ಸಂಭ್ರಮದ ವಾರ್ಷಿಕ ಕ್ರೀಡೋತ್ಸವ- ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ

sports copyಧರ್ಮಸ್ಥಳ: ಸಂಭ್ರಮದ ವಾರ್ಷಿಕ ಕ್ರೀಡೋತ್ಸವ ಕಾರ್ಯಕ್ರಮವು ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವೈಭವದಿಂದ ಜರಗಿತು. ಅನಂತರಾಮ ನೂರಿತ್ತಾಯರವರು ಮುಖ್ಯ ಅತಿಥಿಯಾಗಿ ದೀಪ ಬೆಳಗಿಸಿ ಕ್ರೀಡಾ ಪಟುಗಳಿಗೆ ಶುಭವನ್ನು ಕೋರಿದರು ಮುಖ್ಯ ಶಿಕ್ಷಕಿಯವರಾದ ಶ್ರೀಮತಿ ಪರಿಮಳ. ಎಂ.ವಿ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ಯಾಂಡ್ ಸೆಟ್, ಸ್ಕೌಟ್ ಆಂಡ್ ಗೈಡ್ಸ್ ಹಾಗೂ ನಾಲ್ಕು ತಂಡದವರಾದ ಕೀರ್ತಿ, ಸ್ಪೂರ್ತಿ, ಜ್ಯೋತಿ, ಹಾಗೂ ಶಾಂತಿ ತಂಡದವರಿಂದ ಪಥ ಸಂಚಲನ ನಡೆಯಿತು. ಜೊತೆಗೆ ನಾಲ್ಕು ಬಣ್ಣದ ಧ್ವಜವನ್ನು ಹಿಡಿದು ತಂಡದ ನಾಮಫಲಕದ ಜೊತೆಗೆ ಪಥ ಸಂಚಲನವನ್ನು ಸುಂದರವಾಗಿ ನಡೆಸಿಕೊಡುತ್ತಾ. ’ಜಿಲ್ಲಾ ಮಟ್ಟದ ಶೆಟ್ಲ್ ಬಾಡ್ಮಿಟನ್ ವಿಜೇತನಾದ ಕುಮಾರ ಸುಮುS ಕ್ರೀಡಾಳುಗಳಿಗೆ ಪ್ರತಿಜ್ಞೆಯನ್ನು ನೆರವೇರಿಸಿದನು. ಕುಮಾರಿ ಸಂಜನಾ ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರಿ ರಕ್ಷಿತಾ ಬೇಕಲ್ ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ಕುಮಾರ ಶುಬಾನು ಧನ್ಯವಾದವನ್ನು ಕೋರಿದರು.
ದ್ಯಹಿಕ ಶಿಕ್ಷಕರಾದ ಸುಬಾಶ್ ಹಾಗೂ ಕ್ರೀಡಾ ಸಂಘದ ತರಬೇತುದಾರರಾದ ಶ್ರೀಮತಿ ಅಮೃತಾ ವಿ. ಶೆಟ್ಟಿ ಯವರು ಕ್ರೀಡಾಕೂಟದ ಸ್ಪರ್ಧೆಗಳನ್ನು ನೆರವೇರಿಸಿದರು. ಸಹಶಿಕ್ಷಕರಾದ ರಾಮಚಂದ್ರ ಭಟ್, ವಿನೋದ, ಸಹಶಿಕ್ಷಕಿಯರಾದ ಶ್ರೀಮತಿ ಆಶಾ, ಶ್ರೀಮತಿ ದಿವ್ಯಾ, ಶ್ರೀಮತಿ ಪದ್ಮಶ್ರೀ, ಶ್ರೀಮತಿ ಪ್ರಿಯಾ ಹಾಗೂ ಶ್ರೀಮತಿ ಶಿಬಾರವರು ಸ್ಪರ್ಧೆಗಳನ್ನು ನೆರವೇರಿಸಲು ಸಹಕರಿಸಿದರು.
ಸಹ ಶಿಕ್ಷಕಿ ಶಿಬಾರವರು ಬಹುಮಾನ ವಿತರಣೆ ಕಾರ್ಯಕ್ರಮವನ್ನು ನೆರವೇರಿಸಿದರು. ಒಟ್ಟಾರೆ ನಾಲ್ಕು ತಂಡಗಳಾದ ಶಾಂತಿ, ಕೀರ್ತಿ, ಸ್ಪೂರ್ತಿ ಮತ್ತು ಜ್ಯೋತಿ ತಂಡಗಳಲ್ಲಿ ಚಾಂಪಿಯನ್ ತಂಡವಾಗಿ ಸ್ಪೂರ್ತಿ ತಂಡವು ಹಾಗೆಯೇ ಉತ್ತಮ ಪಥ ಸಂಚಲನ ತಂಡವಾಗಿ ಜ್ಯೋತಿ ತಂಡವು ಬಹುಮಾನವನ್ನು ಗಳಿಸಿಕೊಂಡಿತು. ವಿಜೇತರಾದ ಸ್ಪರ್ಧಾರ್ಥಿಗಳಿಗೆ ಪದಕವನ್ನು ನೀಡಿ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.