ಗೇರುಕಟ್ಟೆ : ಜೀಪು ಹಾಗೂ ಬೈಕ್ ನಡುವೆ ಡಿಕ್ಕಿ, ಮರಳಿ ವಿದೇಶಕ್ಕೆ ತೆರಳಬೇಕಿದ್ದ ಸವಾರ ಸಾವು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

78

bike 1

bike 2

bike 3

bike

ಗೇರುಕಟ್ಟೆ : ಗೇರುಕಟ್ಟೆಯ ಕೊರಂಜ ಶಾಲೆಯ ಸಮೀಪ ಜ.೦1ರಂದು ಜೀಪು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಈ ವೇಳೆ ಬಂಟ್ವಾಳ ಪೆರ್ನೆ ಬಿಳಿಯೂರು ಬಾನೊಟ್ಟು ನಿವಾಸಿ ಅಬೂಬಕ್ಕರ್‌ರವರ ಪುತ್ರ ಸರ್ಫುದ್ದೀನ್(26ವ) ಅಫಘಾತದಲ್ಲ್ಲಿ ಮೃತ ಪಟ್ಟಿದ್ದಾರೆ.
ಇವರು ತನ್ನ ಪಲ್ಸರ್ ಬೈಕ್‌ನಲ್ಲಿ ಗುರುವಾಯನಕೆರೆಯಿಂದ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ವೇಳೆ ಎದುರಿನಿಂದ ಬಂದ ಜೀಪು ಬೈಕ್‌ಗೆ ಡಿಕ್ಕಿ ಹೊಡೆದು ಗಂಭೀರ ಗಾಯಗಳಾಗಿದ್ದು, ಆ ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿದಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಮೃತ ದುರ್ದೈವಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಮದುವೆಯಾಗಲು ಹುಡುಗಿ ನೋಡಲೆಂದು ಮೂರು ದಿನಗಳ ಹಿಂದೆ ಊರಿಗೆ ಬಂದಿದ್ದರು. ಜ.2ರಂದು ಮತ್ತೆ ವಿದೇಶಕ್ಕೆ ಹೋಗುವವರಿದ್ದರು ಎಂದು ಹೇಳಲಾಗಿದೆ. ಪ್ರಕರಣ ಬೆಳ್ತಂಗಡಿ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.