ಸಾಮೂಹಿಕ ಆತ್ಮಹತ್ಯೆಗೆ ಶರಣಾದ ಕೊಕ್ಕಡದ ಬಾಬು ಗೌಡರ ಮನೆಗೆ ಸಂಸದರ ನಿಯೋಗ ಭೇಟಿ

kokkada newsಕೊಕ್ಕಡದಲ್ಲಿ ಇತ್ತೀಚೆಗೆ ಮನೆಯ ಹಿರಿಯ ಪುತ್ರನ ಎಂಡೋ ಸಲ್ಫಾನ್ ರೋಗದ ಬಗ್ಗೆ ಚಿಂತಿತರಾಗಿ ತೀವ್ರ ಮಾನಸಿಕ ಖಿನ್ನತೆಗೊಳಗಾಗಿದ್ದು, ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿರುವ ಬಾಬು ಗೌಡ ಅವರ ಮನೆಗೆ ದ.ಕ ಸಂಸದ ನಳಿನ್ ಕುಮಾರ್ ಕಟೀಲು ಅವರು ಜ. 9ರಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ತಾಲೂಕು ಅಧ್ಯಕ್ಷ ರಂಜನ್ ಜಿ ಗೌಡ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ತಾ.ಪಂ ಸದಸ್ಯ ಲಕ್ಷ್ಮೀ ನಾರಾಯಣ, ಸ್ಥಳೀಯ ಮುಖಂಡರಾದ ನಾರಾಯಣ ಗೌಡ, ಶ್ರೀಧರ ಗೌಡ ಕೆಂಗುಡೇಲು, ಪೂವಾಜೆ ಕುಶಾಲಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.