ಧರ್ಮದಲ್ಲಿ ಅಸ್ಪೃಷ್ಯತೆ ಶಬ್ಧವೇ ಇಲ್ಲ: ರಾಜಶೇಖರಾನಂದ ಸ್ವಾಮೀಜಿ

santhara padayathre copyಧರ್ಮ ರಕ್ಷಾ ಸಮಿತಿ ವತಿಯಿಂದ ಮೇಲಂತಬೆಟ್ಟು ಕೆಲ್ಲಕೆರೆ ಕಾಲನಿಯಲ್ಲಿ ಸಂತರ ಪಾದಯಾತ್ರೆ

ಉಚಿತ ಶಿಕ್ಷಣ: ಕಾಲನಿಯ ಅಥವಾ ಇದೇ ರೀತಿ ಆರ್ಥಿಕ ತೊಂದರೆಯಲ್ಲಿರುವ ಹಿಂದೂ ಕುಟುಂಬಗಳ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ತೆಗೆದುಕೊಂಡು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಧರ್ಮ ಜಾಗರಣ ವಿಭಾಗ ಸಿದ್ದವಿದ್ದು ಶಾಲಾ ಕಾಲೇಜು ಆರಂಭಕ್ಕೂ ಮುನ್ನ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಸಂಪರ್ಕಿಸಿದರೆ ಅಂತಹ ಮಕ್ಕಳಿಗೆ ಎಲ್ಲಾ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು ಎಂದು ಮುನಿಯಪ್ಪ ಪ್ರಕಟಿಸಿದರು.

ಬೆಳ್ತಂಗಡಿ : ಹಿಂದೂಗಳಾದ ನಾವೆಲ್ಲಾ ಜಾತಿಗಳ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತೇವೆ. ಧರ್ಮದಲ್ಲಿ ಸಂಪ್ರದಾಯ ಬದ್ಧತೆ ಹೊರತಾಗಿ ಜಾತಿಯ ವ್ಯತ್ಯಾಸಗಳಿಲ್ಲ. ಪ್ರತಿಯೊಬ್ಬರೂ ಕರ್ತವ್ಯವನ್ನು ಮಾಡುವುದೇ ಧರ್ಮ. ಧರ್ಮದಲ್ಲಿ ಅಸ್ಪೃಷ್ಯತೆ ಎಂಬ ಶಬ್ಧವೇ ಇಲ್ಲ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು.
ಧರ್ಮರಕ್ಷಾ ಸಮಿತಿ ಮೆಲಂತಬೆಟ್ಟು ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಜ.8 ರಂದು ನಡೆದ ಮೇಲಂತಬೆಟ್ಟು ಗ್ರಾಮದ ಕೆಲ್ಲಕೆರೆ ಕಾಲನಿಯಲ್ಲಿ ಸಂತರ ಪಾದಯಾತ್ರೆ ಮತ್ತು ಧಾರ್ಮಿಕ ಜನಜಾಗೃತಿ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಜೀವ-ದೇಹ-ಮನಸ್ಸು ಅನ್ಯೋನ್ಯವಾಗಿರಬೇಕು. ದುಶ್ಚಟಗಳಿಂದ ನಾವು ಅಸ್ತಿತ್ವ ಕಳೆದುಕೊಳ್ಳುತ್ತಿದ್ದೇವೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಮದ್ಯವರ್ಜನ ಶಿಬಿರಗಳ ಮೂಲಕ ವ್ಯಸನ ಮುಕ್ತಿಗೆ ಪ್ರಯತ್ನಗಳು ಈ ಭಾಗದಲ್ಲಿ ನಡೆಯುತ್ತಿದೆ. ನಮ್ಮ ಮನೆ ಮನಸ್ಸು ಸ್ವಚ್ಚ ಇರಬೇಕು. ಧರ್ಮ ರಕ್ಷಣೆಯ ನಿಟ್ಟಿನಲ್ಲಿ ನಮ್ಮಲ್ಲಿ ಒಗ್ಗಟ್ಟು ಮುಖ್ಯವಾಗಿದೆ. ಸಂಪ್ರದಾಯಗಳು ಬದುಕಿಗೆ ಪೂರಕವಾದುದು. ಧರ್ಮ ಜಾಗೃತಿಯ ಒಟ್ಟಿಗೆ ನಮ್ಮ ಮನದಲ್ಲಿ ಧರ್ಮವನ್ನು ಉದ್ದೀಪನಗೊಳಿಸುವುದು ಮತ್ತು ಕಾಲನಿಯ ನಿವಾಸಿಗಳ ಮನೆಗಳಿಗೆ ಬೇಟಿ ನೀಡಿ ಅವರ ಕಷ್ಟ ಸುಖಗಳನ್ನು ತಿಳಿದು ಸ್ಪಂದಿಸುವ ಭಾವನೆಯಿಂದಾಗಿ ಈ ಪಾದಯಾತ್ರೆ ಎಂದವರು ಹೇಳಿದರು.
ಸಾಂಸ್ಕೃತಿಕ ರಾಷ್ಟ್ರವಾದ ನಿರ್ಮಾಣವಾಗಲಿ: ಕರ್ನಾಟಕ ದಕ್ಷಿಣ ಪ್ರಾಂತದ ಧರ್ಮ ಜಾಗರಣ ಪ್ರಾಂತ ಪ್ರಮುಖ್ ಮುನಿಯಪ್ಪ ಧಾರ್ಮಿಕ ಜಾಗೃತಿ ಭಾಷಣ ನೆರವೇರಿಸಿ, ಪ್ರತಿಯೊಬ್ಬರ ಮನಸ್ಸಿನಲ್ಲಿ ಧರ್ಮದ ಬೆಳಕು ಹಚ್ಚುವುದೇ ಧರ್ಮ ರಕ್ಷಾ ಸಮಿತಿ ಉದ್ಧೇಶ. ಅಸ್ಪೃಶ್ಯತೆ ಎನ್ನುವುದು ಕ್ಯಾನ್ಸರ್‌ಗಿಂದ ಅಪಾಯಕಾರಿ. ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125 ಜನ್ಮಜಯಂತಿ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಅಸ್ಪೃಶ್ಯತೆ ಆದಿಯಾಗಿ ಶೋಷಣೆಗಳು ತೊಲಗಿ ಸಾಂಸ್ಕೃತಿಕ ರಾಷ್ಟ್ರವಾದ ನಿರ್ಮಾಣವಾಗಬೇಕು. ಹಿಂದೂ ಧರ್ಮ ಯಾವ ಧರ್ಮದ ಮೇಲೂ ದಬ್ಬಾಳಿಕೆ ಮಾಡಿಲ್ಲ. ಉಳಿದ ಧರ್ಮಗಳು ತಾವು ಪ್ರತಿಪಾದಿಸುವ ವ್ಯಕ್ತಿಯೇ ದೇವರು ಎಂದು ಹೇಳುತ್ತದೆ. ಆದರೆ ಹಿಂದೂ ಧರ್ಮ ಎಲ್ಲರನ್ನೂ ದೇವರು ಎಂದು ಸ್ವೀಕರಿಸುವ ಮಹತ್ ಚಿಂತನೆ ಹೊಂದಿದೆ. ಇಥಿಯೋಫಿಯಾದಂತಹ ಕ್ರೈಸ್ತ ಧರ್ಮ ಪ್ರಧಾನವಾಗಿರುವ ದೇಶಗಳಲ್ಲಿ ಇಂದೂ ಕಿತ್ತು ತಿನ್ನುವ ಬಡತನವಿದ್ದು, ಅಲ್ಲಿ ಕೆಲಸ ಮಾಡದ ಕ್ರೈಸ್ತ ಮಿಶನಿರಿಗಳು ನಮ್ಮ ದೇಶದ ಗಲ್ಲಿಗಲ್ಲಿಗಳಲ್ಲಿ ಆರ್ಥಿಕ ದುರ್ಬಲವಾಗಿರುವ, ತುಳಿತಕ್ಕೊಳಗಾಗಿರುವ ಸಮುದಾಯದವರನ್ನು ಗುರಿಯಾಗಿಸಿ ಮತಾಂತರ ಮಾಡುತ್ತಿರುವುದನ್ನು ನಾವು ಸಹಿಸುವುದಿಲ್ಲ. ಸೇವೆ ಮಾಡಿ ಆದರೆ ದೇವರನ್ನೇ ಬದಲಾಯಿಸುವುದು ವಿಶಾಲ ಮನೋಭಾವನೆ ಇರುವ ಹಿಂದೂ ಧರ್ಮದ ಮೇಲಿನ ಆಕ್ರಮಣಕಾರಿ ಪ್ರವೃತಿ ಎಂದರು.
ಉಪಸ್ಥಿತಿ: ಸ್ವಾಮೀಜಿಗಳ ಪಾದಯಾತ್ರೆಯುದ್ದಕ್ಕೂ ಬಿಜೆಪಿ ತಾ| ಅಧ್ಯಕ್ಷ ರಂಜನ್ ಜಿ. ಗೌಡ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಕುಶಾಲಪ್ಪ ಗೌಡ ಪೂವಾಜೆ, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ವಿಮಲಾ ಕಂಚಿಂಜ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಮಾಜಿ ಕಾರ್ಯದರ್ಶಿ ನಾರಾಯಣ ಆಚಾರ್, ಮೇಲಂತಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಭಾಕರ್ ಆಚಾರ್ಯ, ಚಂದ್ರರಾಜ್, ತಾ.ಪಂ. ಮಾಜಿ ಅಧ್ಯಕ್ಷ ಕೇಶವ ಎಂ, ಧರ್ಮ ರಕ್ಷಾ ಸಮಿತಿ ಅಧ್ಯಕ್ಷ ದಿನಕರ ಆದೇಲು, ಜಿ.ಪಂ. ಮಾಜಿ ಸದಸ್ಯೆ ಸಿ.ಕೆ. ಚಂದ್ರಕಲಾ, ರಾಘವ ಕಲ್ಮಂಜ, ಕುವೆಟ್ಟು ಗ್ರಾ.ಪಂ. ಅಧ್ಯಕ್ಷ ಅಶೋಕ್ ಕೋಟ್ಯಾನ್, ಮೋಹನ್‌ದಾಸ್, ಸಂಘಟನೆಯಲ್ಲಿ ಸಹಕಾರ ನೀಡಿದ ಪ್ರಜ್ವಲ್ ಮಡಂತ್ಯಾರು, ರಕ್ಷಿತ್ ಮಡಂತ್ಯಾರು, ಯತೀಶ್ ಮೇಲಂತಬೆಟ್ಟು, ಪ್ರಶಾಂತ್ ಮಡಂತ್ಯಾರು, ನೀಕ್ಷಿತ್, ಸಚಿನ್, ವಿಕ್ರಮ್ ಮೊದಲಾದವರು ಭಾಗಿಯಾಗಿ ಸಹಕಾರ ನೀಡಿದರು. ಧರ್ಮರಕ್ಷಾ ಗ್ರಾಮ ಸಮಿತಿ ಅಧ್ಯಕ್ಷ ಹಾಗೂ ಮೇಲಂತಬೆಟ್ಟು ಗ್ರಾ. ಪಂ. ಸದಸ್ಯ ಸತೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಕೋರಿದರು. ನಾಗೇಶ್ ಮಧ್ವ ಸ್ವಾಗತಿಸಿದರು. ನವೀನ್ ಕನ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಹಾಸ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.