ಬೆಳ್ತಂಗಡಿ ಎಪಿಎಂಸಿ : ಜ.12ಕ್ಕೆ ಚುನಾವಣೆ 24 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ

1 ಸಹಕಾರಿ ಕ್ಷೇತ್ರ:  ಜೀವಂಧರ ಕುಮಾರ್ ಸುಂದರ ಗೌಡ ಅವಿರೋಧ ಆಯ್ಕೆ

 ಬೆಳ್ತಂಗಡಿ ಎ.ಪಿ.ಎಂ.ಸಿ ಚುನಾವಣೆಯಲ್ಲಿ ಸಹಕಾರಿ ಕ್ಷೇತ್ರದಿಂದ ಇಬ್ಬರು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಬೆಳ್ತಂಗಡಿ ಕೃಷಿ ಸಂಸ್ಕರಣಾ ಸಹಕಾರಿ ಸಂಘಗಳ ಕ್ಷೇತ್ರಕ್ಕೆ ಎನ್. ಜೀವಂಧರ ಕುಮಾರ್ ಬಳಕ್ಕ ಹಾಗೂ ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶಗಳ ಸಹಕಾರಿ ಸಂಘಗಳ ಕ್ಷೇತ್ರಕ್ಕೆ ಇಚ್ಚಿಲ ಸುಂದರ ಗೌಡ ಅವರು ನಾಮಪತ್ರ ಸಲ್ಲಿಸಿದ್ದರು. ಈ ಎರಡು ಕ್ಷೇತ್ರಗಳಿಗೆ ಒಂದೊಂದು ನಾಮಪತ್ರ ಸಲ್ಲಿಕೆಯಾಗಿರುವುದರಿಂದ, ನಾಮಪತ್ರ ಸಲ್ಲಿಸಿದ ಜೀವಂಧರ್ ಕುಮಾರ್ ಹಾಗೂ ಇಚ್ಚಿಲ ಸುಂದರ ಗೌಡ ಅವರು ಎಪಿಎಂಸಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಬೆಳ್ತಂಗಡಿ: ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 11 ಕೃಷಿಕರ ಕ್ಷೇತ್ರ ಮತ್ತು ವರ್ತಕರ ಹಾಗೂ ಎರಡು ಸಹಕಾರಿ ಕ್ಷೇತ್ರ ಸೇರಿದಂತೆ ಒಟ್ಟು 14 ಕ್ಷೇತ್ರಗಳ ಸದಸ್ಯರ ಆಯ್ಕೆ ಚುನಾವಣೆ ಜ.12ರಂದು ನಡೆಯಲಿದ್ದು, ನಾಮಪತ್ರ ಹಿಂತೆಗೆತ ದಿನ ಅಂತಿಮ ಗೊಂಡಾಗ 2 ಕ್ಷೇತ್ರಗಳಿಗೆ ಸದಸ್ಯರ ಅವಿರೋಧ ಆಯ್ಕೆ ನಡೆದಿದ್ದು, ಉಳಿದಂತೆ ಕೃಷಿಕರ ಮತ್ತು ವರ್ತಕರ ಕ್ಷೇತ್ರ ಸೇರಿ ಒಟ್ಟು 12 ಕ್ಷೇತ್ರಗಳಿಗೆ 24 ಮಂದಿ ಅಂತಿಮ ಕಣದಲ್ಲಿ ಉಳಿದಿದ್ದಾರೆ.
ಬೆಳ್ತಂಗಡಿ ಕೃಷಿಕರ ಮಹಿಳಾ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಪಲ್ಲವಿರಾಜು, ಬಿಜೆಪಿಯಿಂದ ಮೇಲಂತಬೆಟ್ಟು ಗ್ರಾ.ಪಂ ಮಾಜಿ ಅಧ್ಯಕ್ಷೆವಿಮಲ ಕಂಚಿಂಜ, ಉಜಿರೆ ಕೃಷಿಕರ ಸಾಮಾನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ನ್ಯಾಯವಾದಿ ಕೇಶವ ಗೌಡ ಪಿ, ಬಿಜೆಪಿಯಿಂದ ತಾ.ಪಂ ಮಾಜಿ ಸದಸ್ಯ ಕೇಶವ ಭಟ್ ಅತ್ತಾಜೆ, ಇಂದಬೆಟ್ಟು ಕೃಷಿಕರ ಅನುಸೂಚಿತ ಪಂಗಡ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯಿಂದ ಲ್ಯಾಂಪ್ ಸೊಸೈಟಿ ಮಾಜಿ ನಿರ್ದೇಶಕ ಆನಂದ ನಾಯ್ಕ ಪಡೀಲು, ಕಾಂಗ್ರೆಸ್‌ನಿಂದ ಎಪಿಎಂಸಿ ಮಾಜಿ ಉಪಾಧ್ಯಕ್ಷ ಲಕ್ಷ್ಮಣ ನೆರಿಯ ಅಂತಿಮ ಕಣದಲ್ಲಿ ಹೋರಾಟ ನಡೆಸುತ್ತಿದ್ದಾರೆ.
ನೆರಿಯ ಕೃಷಿಕರ ಸಾಮಾನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಪುದುವೆಟ್ಟು ಗ್ರಾ.ಪಂ ಮಾಜಿ ಅಧ್ಯಕ್ಷ ಅಬ್ದುಲ್‌ಗಫೂರ್, ಬಿಜೆಪಿಯಿಂದ ಪಂಚಶ್ರೀ ಗ್ರೂಪ್ಸ್ ಪಾಲುದಾರ ನಾರಾಯಣ ಗೌಡ ಕೊಳಂಬೆ, ಕೊಕ್ಕಡ ಕೃಷಿಕರ ಅನುಸೂಚಿತ ಜಾತಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯಿಂದ ತಾ.ಪಂ ಮಾಜಿ ಸದಸ್ಯ ಈಶ್ವರ ಭೈರ, ಕಾಂಗ್ರೆಸ್‌ನಿಂದ ತಾ.ಪಂ ಮಾಜಿ ಉಪಾಧ್ಯಕ್ಷ ಚಂದು ಎಲ್, ಕಣಿಯೂರು ಕೃಷಿಕರ ಸಾಮಾನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗ್ರಾ.ಪಂ ಮಾಜಿ ಅಧ್ಯಕ್ಷ ಗಣೇಶ್ ಪ್ರಸಾದ್ ಕೆರ್ಮುನ್ನಾಯ, ಬಿಜೆಪಿಯಿಂದ ಪುರಂದರ ಶೆಟ್ಟಿ ಅವರ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿದೆ.
ಮಚ್ಚಿನ ಕೃಷಿಕರ ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿಯಿಂದ ಜಯಾನಂದ ಕಲ್ಲಾಪು, ಕಾಂಗ್ರೆಸ್‌ನಿಂದ ಎಪಿಎಂಸಿ ಮಾಜಿ ಸದಸ್ಯ ಸಂತೋಷ್‌ಕುಮಾರ್ ಅದಮ್ಮ, ಮಡಂತ್ಯಾರು ಕೃಷಿಕರ ಮಹಿಳಾ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸುಲೋಚನಾ ಆರ್ ಬಂಗೇರ, ಬಿಜೆಪಿಯಿಂದ ಸೆಲೆಸ್ಟಿನ್ ಡಿ ಸೋಜಾ, ವೇಣೂರು ಕೃಷಿಕರ ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದಿಂದ ಬಿಜೆಪಿಯಿಂದ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಸಂಘಟಕ ಅಶೋಕ್ ಗೋವಿಯಸ್, ಕಾಂಗ್ರೆಸ್‌ನಿಂದ ಎ. ಜಯರಾಮ ಶೆಟ್ಟಿ, ನಾರಾವಿ ಕೃಷಿಕರ ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯಿಂದ ನಾರಾವಿ ಶಕ್ತಿ ಕೇಂದ್ರದ ಅಧ್ಯಕ್ಷ ವಿಠಲ ಸಿ. ಪೂಜಾರಿ, ಕಾಂಗ್ರೆಸ್‌ನಿಂದ ಕಾಶಿಪಟ್ಣ ಗ್ರಾ.ಪಂ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ ಕಣದಲ್ಲಿದ್ದು ತೀವ್ರ ಪೈಪೋಟಿ ನಡೆಯುತ್ತಿದೆ.
ಅಳದಂಗಡಿ ಕೃಷಿಕರ ಸಾಮಾನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸುಲ್ಕೇರಿಮೊಗ್ರು ಸಹಕಾರಿ ಸಂಘದ ಮಾಜಿ ನಿರ್ದೇಶಕ ಚಿದಾನಂದ ಪೂಜಾರಿ ಎಲ್ಡಕ್ಕ, ಬಿಜೆಪಿಯಿಂದ ರೈತ ಮೋರ್ಚಾದ ಮಾಜಿ ಅಧ್ಯಕ್ಷ ಭಾಸ್ಕರ ಸಾಲ್ಯಾನ್, ವರ್ತಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ತಾಲೂಕು ರೈತ ಮೋರ್ಚಾದ ಉಪಾಧ್ಯಕ್ಷ ಡಿ. ಚಂದ್ರಶೇಖರ ಗೌಡ, ಕಾಂಗ್ರೆಸ್‌ನಿಂದ ಮಡಂತ್ಯಾರು ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಪುಷ್ಪರಾಜ ಹೆಗ್ಡೆ ಕಣದಲ್ಲಿದ್ದು, ಹಣಾಹಣಿ ನಡೆಯುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.