ಕುಂಟಿನಿ ಶಾಲೆಯಲ್ಲಿ 16 ವರ್ಷಗಳ ನಂತರ ಮೊದಲ ಬಾರಿಗೆ ಸಂಭ್ರಮದ ವಾರ್ಷಿಕೋತ್ಸವ

kuntini school copy ಉಜಿರೆ: ಇಲ್ಲಿಯ ಕಿ.ಪ್ರಾ.ಶಾಲೆ ಕುಂಟಿನಿಯಲ್ಲಿ 16 ವರ್ಷಗಳ ನಂತರ ಮೊದಲ ಬಾರಿಗೆ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಬೆಳಿಗ್ಗೆ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಇಲ್ಯಾಸ್ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಾಯಿಲ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವೀಣಾ ರಾವ್ ವಹಿಸಿದ್ದರು. ಉದ್ಘಾಟನೆಯನ್ನು ತಾ.ಪಂ. ಅಧ್ಯಕ್ಷೆ ಶ್ರೀಮತಿ ದಿವ್ಯಜ್ಯೋತಿ ಶಾಲಾ ವಾರ್ಷಿಕೋತ್ಸವ ಅನ್ನುವಂತದ್ದು ಪ್ರತಿಯೊಬ್ಬ ನಾಗರಿಕನು ಜಾತಿ ಭೇದ ಮರೆತು ಆಚರಿಸುವಂತಹ ಹಬ್ಬ ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳ ಪ್ರತಿಭೆಗಳನ್ನು ಹೊರತರಲು ಸಾಧ್ಯವಿದೆ ಎಂದರು. ಶಾಲೆಯ ವಾರ್ಷಿಕೋತ್ಸವದ ಸವಿ ನೆನಪಿಗಾಗಿ ಹೊರತಂದ ಸ್ಮರಣ ಸಂಚಿಕೆಯನ್ನು ತಾ.ಪಂ. ಸದಸ್ಯ ಸುಧಾಕರ್ ಬಿ.ಎಲ್. ಬಿಡುಗಡೆ ಮಾಡಿ ಸರಕಾರಿ ಶಾಲೆಗಳು ಅವನತಿಯತ್ತ ಸಾಗುತ್ತಿದೆ ಇದನ್ನು ಉಳಿಸುವಂತಹ ಕಾರ್ಯ ನಮ್ಮ ಜನಪ್ರತಿನಿಧಿಗಳಿಂದ ನಡೆಯಬೇಕಾಗಿದೆ. ಖಾಸಾಗಿ ಶಾಲೆಗಳಿಗೆ ಜನರು ಆಕರ್ಷಣೆಯಾಗುವಂತಹ ಕೆಲವೊಂದು ಅಂಶಗಳನ್ನು ಸರಕಾರಿ ಶಾಲೆಗಳಿಗೂ ಅಳವಡಿಸಿದರೆ ಸರಕಾರಿ ಶಾಲೆಗಳ ಅಭಿವೃದ್ಧಿಯೂ ಸಾಧ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಾರಾ ಕೇಸರಿ ಮಾತನಾಡಿ ಸರಕಾರಿ ಶಿಕ್ಷಣ ಕ್ಷೇತ್ರದಲ್ಲಿ ಸೌಲಭ್ಯಗಳು ಹಲವಾರಿದ್ದು ಸರಕಾರಿ ಶಾಲೆಗೆ ಸೇರ್ಪಡೆಯಾಗುವಂತಹ ಮಕ್ಕಳ ಸಂಖ್ಯೆ ಕಡಿಮೆ ಇದೆ. ಸರಕಾರಿ ಶಾಲೆಗಳ ಅಭಿವೃದ್ಧಿ ಪೋಷಕರಿಂದಲೇ ನಡೆಯಬೇಕಾಗಿದೆ ಎಂದರು. ಲಾಯಿಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯಾದಂತಹ ಪ್ರಕಾಶ್ ಶೆಟ್ಟಿ ನೊಚ್ಚ ಮಾತನಾಡಿ ಗ್ರಾಮಗಳ ಅಭಿವೃದ್ಧಿಯಾಗಬೇಕಾದರೆ ಗ್ರಾಮಗಳಲ್ಲಿರುವ ಶಾಲೆಗಳ ಅಭಿವೃದ್ದಿಯಾಗಬೇಕಾಗಿದೆ. ಆ ಮೂಲಕ ಒಂದೇ ಗಾಳಿ, ಒಂದೇ ನೀರು ಸೇವಿಸುವ ನಾವೆಲ್ಲಾ ಜಾತಿಭೇದ ಮರೆತು ಸ್ವಚ್ಚ ಗ್ರಾಮ ಕಟ್ಟೋಣ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಸ್ಥಾಪಕಾಧ್ಯಕ್ಷರೂ ಸೇರಿ ಎಲ್ಲಾ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನಿಸಲಾಯಿತು. ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಶಾಲಾ ಅಧ್ಯಾಪಕ, ಅಧ್ಯಾಪಕಿಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಬಿಸಿಯೂಟ ಅಡುಗೆಯವರನ್ನು ಗುರುತಿಸಿ ಸನ್ಮಾನಿಸಲಾಯಿತು. ಶಿಕ್ಷಣ ಸಮನ್ವಯಾಧಿಕಾರಿ ಗಣೇಶ್ ಐತಾಳ್, ಲಾಯಿಲ ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್ ಡೋಂಗ್ರೆ ಶುಭಹಾರೈಸಿದರು. ವೇದಿಕೆಯಲ್ಲಿ ಕೆ.ಜಿ. ಲಕ್ಷ್ಮಣ ಶೆಟ್ಟಿ ಸಹಾಯಕ ನಿರ್ದೇಶಕರು ಅಕ್ಷರದಾಸೋಹ, ಲಾಯಿಲ ಗ್ರಾ.ಪಂ. ಸದಸ್ಯರಾದ ಶ್ರೀಮತಿ ರೇವತಿ, ಮಹೇಶ್ ಕೆ., ಶ್ರೀಮತಿ ವಸಂತಿ, ಶಿಕ್ಷಣ ಸಂಯೋಜಕ ಸುಭಾಷ್ ಜಾಧವ್, ಕಪುಚಿನ್ ಕ್ರಿಷಿಕ ಸೇವಾ ಕೇಂದ್ರದ ನಿರ್ದೇಶಕ ಫಾ| ವಿನೋದ್ ಮಸ್ಕರೇನ್ಹಸ್, ಶಾಲೆಯ ಪ್ರಥಮ ವಿದ್ಯಾರ್ಥಿ ಯು.ಎಂ. ಜುನೈದ್ ಬಾದ್‌ಷಾ ಕುಂಟಿನಿ ಉಪಸ್ಥಿತರಿದ್ದರು. ಮಧ್ಯಾಹ್ನ ನಡೆದ ವಿದ್ಯಾರ್ಥಿ ಪೋಷಕರ ಸ್ನೇಹ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಸ್ಥಾಪಕಾಧ್ಯಕ್ಷ ಅಬೂಬಕ್ಕರ್ ಜಿ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಾಯಿಲ ಕ್ಷೇತ್ರದ ಮಾಜಿ ಜಿ.ಪಂ. ಸದಸ್ಯ ರಾಜಶೇಖರ ಅಜ್ರಿ, ಈಶ್ವರ ಭೈರ, ಮಾಜಿ ಗ್ರಾ.ಪಂ. ಸದಸ್ಯ ಸುಲೈಮಾನ್, ಹರಿಪ್ರಸಾದ್ ಶೆಟ್ಟಿ, ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷ ಝಾಕೀರ್ ಹುಸೈನ್, ನಿವೃತ್ತ ಡಿ.ಎಫ್.ಒ ಯು.ಎಚ್. ಮುಹಮ್ಮದ್, ಉಮರ್ ಕುಂಞಿ ನಾಡ್ಜೆ, ಇಸ್ಮಾಯಿಲ್ ಕೆ.ಎಚ್. ಇರ್ಫಾನ್, ಅಬ್ದುಲ್ ರಹಿಮಾನ್, ಮಹಮ್ಮದ್ ನೌಫಲ್, ಕು| ದಿವ್ಯಶ್ರೀ ಉಪಸ್ಥಿತರಿದ್ದರು. ಸಂಜೆ ಸಮಾರೋಪ ಲಾಯಿಲ ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ವೀಣಾರಾವ್ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಧಾನ ಭಾಷಣಗಾರರಾಗಿ ಯು.ಎಚ್. ಖಾಲಿದ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಮುಹಿಯ್ಯುದ್ಧೀನ್ ಜುಮಾ ಮಸೀದಿಯ ಅಧ್ಯಕ್ಷ ಬಿ.ಎಮ್.ಅಬ್ದುಲ್ ಹಮೀದ್, ಝಕರಿಯಾ ಎಸ್.ಎಲ್.ಬಿ., ಉಜಿರೆ ಗ್ರಾ.ಪಂ. ಸದಸ್ಯರಾದ ಅಶ್ರಫ್ ಹಸೈನಾರ್, ಜಯಂತ ಶೆಟ್ಟಿ ಕುಂಟಿನಿ, ಹಾಮದ್ ಬ್ಯಾರಿ, ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು. ನಂತರ ಪುಟ್ಟ ಪುಟ್ಟ ಮಕ್ಕಳ ಮತ್ತು ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ಡ್ರಗ್ಸ್ ದಿ ಕಿಲ್ಲರ್ ಎನ್ನುವಂತಹ ನಾಟಕ ಮತ್ತು ಕಿರು ಚಿತ್ರ ಪ್ರದರ್ಶನ ಮತ್ತು ಕರಾಟೆ ಶಿಕ್ಷಕರಾದಂತಹ ರಹ್‌ಮಾನ್ ಇವರಿಂದ ಕರಾಟೆ ಪ್ರದರ್ಶನ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.