವಂತಾಗುತ್ತದೆ ಎಂದರು. ಅವಹೇಳನ, ಅಪಪ್ರಚಾರ, ಬ್ಲ್ಯಾಕ್‌ಮೇಲ್ ಮಾಡು ವವರ ಮನಃಪರಿವರ್ತನೆಗೆ ಪ್ರಯತ್ನಿಸು ವುದು ಅವರು ಸರಿಯಾಗದಿದ್ದರೆ ಅವರನ್ನು ಸಾಧ್ಯವಾದಷ್ಟು ದೂರವಿಟ್ಟು ತಮ್ಮ ತಮ್ಮ ಸಾಮಾಜಿಕ ಚಟುವಟಿಕೆಗಳಿಂದ ಬಹಿಷ್ಕರಿಸುವುದು, ಅಪಪ್ರಚಾರ ಮಾಡಿದ್ದು ಯಾರೆಂದು ತಿಳಿಯದಿದ್ದರೆ, ಅದನ್ನು ಪರಿಚಯದವರ ಹತ್ತಿರ ಕೇಳುತ್ತಾ ಹೋದಾಗ ಅದನ್ನು ಕಳುಹಿಸಿ ದವರ ಮೂಲ ಮತ್ತು ಉದ್ದೇಶ ಗೊತ್ತಾಗುತ್ತದೆ. ಆ ಸಂದೇಶದಿಂದ ತೊಂದರೆಗೊಳಗಾದವರು ಮತ್ತು ಆ ಸಂದೇಶವನ್ನು ಸ್ವೀಕರಿಸಿದ ಎಲ್ಲರೂ ಮತ್ತು ಜನತೆ ಅಪಪ್ರಚಾರಕ್ಕೆ ಕಾರಣನಾದವನನ್ನು ಬಹಿರಂಗವಾಗಿ ಪ್ರಶ್ನಿಸಿ ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಮಾಡುವುದು. ಇದರಿಂದ ಮುಂದಕ್ಕೆ ಯಾವುದೇ ಅಪಪ್ರಚಾರಗಳು ನಡೆಯಲಾರದು. ನಡೆದರೂ ಅವರು ಹರಡಲಾರರು ಕೇಸು ಆಗುವುದಿಲ್ಲ ಎಂಬ ನಂಬಿಕೆಯಿಂದ ಅದನ್ನು ಮಾಡುವವರಿಗೆ ಶಿಕ್ಷೆ ಆಗದಿದ್ದರೂ ಜನರ ತಿರಸ್ಕಾರದ ಶಿಕ್ಷೆ ದೊರೆತರೆ ಅವರು ಪರಿವರ್ತನೆಯಾಗುವುದು ಖಂಡಿತ ಎಂದು ಹೇಳಿದರು. ಸುದ್ದಿ ವೇದಿಕೆಯ ಈ ಜನಜಾಗೃತಿ ಕಾರ್ಯಕ್ರಮಕ್ಕೆ ಎಲ್ಲಾ ಸಂಘ-ಸಂಸ್ಥೆಯವರು, ತಾಲೂಕಿನ ನಾಗರಿಕರು ಬೆಂಬಲ ನೀಡಬೇಕು ಎಂದು ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸುದ್ದಿ ವೇದಿಕೆಯ ಸಂತೋಷ್ ಶಾಂತಿನಗರ, ಸುದ್ದಿ ಬೆಳ್ತಂಗಡಿ ಕಚೇರಿ ವ್ಯವಸ್ಥಾಪಕ ಮಂಜುನಾಥ ರೈ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.