ಐಎಸ್‌ಓ ಪ್ರಶಸ್ತಿ ಪತ್ರ ಪಡೆದ ರಾಜ್ಯದ ಮೊದಲ ಗ್ರಾಮ ಪಂಚಾಯತ್ ಲಾಯಿಲ

  ಲಾಯಿಲ : ಗ್ರಾಮಸ್ಥನೊಬ್ಬ ಪಂಚಾಯತ್‌ಗೆ ಬಂದೊಡನೆ ಎಲ್ಲ ರೀತಿಯ ಸೇವೆಗಳು ದೊರಕುವಂತೆ ಮಾಡುವಲ್ಲಿ ಸಫಲವಾದ ಬೆಳ್ತಂಗಡಿಯ ಲಾಲ ಗ್ರಾಮ ಪಂಚಾಯತ್‌ಗೆ ಅಂತರಾಷ್ಟ್ರೀಯ ಸ್ಟಾಂಡರ್ಡ್ ಆರ್ಗನೈಸೇಷನ್(ಐಎಸ್‌ಓ)ನ ಪ್ರಶಸ್ತಿ ಪತ್ರ ದೊರೆತಿದೆ.
ಈ ಮೂಲಕ ಐಎಸ್‌ಓ ಮಾನ್ಯತೆ ಪಡೆದ ರಾಜ್ಯದ ಪ್ರಥಮ ಪಂಚಾಯತ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಆಸನಗಳ ವ್ಯವಸ್ಥೆ ಸಾರ್ವಜನಿಕರ ಸೇವೆ, ಕುಡಿಯುವ ನೀರು, ಶೌಚಾಲಯ, ದಿನಪತ್ರಿಕೆ, ಗ್ರಂಥಾಲಯ, ಸಭಾಂಗಣ ಮುಂತಾದ ಗುಣಮಟ್ಟವನ್ನು ಪರಿಗಣಿಸಿ ಈ ಪ್ರಶಸ್ತಿ ಪತ್ರ ನೀಡಲಾಗಿದೆ.
ಲಾಯಿಲ ಪಂಚಾಯತ್‌ಗೆ ಇದನ್ನು ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಿಫಾರಸ್ಸು ಮಾಡಿತ್ತು. ದ.ಕ ದ ಬಹುತೇಕ ಪಂಚಾಯತ್‌ಗಳು ಈ ಮಾನ್ಯತೆಯ ಅರ್ಹತೆ ಪಡೆದಿವೆ.
ಕೇರಳದ ಶೇ.50ರಷ್ಟು ಪಂಚಾಯತ್‌ಗಳು ಇಂತಹ ಮಾನ್ಯತೆ ಪಡೆದಿರುವುದು ವಿಶೇಷವಾಗಿದೆ. ಸಾಮ್ಯಾನವಾಗಿ ಕಂಪನಿಗಳು ತಮ್ಮ ಗುಣಮಟ್ಟ ಉತ್ತಮವಾದದು ಎಂದು ಪ್ರಮಾಣೀಕರಿಸಲು ಅಂತರಾಷ್ಟ್ರೀಯ ಗುಣಮಟ್ಟದ ಮಾನ್ಯತೆಯನ್ನು ಪಡೆಯುತ್ತವೆ.
ಆದರೆ, ಸ್ಥಳೀಯಾಡಳಿತ ಸಂಸ್ಥೆ ಇಂತಹ ಮಾನ್ಯತೆಗೆ ಪಾತ್ರವಾಗುತ್ತಿರುವುದು ವಿರಳ. ಬೆಳ್ತಂಗಡಿ ಸೇರಿದಂತೆ ದ.ಕ ಜಿಲ್ಲೆಯ ಪೊಲೀಸ್ ಠಾಣೆಗಳು ಪಡೆದಿವೆ. ಆದರೆ ಪಂಚಾಯಿತಿಗಳು ಇದುವರೆಗೆ ಪಡೆದಿಲ್ಲ.
ಒಂದು ಕಾರ್ಪೊರೇಟ್ ಸಂಸ್ಥೆಗೆ ಭೇಟಿ ಕೊಟ್ಟಂತೆ ಪಡಸಾಲೆ, ಆಸನಗಳ ವ್ಯವಸ್ಥೆ, ಸಾರ್ವಜನಿಕರ ಸೇವೆ, ಕುಡಿಯುವ ನೀರು, ಶೌಚಾಲಯ, ದಿನಪತ್ರಿಕೆ, ಗ್ರಂಥಾಲಯ, ಸಭಾಂಗಣ ಇತ್ಯಾದಿಗಳು ಇಲ್ಲಿವೆ. ವಿದ್ಯುತ್, ದೂರವಾಣಿ ಬಿಲ್ಲುಗಳನ್ನು ಕೂಡ ಇಲ್ಲಿ ಸ್ವೀಕರಿಸಲಾಗುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.