ಕ್ರೀಡೆಗೆ ಪಂಚಾಯತುಗಳಿಂದ ಪ್ರೋತ್ಸಾಹ ಲಭಿಸುವಂತಾಗಲಿ: ತುಂಗಪ್ಪ ಬಂಗೇರ

andinje honalu belakina pandyata copyಅಂಡಿಂಜೆ: ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯ

ವೇಣೂರು: ಮಣ್ಣಿನ ಕ್ರೀಡೆಗಳಾದ ಕಬಡ್ಡಿ, ಕ್ರಿಕೆಟ್‌ಗಳಿಂದ ಜನರ ಮಧ್ಯೆ ಒಗ್ಗಟ್ಟು, ಅನ್ಯೋನ್ಯತಾ ಭಾವನೆ ಬೆಳೆಸುತ್ತದೆ. ಅಲ್ಲದೆ ಕ್ರೀಡೆ ಸಮಾಜದಲ್ಲಿ ಬದುಕುವ ರೀತಿಯನ್ನು ಕಲಿಸಿಕೊಡುತ್ತದೆ. ಕ್ರೀಡಾಕೂಟಗಳಿಗೆ ಸ್ಥಳೀಯ ಪಂಚಾಯತುಗಳು ಪ್ರೋತ್ಸಾಹ ನೀಡುವಂತಾಗಬೇಕು ಎಂದು ಬಂಟ್ವಾಳ ಸಂಗಬೆಟ್ಟು ಕ್ಷೇತ್ರದ ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ ಹೇಳಿದರು.
ಅವರು ಡಿ. 31ರಂದು ಅಂಡಿಂಜೆ ಫ್ರೆಂಡ್ಸ್ ವತಿಯಿಂದ ಅಂಡಿಂಜೆ ಶಾಲಾ ಬಳಿಯ ಮೈದಾನದಲ್ಲಿ ಜರಗಿದ 7 ಜನರ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾವು ಆಕಾಶದಲ್ಲಿ ಹಾರಲು, ನೀರಿನಲ್ಲಿ ತೇಲಾಡಲು ಕಲಿತಿದ್ದೇವೆ. ಆದರೆ ಮನಷ್ಯನಾಗಿ ಬಾಳುವ ರೀತಿಯನ್ನು ಮಾತ್ರ ಕಲಿಯುವಲ್ಲಿ ವಿಫಲರಾಗಿದ್ದೇವೆ. ಅದು ಮಣ್ಣಿನ ಕ್ರೀಡೆಗಳಿಂದ ಸಾಧ್ಯ. ಸಂಘಟನೆಗಳು ದೀರ್ಘ ಕಾಲ ಉಳಿಯಲು ಸದಸ್ಯರಲ್ಲಿ ಗುಣ, ನಡತೆ ಮುಖ್ಯ. ಅದು ಅಂಡಿಂಜೆ ಫ್ರೆಂಡ್ಸ್ ಸದಸ್ಯರಲ್ಲಿದೆ. ಇಂತಹ ಸಂಘಟನೆಗಳಿಗೆ ಜನತೆ ಪ್ರೋತ್ಸಾಹ ನೀಡಬೇಕು ಎಂದರು. ವೇಣೂರು ಪೊಲೀಸ್ ಠಾಣೆಯ ಉಪ ನಿರೀಕ್ಷಕ ಲೋಲಾಕ್ಷ ಕೆ. ಮಾತನಾಡಿ, ಕ್ರೀಡೆ ಬಾಂಧವ್ಯ ವೃದ್ಧಿಸುವ ಕ್ಷೇತ್ರ. ಸೋಲು-ಗೆಲುವು ಖಚಿತವಾ ಗಿರುವ ಕ್ರೀಡೆಯಲ್ಲಿ ಸಹೋದರತೆಯ ಭಾವನೆಯಿಂದ ಆಟವಾಡಬೇಕು. ಕ್ರೀಡೆಯ ಜೊತೆಗೆ ಇನ್ನಿತ್ತರ ಚಟುವಟಿಕೆಗಳಿಗೂ ಸಂಘಟನೆಗಳು ಒತ್ತು ನೀಡಬೇಕು ಎಂದರು. ಅಂಡಿಂಜೆ ಗ್ರಾ.ಪಂ. ಅಧ್ಯಕ್ಷ ಮೋಹನ ಅಂಡಿಂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜ, ಅಂಡಿಂಜೆ ತಾ.ಪಂ. ಸದಸ್ಯ ಸುಧೀರ್ ಆರ್. ಸುವರ್ಣ, ಅಂಡಿಂಜೆ ಗ್ರಾ.ಪಂ. ಸದಸ್ಯ ವಿಠಲ ಸುವರ್ಣ ಸಾವ್ಯ, ದಯಾನಂದ ಕುಲಾಲ್, ವೇಣೂರು ಪ್ರಖಂಡ ಭಜರಂಗದಳ ಸಂಚಾಲಕ ರಾಮ್‌ಪ್ರಸಾದ್, ಅಂಡಿಂಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ರಾಘವ ಪುತ್ರನ್, ಪಿಡಬ್ಲ್ಯೂಡಿ ಗುತ್ತಿಗೆದಾರ ರಾಜಶೇಖರ್, ಅಂಡಿಂಜೆಯ ಪ್ರಶಾಂತ್, ರಾಜೇಂದ್ರ ಜೈನ್, ಅಂಡಿಂಜೆ ಕ್ರೈತ್ರೋಡಿಯ ಸುಜ್ಞಾನ್ ಜೈನ್, ಅಂಡಿಂಜೆ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ. ಸಾಧು, ಅಂಡಿಂಜೆ ಫ್ರೆಂಡ್ಸ್ ಅಧ್ಯಕ್ಷ ಪ್ರವೀಣ್, ಕಾರ್ಯದರ್ಶಿ ಮಹೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂಡಿಂಜೆ ಫ್ರೆಂಡ್ಸ್ ಪದಾಧಿಕಾರಿಗಳು ಸಹಕರಿಸಿದರು. ಇದಕ್ಕೂ ಮೊದಲು ಮಂಗಳೂರು ಹ್ಯಾಪಿ ಮೆಮೋಡೀಸ್ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರಗಿತು.
ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.