ಕೊಕ್ಕಡ : ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಕುಟುಂಬ ಸಾಮೂಹಿಕ ಆತ್ಮಹತ್ಯೆ

3

4

5

6

7

8

ಪುತ್ರ ನಿತ್ಯಾನಂದ ಗೌಡ ಆತ್ಮಹತ್ಯೆ ಮಾಡಿಕೊಂಡ ಲಕ್ಷ್ಮೀ ನಾರಾಯಣ ಭಟ್‌ಎಂಬವರ ಮನೆಯ ಕೆರೆ

9

ಬಾಬು ಗೌಡರ ಮನೆ

10

11

ಎಂಡೋಸಲ್ಫಾನ್ ಪೀಡಿತ

12

ಬಾಬು ಗೌಡ

13

ಗಂಗಮ್ಮ

14

ಘಟನೆ ನಡೆದ ಮನೆಯಲ್ಲಿ ಎಸ್ಪಿ ಭುಷಣ್ ಬೊರಸೆ, ಡಿವೈಎಸ್ಪಿ ರವೀಶ್ ಆರ್, ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ,  ಸಬ್‌ಇನ್ಸ್‌ಪೆಕ್ಟರ್ ಮಾಧವ ಕೂಡ್ಲು

15

ಘಟನೆ ನಡೆದ ಕೆರೆಯ ಮುಂದೆ ಎಂಡೋಸಲ್ಫಾನ್ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಎಸ್‌ಪಿಯವರಿಗೆ ಮಾಹಿತಿ ನೀಡುತ್ತಿರುವುದು

16

ಎಸ್.ಪಿ ಡಿವೈಎಸ್‌ಪಿ ಆಗಮನದ ಸಂದರ್ಭ

17

ಮಕ್ಕಳ ಪೈಕಿ ಬದುಕಿರುವ ಒಬ್ಬನೇ ಮಗ ದಯಾನಂದ

ಹಿರಿಯ ಪುತ್ರ ಎಂಡೋಸಲ್ಫಾನ್ ಪೀಡಿತನಾಗಿ, ಮಾನಸಿಕ ದೌರ್ಬಲ್ಯಕ್ಕೆ ಒಳಗಾಗಿದ್ದ ವಿಚಾರದಿಂದ ತೀವ್ರ ಮನನೊಂದಿದ್ದ ಮತ್ತು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಕುಟುಂಬವೊಂದು ಮನೆಯ ಪಕ್ಕದ ಕೆರೆಗೆ ಹಾರಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಕ್ಕಡ ಗ್ರಾಮದ ಆಲಡ್ಕ ಓಣಿತ್ತಾರು ಎಂಬಲ್ಲಿ ಜ. 5ರಂದು ನಡೆದಿದೆ.
ಇಲ್ಲಿನ ಶ್ರೀ ಪದ್ಮ ನಿವಾಸದ ಬಾಬು ಗೌಡ(62ವ), ಅವರ ಪತ್ನಿ ಗಂಗಮ್ಮ (55ವ.), ಎಂಡೋಸಲ್ಫಾನ್ ಪೀಡಿತರಾದ ಪುತ್ರ ಸದಾನಂದ ಗೌಡ(32ವ.) ಮತ್ತು ಇನ್ನೊರ್ವ ಪುತ್ರ ನಿತ್ಯಾನಂದ (28ವ.) ಇವರೇ ಆತ್ಮಹತ್ಯೆ ಮಾಡಿಕೊಂಡವರು.
ಈ ಪೈಕಿ ನಿತ್ಯಾನಂದ ಗೌಡ ಅವರ ಮೃತದೇಹ ಇವರ ತೋಟದ ಪಕ್ಕದ ಲಕ್ಷ್ಮೀನಾರಾಯಣ ಭಟ್ ಅವರ ಜಾಗದ ಕೆರೆಯಲ್ಲಿ ಪತ್ತೆಯಾದರೆ ತಂದೆ, ತಾಯಿ ಮತ್ತು ಹಿರಿಯ ಪುತ್ರನ ಮೃತ ದೇಹ ಮನೆ ಎದುರಿನ ಅವರ ಸ್ವಂತ ಜಾಗದ ಕೆರೆಯಲ್ಲಿ ಪತ್ತೆಯಾಗಿದೆ.

ಬಾಬು ಎಂಬವರ ಮನೆಯಲ್ಲಿ 2ರಿಂದ 2 ವರೆ ಎಕ್ಕರೆಯಷ್ಟು ಕೃಷಿ ಭೂಮಿಯಿದ್ದು, ಉತ್ತಮವಾದ ಕೃಷಿಯನ್ನು ಮಾಡಿದ್ದಾರೆ. ಬಾಬು ಗೌಡ ಎಂಬವರೆ ಈ ಇಳಿವಯಸ್ಸಿನಲ್ಲಿ ಕಠಿಣ ಪರಿಶ್ರಮದಿಂದ ಕೃಷಿ ಮತ್ತು ಇತರ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.  4 ವರ್ಷಗಳ ಹಿಂದೆ ಹೊಸ ಮನೆಯನ್ನು ಕಟ್ಟಿದ್ದು, ಮನೆ ಮತ್ತು ಪರಿಸರ ಬಹಳ ಸುಂದರವಾಗಿದೆ. ಆದರೆ ಇತ್ತೀಚೆಗೆ ತನ್ನ ಹಿರಿಯ ಪುತ್ರನ ಮಾನಸಿಕ ಖಿನ್ನತೆ ಮತ್ತು ಎಂಡೀಸಲ್ಫಾನ್ ತೊಂದರೆ, ಇನ್ನೋರ್ವ ಪುತ್ರನಿಗೆ ಅಪಘಾತದಿಂದಾಗಿರುವ ತೊಂದರೆ, ಮತ್ತೊರ್ವ ಕಿರಿಯ ಪುತ್ರ ಅಲ್ಪ ಮಾನಸಿಕ ದೌರ್ಬಲ್ಯಕ್ಕೆ ಒಳಗಾಗಿ ಮಂಗಳೂರು ಮತ್ತು ಇತರ ಪ್ರದೇಶದಲ್ಲಿ ಎಲ್ಲಾದರು ಅಲೆಯುತ್ತಾ ಬಿಕ್ಷೆಯನ್ನು ಬೇಡುತ್ತಾ, ನಾಟಕಗಳಲ್ಲಿ ಸ್ರೀ ಪಾತ್ರವನ್ನು ಮಾಡುತ್ತ ಮನೆಯ ಸಂಪರ್ಕವನ್ನು ಕಡಿಮೆಗೊಳಿಸಿರುವ ಈ ಎಲ್ಲಾ ಕಾರಣಗಳಿಂದ ಹಾಗೂ ಪತ್ನಿ ಕೂಡ ಮಾನಸಿಕ  ಖಿನ್ನತೆಗೆ ಒಳಗಾದ ಹಿನ್ನೆಲೆಯಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವರೆಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.