ಕುಂಟಿನಿ ಅಲ್‌ಬುಖಾರಿ ಮಸೀದಿಯಲ್ಲಿ ಮೀಲಾದ್ ಸಂಭ್ರಮ

kuntini maseedi milad sambrama copyಉಜಿರೆ : ಮುಹ್ಯುದ್ದೀನ್ ಜುಮ್ಮಾ ಮಸೀದಿ ಹಳೆಪೇಟೆ ಉಜಿರೆ ಇದರ ಅಂಗ ಸಂಸ್ಥೆಯಾದ ಅಲ್‌ಬುಖಾರಿ ಮಸ್ಜಿದ್ ಕುಂಟಿನಿ ಇದರ ವತಿಯಿಂದ ಮೀಲಾದ್ ಕಾರ್ಯಕ್ರಮ 2 ದಿನಗಳಲ್ಲಿ ನಡೆಯಿತು.
ಡಿ. 26 ರಂದು ನಡೆದ ಕಾರ್ಯಕ್ರಮದಲ್ಲಿ ಅಬ್ದುಲ್ ರಹೀಂ ಹನೀಫಿ ದುಆ ನೆರವೇರಿಸಿದರು. ಫಾರೂಕ್ ಸಅದಿ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಸನಾ ವಹಿಸಿದ್ದರು. ಇಬ್ರಾಹಿಂ ಮುಸ್ಲಿಯಾರ್ ಸ್ವಾಗತಿಸಿದರು. ಉಜಿರೆ ಕೇಂದ್ರ ಜುಮ್ಮಾ ಮಸೀದಿ ಖತೀಬ್ ಅಬೂಸುಫಿಯಾನ್ ಹೆಚ್. ಐ ಇಬ್ರಾಹಿಂ ಮದನಿ ಪ್ರಭಾಷಣ ನಡೆಸಿದರು. ಉಜಿರೆ ಮಸೀದಿ ಅಧ್ಯಕ್ಷ ಬಿ.ಎಂ ಹಮೀದ್, ಕಾರ್ಯದರ್ಶಿ ಮುಹಮ್ಮದ್ ಕೆಎಸ್‌ಆರ್‌ಟಿಸಿ, ಕುಂಟಿನಿ ಮಸೀದಿ ಸಲಹೆಗಾರ ಸಯ್ಯಿದ್ ಹುಸೈನ್ ತಂಙಳ್, ಉಪಾಧ್ಯಕ್ಷ ಝಕರಿಯಾ ಎಸ್.ಎಲ್.ಬಿ, ಮಾಜಿ ಕಾರ್ಯದರ್ಶಿ ಬಾಬಾ ಯೂಸುಫ್, ಕುಂಟಿನಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಇಲ್ಯಾಸ್, ಕುಂಟಿನಿ ಮಸೀದಿ ಕಾರ್ಯದರ್ಶಿ ಮುಹಮ್ಮದ್ ಇರ್ಫಾನ್, ಕೋಶಾಧಿಕಾರಿ ಅಶ್ರಫ್ ಉಪಸ್ಥಿತರಿದ್ದರು.
ಡಿ. 27 ರಂದು ನಡೆದ ಕಾರ್ಯಕ್ರಮವನ್ನು ಇಬ್ರಾಹಿಂ ಮುಸ್ಲಿಯಾರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಉಜಿರೆ ಮಸೀದಿ ಅಧ್ಯಕ್ಷ ಬಿ.ಎಮ್ ಹಮೀದ್ ವಹಿಸಿದ್ದರು. ಫಾರೂಕ್ ಸಅದಿ ಸ್ವಾಗತಿಸಿದರು. ಅಬ್ದುಲ್ ರಹೀಂ ಹನೀಫಿ ಪ್ರಭಾಷಣ ನಡೆಸಿದರು. ದುವಾ ಪ್ರಾರ್ಥನೆಗೆ ಅಬ್ದುಲ್ ರಝಾಕ್ ಮುಸ್ಲಿಯಾರ್ ಕಾಜೂರು ನೇತೃತ್ವ ನೀಡಿದರು. ಇಸ್ಮಾಯಿಲ್ ಸನಾ, ಸಲಹೆಗಾರ ಸಯ್ಯಿದ್ ಹುಸೈನ್ ತಂಙಳ್, ಕೇಂದ್ರ ಮಸೀದಿ ಕಾರ್ಯದರ್ಶಿ ಮುಹಮ್ಮದ್ ಕೆಎಸ್‌ಆರ್‌ಟಿಸಿ, ಮಾಜಿ ಅಧ್ಯಕ್ಷ ಉಮರ್ ಕುಂಞಿ ನಾಡ್ಜೆ, ಕೇಂದ್ರ ಮಸೀದಿ ಕೋಶಾಧಿಕಾರಿ ಇಬ್ರಾಹಿಂ ವಾಫಿರ್, ಉಜಿರೆ ಗ್ರಾ.ಪಂ ಸದಸ್ಯ ಅಶ್ರಫ್ ಹಸೈನಾರ್, ಲಾಲ ಗ್ರಾ.ಪಂ ಸದಸ್ಯ ಶರೀಫ್ ಇವರುಗಳು ಉಪಸ್ಥಿತರಿದ್ದರು. ಶಾಹುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಸದಸ್ಯರುಗಳು ಸಹಕಾರ ನೀಡಿದರು. ಪ್ರತಿಭಾ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.