ಉಜಿರೆ ಕಾಲೇಜು ಪ್ರಾಂಶುಪಾಲ ಡಾ. ಮೋಹನ ನಾರಾಯಣರವರಿಗೆ ಅಮೇರಿಕ ವಿವಿಯ ಗೌರವ ಡಾಕ್ಟರೇಟ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

mohana narayana copyಉಜಿರೆ : ಶಿಕ್ಷಣ ಕ್ಷೇತ್ರದಲ್ಲಿನ ಅನುಪಮ ಸಾಧನೆ, ಗ್ರಾಮೀಣ ಭಾಗದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಬಲವರ್ಧನೆ ದಿಸೆಯಲ್ಲಿ ಮಾಡಿರುವ ಪ್ರಯತ್ನ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ತೋರಿರುವ ಅನನ್ಯ ಕಾಳಜಿಯನ್ನು ಪರಿಗಣಿಸಿ ಉಜಿರೆ ಶ್ರೀ ಧ. ಮಂ. ಕಾಲೇಜಿನ ಪ್ರಾಂಶುಪಾಲ ಡಾ. ಮೋಹನ ನಾರಾಯಣ ಅವರಿಗೆ ಅಮೇರಿಕಾದ ಪ್ರತಿಷ್ಠಿತ ಯುನಿವರ್ಸಿಟಿಯೊಂದು ಗೌರವ ಡಾಕ್ಟರೇಟ್ ಪ್ರಧಾನ ಮಾಡಿದೆ.
ರಾಜ್ಯಶಾಸ್ತ್ರದ ಉಪನ್ಯಾಸಕರೂ ಆಗಿರುವ ಮೋಹನನಾರಾಯಣರವರು ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆ, ಮತದಾನದ ಜಾಗೃತಿ, ಸ್ವಸಹಾಯ ಸಂಘಗಳ ಸಬಲೀಕರಣ, ಸ್ತ್ರೀಸಶಕ್ತೀಕರಣ ಕ್ಷೇತ್ರದಲ್ಲಿನ ಅತ್ಯಮೂಲ್ಯ ಸೇವೆಯನ್ನು ಪರಿಗಣಿಸಿ ಈ ಗೌರವ ಪದವಿಗೆ ಅಯ್ಕೆಮಾಡಲಾಗಿದೆ.
ಶಿಕ್ಷಕರ ರಾಷ್ಟ್ರಮಟ್ಟದ ವೇದಿಕೆಯಾಗಿರುವ ನವದೆಹಲಿಯ ಡಾ. ರಾಧಾಕೃಷ್ಣ ಸಂಶೋಧನೆ ಹಾಗೂ ಅಭಿವೃದ್ಧಿ ಮಂಡಳಿಯು ಮೋಹನನಾರಾಯಣರವರ ಸಮಾಜಮುಖಿ ಉದ್ದೇಶದ ಹಾಗೂ ಚಿಂತನೆಯ ಪ್ರಯೋಗಶೀಲತೆ ಹಾಗೂ ತರಗತಿಯನ್ನು ವಿಶಿಷ್ಟ ಭೋಧನಾ ವಿಧಾನವನ್ನು ಪರಿಗಣಿಸಿ ಈ ಅಂತರಾಷ್ಟ್ರೀಯ ಪ್ರಶಸ್ತಿಗೆ ಶಿಫಾರಸ್ಸು ಮಾಡಿತ್ತು. ಇದನ್ನು ಪರಿಗಣಿಸಿ ಯುನಿವರ್ಸಿಟಿ ಅಫ್ ಸೌತ್ ಅಮೇರಿಕಾವು ಈ ಗೌರವವನ್ನು ನೀಡಿದೆ.
ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಾಮಾಜಿಕತ್ವ ಗುಣಗಳ ಜೊತೆಗೆ ಸಾಮಾಜಿಕ ಬದ್ಧತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಇವರು ಕೇವಲ ಪಠ್ಯದ ಓದಿಗೆ ಸೀಮಿತವಾಗದಂತೆ ವಿಕೇಂದ್ರಿಕರಣ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ವಿದ್ಯಾಥಿಗಳನ್ನು ಸಕ್ರೀಯವಾಗಿ ತೊಡಗಿಸಿ, ಜಾಗೃತ ನಾಗರೀಕ ಸಾಮಾಜ ನಿರ್ಮಾಣಕ್ಕೂ ಅವರು ಅಷ್ಟೇ ಆದ್ಯತೆ ನೀಡಿರುವುದು ಗಮನಾರ್ಹ ಎಂದು ನವದೆಹಲಿಯ ರಾಧಾಕೃಷ್ಣ ಸಂಸ್ಥೆ ವಿಶೇಷವಾಗಿ ಶ್ಲಾಘಿಸಿದೆ.
ಪಂಚಾಯಿತಿ ರಾಜ್ ಆಧಾರಿತ ಮೋಹನ ನಾರಾಯಣರವರ ಪ್ರೌಢ ಪ್ರಬಂಧಕ್ಕೆ ಈಚೆಗೆ ಡಾಕ್ಟರೇಟ್ ಲಭಿಸಿತ್ತು ಹಾಗೂ ಒಡಿಸ್ಸಾದ ಸಂಸ್ಥೆಯೊಂದು ಇತ್ತೀಚೆಗಷ್ಟೇ ರಾಷ್ಟ್ರಮಟ್ಟದ ಬಿರುದೊಂದನ್ನು ನೀಡಿ ಗೌರವಿಸಿತ್ತು.
ಶಿಕ್ಷಕ ಸಮುದಾಯದ ಸಾಮಾಜಿಕ ಕಳಕಳಿಯನ್ನು ಪರಿಗಣಿಸಿ ಅಮೇರಿಕಾ ವಿಶ್ವವಿದ್ಯಾಲಯವು ಅಂಥವರನ್ನು ಗೌರವಿಸುವ ಪರಂಪರೆಗೆ ಪೂರಕವಾಗಿ ಈ ಪ್ರಶಸ್ತಿ ಪಾತ್ರವಾಗಿದ್ದು ಮೋಹನ ನಾರಾಯಣರು ಈ ಪ್ರಶಸ್ತಿಗೆ ಭಾಜನರಾದ ಕಾಲೇಜಿನ ಮೊದಲಿಗರು ಎಂಬ ಹೆಗ್ಗಳಿಕೆಗೆ ಹಾಗೂ ಕೀರ್ತಿಗೆ ಪಾತ್ರರಾಗಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.