ಕೇಂದ್ರ ಸರಕಾರದಿಂದ ಬಡವರ ಮೇಲೆ ದೌರ್ಜನ್ಯ: ಹರೀಶ್ ಕುಮಾರ್

Harish kumar press meet copyಬೆಳ್ತಂಗಡಿ : ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷಗಳ ಕಾಂಗ್ರೆಸ್ ಆಡಳಿತದಿಂದ ಏನೂ ಪ್ರಗತಿಯಾಗಿಲ್ಲ ನಾವು ದೇಶವನ್ನೇ ಬದಲಾಯಿಸುತ್ತೇವೆ, ಪ್ರಜ್ವಲಿಸುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಎರಡು ವರ್ಷದ ಆಡಳಿತದ ಪರಿಣಾಮ ಈಗ ಬಡವರು ಕೃಷಿಕರು, ಕೂಲಿಕಾರ್ಮಿಕರು ಹಾಗೂ ಜನಸಾಮಾನ್ಯರು ತೀವ್ರ ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕೇಂದ್ರ ಸರಕಾರ ಬಡವರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಆರೋಪಿಸಿದರು.
ಅವರು ಜ.11ರಂದು ಬೆಳ್ತಂಗಡಿ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸ್ವಾತಂತ್ರ್ಯ ದೊರೆತಾಗ ದೇಶದ ಸ್ಥಿತಿ ಹೇಗಿತ್ತು. ನಂತರದ 70 ವರ್ಷಗಳ ಕಾಂಗ್ರೆಸ್ ಆಡಳಿತದಿಂದ ದೇಶದ ಪ್ರಗತಿ ಹೇಗಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಸರಕಾರದ ಕ್ರಾಂತಿಕಾರಕ ಯೋಜನೆಗಳಿಂದ, ಜನಪರ ಯೋಜನೆಗಳಿಂದ ಬಡವರು, ಕೃಷಿಕರು ಸೇರಿದ ದೇಶದ ಎಲ್ಲಾ ನಾಗರಿಕರು ನೆಮ್ಮದಿಯಿಂದ ಜೀವನ ನಡೆಸುವ ವಾತಾವರಣವಿತ್ತು. ಆದರೆ ಮೋದಿ ಸರಕಾರದ ಆಡಳಿತದಿಂದ ಜನಜೀವನ ದುಸ್ತರಗೊಂಡಿದೆ. ಲೀಟರಿಗೆ ರೂ.30 ಇದ್ದ ಪೆಟ್ರೋಲ್ ದರ ರೂ.70ಕ್ಕೆ ಏರಿದೆ. ಒಂದು ವರ್ಷದಲ್ಲಿ ಆರು ಬಾರಿ ಪೆಟ್ರೋಲ್ ಮತ್ತು ಡೀಸಿಲ್ ಬೆಲೆ ಏರಿಕೆ ಮಾಡಿದೆ. ಯು.ಪಿ.ಎ ಸರಕಾರದ ಅವಧಿಯಲ್ಲಿ ಆಧಾರ್ ಕಾರ್ಡ್, ಜಿ.ಎಸ್.ಟಿ ಮತ್ತು ಎಫ್.ಐ.ಡಿ ಮತ್ತು ಗ್ಯಾಸ್ ಸಬ್ಸಿಡಿಯನ್ನು ವಿರೋಧಿಸುತ್ತಿದ್ದ ಮೋದಿ ಹಾಗೂ ಬಿಜೆಪಿ ಪಕ್ಷ ಈಗ ಆಧಾರ್‌ನ್ನು ಎಲ್ಲದಕ್ಕೂ ಲಿಂಕ್ ಮಾಡುತ್ತಿದೆ ಈ ಸರಕಾರದ ಯಾವುದೇ ಹೊಸ ಕಾರ್ಯಕ್ರಮಗಳಿಲ್ಲ, ಯುಪಿಎ ಸರಕಾರದ ಕಾರ್ಯಕ್ರಮಗಳೇ ಈಗ ಮುಂದುವರಿಯುತ್ತಿದೆ ಎಂದು ತಿಳಿಸಿದರು. ಯು.ಪಿ.ಎ ಆರಂಭಿಸಿದ್ದ ಆಹಾರ ಭದ್ರತೆ ಉದ್ಯೋಗ ಖಾತ್ರಿಯನ್ನು ಕೇಂದ್ರ ನಿಲ್ಲಿಸಿದೆ. ನೋಟು ಅಪನಗದೀಕರಣದಿಂದಾಗಿ ಕೃಷಿಕರು, ಕೂಲಿ ಕಾರ್ಮಿಕರು ಸಣ್ಣ ವ್ಯಾಪಾರಿಗಳು, ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಶ್ರೀಮಂತರಿಗೆ ಇದರಿಂದ ಯಾವುದೇ ಸಮಸ್ಯೆಯಾಗಿಲ್ಲ, ನಮ್ಮ ದುಡ್ಡನ್ನು ತೆಗೆಯಲು ಮಿತಿ ಹಾಕಿ ನಿರ್ಬಂಧ, ಬಿಸಿಲಲ್ಲಿ ನಿಂತು ನೂರಾರು ಮಂದಿ ಸಾಯುವ ಸ್ಥಿತಿ ನಿರ್ಮಿಸಿದ್ದಾರೆ. ವಾಹನಗಳ ಲೈಸನ್ಸ್, ಮಾರಾಟ, ದಾಖಲೆ ನವೀಕರಣ ಸೇರಿದಂತೆ ಎಲ್ಲಾ ದಾಖಲೆಗಳನ್ನು ಪಡೆಯಲು ದುಬಾರಿ ಮೊತ್ತ ಹಾಗೂ ದುಪ್ಪಟ್ಟು ದಂಡ ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ ಕಳೆದ ೭೦ ವರ್ಷಗಳಲ್ಲಿ ಇಂತಹ ಆಡಳಿತವನ್ನು ಯಾರೂ ನೋಡಿಲ್ಲ ಇದರ ವಿರುದ್ಧ ತಾಲೂಕು ಹಾಗೂ ಜಿಲ್ಲೆಯಲ್ಲಿ ಹೋರಾಟ ನಡೆಸುತ್ತೇವೆ ಎಂದರು. ಪಾಂಡುರಂಗ ಭಂಡಾರ್ಕರ್ ಅವರು ಮಾತನಾಡಿ ಮೋಟಾರು ವಾಹನ ರಿನಿವಲ್, ಲೈಸನ್ಸ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ಪಡೆಯಲು ಹಿಂದೆ ಇದ್ದ ದರದ ಹತ್ತು ಪಟ್ಟು ಏರಿಕೆ ಆಗಿದೆ. ಅನಿಲ್ ಮೋರಾಸ್ ಕಕ್ಕೆಜಾಲು ಇವರ ಮಾರುತಿ ಕಾರಿಗೆ ಈಗ ರೂ.25 ಸಾವಿರ ಮೌಲ್ಯ. ಇದರ ರಿನಿವಲ್‌ಗೆ ಹಿಂದೆ ರೂ.100 ದಂಡ ಕಟ್ಟಬೇಕಾಗುತ್ತಿತ್ತು. ಆದರೆ ಜ.೬ರಿಂದ ದಂಡದ ಮೊತ್ತವನ್ನು ರೂ.೩೦ ಸಾವಿರಕ್ಕೆ ಏರಿಸಲಾಗಿದೆ. ಇಂತಹ ಅನೇಕ ಘಟನೆಗಳು ತಾಲೂಕಿನಲ್ಲಿದೆ. ಎಲ್ಲಾ ದರ, ಹಾಗೂ ದಂಡವನ್ನು ಹತ್ತು ಪಟ್ಟು ಹೆಚ್ಚು ಮಾಡಿದ್ದು ಚಾಲಕರು, ವಾಹನಗಳ ಮಾಲಕರು ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಗ್ರಾಮೀಣ ಘಟಕದ ಅಧ್ಯಕ್ಷ ರಾiಚಂದ್ರ ಗೌಡ, ಯಶವಂತ ಬಾಳಿಗ, ಸಂತೋಷ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.