HomePage_Banner_
HomePage_Banner_

ನಮ್ಮ ಶ್ರದ್ಧಾ ಕೇಂದ್ರಗಳ ಪಾವಿತ್ರ್ಯತೆಯನ್ನು ಉಳಿಸಿ ಕೊಳ್ಳಬೇಕು- ಒಡಿಯೂರು ಶ್ರೀ

7777

 ಗುಡ್ರಾದಿ ಗುಡ್ರಾಮಲ್ಲೇಶ್ವರ ದೇವಸ್ಥಾನದ ಎದುರು ನಿರ್ಮಿಸಿದ ಜನಮನ ಸೆಳೆಯುವ ಕೃತಕ ಕಾರಂಜಿ 77777
ಗುಡ್ರಾದಿ ಗುಡ್ರಾಮಲ್ಲೇಶ್ವರ ದೇವಸ್ಥಾನದಲ್ಲಿ ವಿದ್ಯುತ್ ದೀಪ ಅಲಂಕೃತಗೊಂಡು ಜನರ ಮನಸೂರೆಗೊಳ್ಳುತ್ತಿರುವ ದೃಶ್ಯ

ಬ್ರಹ್ಮಕಲಶಗೊಂಡ ದೇವಾಲಯಗಳನ್ನು ತದನಂತರವೂ ನಾವು ಶ್ರದ್ಧಾ ಭಕ್ತಿಗಳಿಂದ ಪ್ರತೀನಿತ್ಯ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವ ಮೂಲಕ ಅಲ್ಲಿ ಸಾನಿದ್ಧ್ಯಗೊಂಡಿರುವ ದೈವತ್ವವನ್ನು ಮತ್ತಷ್ಟು ಎತ್ತರಕ್ಕೇರಿಸುವುದು ನಮ್ಮ ಬಹು ದೊಡ್ಡ ಜವಾಬ್ದಾರಿಯಾಗಿದೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ರೆಖ್ಯಾ ಗ್ರಾಮದ ಶ್ರೀ ಗುಡ್ರಾಮಲ್ಲೇಶ್ವರ ದೇವಳದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ನಿಮಿತ್ತ ಜ.10 ರಂದು ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಧಾರ್ಮಿಕ ಉಪನ್ಯಾಸ ನೀಡಿ ದೇವಾಲಯಗಳಲ್ಲಿ ಪ್ರತೀ 12 ವರ್ಷಗಳಿಗೊಮ್ಮೆ ಬ್ರಹ್ಮಕಲಶವಾಗುವ ಜೊತೆಗೆ ನಮ್ಮ ಸಮಾಜದ ಪ್ರತೀ ವ್ಯಕ್ತಿಗಳ ಮನಸ್ಸಿನೊಳಗೂ ನಮ್ಮದ್ದಾದ ಸಂಸ್ಕೃತಿಯನ್ನು ಪೋಷಿಸುವ ಬ್ರಹ್ಮಕಲಶವೂ ಆಗಬೇಕು. ನಾವು ಹುಟ್ಟಿ ಬೆಳೆದ ಭೂಮಾತೆಯ ಋಣವನ್ನು ತೀರಿಸಲು ನಾವು ಕಟಿಬದ್ಧರಾಗಬೇಕು. ನಮ್ಮ ಪುರಾಣ ಗ್ರಂಥಗಳಲ್ಲಿರುವ ಹೂರಣಗಳು ಕೇವಲ ಕಥೆಯಲ್ಲ. ಅದು ನಮ್ಮ ಬದುಕನ್ನು , ಜೀವನ ಶೈಲಿಯನ್ನು ರೂಪಿಸುವ ಶಕ್ತಿಯುಳ್ಳದ್ದಾಗಿದೆ ಎಂದು ನುಡಿದರು.
ನೆಲ್ಯಾಡಿ -ಕೌಕ್ರಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದೂ ಸಮಾಜದ ಮೇಲೆ ನಿರಂತರ ಆಕ್ರಮಣಗಳಾಗುತ್ತಿರುವುದನ್ನು ತಡೆಯಬೇಕಾದರೆ ಮೊದಲು ನಮ್ಮ ನಮ್ಮ ಮನೆಗಳಲ್ಲಿ ಮಾತೆಯರು ತಮ್ಮ ಮಕ್ಕಳಿಗೆ ನಮ್ಮದ್ದಾದ ಸಂಸ್ಕೃತಿಯನ್ನು ತಿಳಿಹೇಳುವ ಕಾರ್ಯ ಕೈಗೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪುತ್ತೂರು ಹಿಂದೂ ಜಾಗರಣಾ ವೇದಿಕೆಯ ಗೌರವಾಧ್ಯಕ್ಷ ಡಾ. ಎಂ.ಕೆ. ಪ್ರಸಾದ್ ಭಂಡಾರಿ, ಮಂಗಳೂರು ಮರೋಳಿಯ ಡಿ.ಬಿ. ಬಾಲಕೃಷ್ಣ ಗೌಡ, ಇಚಿಲಂಪಾಡಿ ಬೀಡು ಶುಭಕರ ಹೆಗ್ಗಡೆ, ಹಾರ್ಪಳ-ಕುತ್ರಾಡಿ ಶ್ರೀ ಶಾಸ್ತಾರೇಶ್ವರ ದೇವಳದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶ್ರೀಧರ ಗೋರೆ, ಬೆಳ್ತಂಗಡಿ ಒಕ್ಕಲಿಗ ಸಂಘದ ಅಧ್ಯಕ್ಷ ಸೋಮಯ್ಯ ಗೌಡ, ಮೈಸೂರು ನಿವೃತ್ತ ಡಿ.ಎಫ್.ಒ. ಕೇಶವ ಗೌಡ, ಎಸ್.ಸಿಡಿ.ಸಿ.ಸಿ. ಬ್ಯಾಂಕ್ ಮಂಗಳೂರಿನ ದೇವರಾಜ, ಕನ್ಯಾಡಿ ವಿಟ್ಲದ ಲಿಂಗಪ್ಪ ಗೌಡ , ನೆಲ್ಯಾಡಿ ಶ್ರೀ ರಾಮ ವಿದ್ಯಾಲಯದ ಕಾರ್ಯದರ್ಶಿ ರವಿಚಂದ್ರ ಹೊಸವಕ್ಲು, ನೆಲ್ಯಾಡಿ -ಕೌಕ್ರಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಗೌರವ ಸಲಹೆಗಾರರಾದ ಟಿ.ಕೆ. ಶಿವದಾಸನ್,ಬ್ರಹ್ಮಕಲಶ ಸಮಿತಿ ಸಂಚಾಲಕ ವಿನಯಕುಮಾರ್ ಕುರುಡೇಲು, ಆಡಳಿತ ಮಂಡಳಿ ಕಾರ್ಯದರ್ಶಿ ಲಕ್ಷ್ಮಣ ಗೌಡ ಕನ್ನೆಕಂಡ ಉಪಸ್ಥಿತರಿದ್ದರು.
ಶ್ರೀ ಗುಡ್ರಾದಿ ದೇವಳದಲ್ಲಿ ಜೀರ್ಣೋದ್ದಾರ ಕಾರ್ಯಗಳಲ್ಲಿ ಅವಿರತವಾಗಿ ಸೇವೆಗೈದ ಶಶಿ ಆಚಾರಿ ನಳಾಲು, ತುಕಾರಾಮ ಗುಡ್ರಾದಿ, ರಾಮಚಂದ್ರ ಅಮ್ಮಾಜೆ, ಇವರನ್ನು ಸ್ಮರಣಿಕೆ ನೀಡಿ ಅತಿಥಿಗಳು ಗೌರವಿಸಿದರು.
ಜಯಾನಂದ ಗೌಡ ಮುಚ್ಚಿರಡ್ಕ ಸ್ವಾಗತಿಸಿದರು. ರಾಜು ವಿ.ಪಿಳ್ಳೆ ವಂದಿಸಿದರು. ಯಶೋಧರ ಗೌಡ ಕೋಟಿಮಾರು ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.