ಮಾಯಾ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಪ್ರತಿಭಾ ದಿನಾಚರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

maya school copyಬೆಳಾಲು : ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮಾಯಾ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಅಂಗನವಾಡಿ ಕೇಂದ್ರ ಮಾಯಾ ಮತ್ತು ನಿಂತಿಕಲ್ಲು ಇದರ ಜಂಟಿ ಆಶ್ರಯದಲ್ಲಿ ಪ್ರತಿಭಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಡಿ.17ರಂದು ಜರಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಬೆಳಾಲು ಗ್ರಾ.ಪಂ ಅಧ್ಯಕ್ಷ ದಿನೇಶ್ ಕೋಟ್ಯಾನ್ ವಹಿಸಿ ಮಾತನಾಡುತ್ತಾ ಸರಕಾರಿ ಶಾಲೆಗಳಲ್ಲಿ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಿ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದರು.
ಇದರ ಅಂಗವಾಗಿ ನಡೆದ ಧ್ವಜಾರೋಹಣವನ್ನು ಸ್ಥಳೀಯ ಶ್ರೀ ಮಾಯಾ ಮಹಾದೇವ ದೇವಸ್ಥಾನದ ಆಡಳಿತಾಧಿಕಾರಿ ನಾರಾಯಣ ಸುವರ್ಣರು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಬೆಳಾಲು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮೋಹನ ಬಂಗೇರ, ಬೆಳ್ತಂಗಡಿ ನೋಟರಿ ವಕೀಲರಾದ ಶ್ರೀನಿವಾಸ ಗೌಢ, ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಮೇಲ್ವಿಚಾರಕರಾದ ಸತೀಶ್ ಗೌಡ, ಗ್ರಾ.ಪಂ ಸದಸ್ಯರುಗಳಾದ ಶ್ರೀಮತಿ ಪ್ರೇಮಾ, ಶ್ರೀಮತಿ ಭವಾನಿ, ಶ್ರೀಮತಿ ವಿಮಲ, ಸ್ಥಳೀಯ ಮಾಯಾ ಮಹೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಗಂಗಾಧರ ಸಾಲಿಯಾನ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಾಲೆಯ ಅಭಿವೃದ್ಧಿಗಾಗಿ ಕ್ರೀಡಾ ಸಾಮಾಗ್ರಿ ಒದಗಿಸುತ್ತಿರುವ ಉಜಿರೆ ನ್ಯಾಚರೋಪತಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಧರ್ಮೇಂದ್ರ ಕುಮಾರ್, ಕಬಡ್ಡಿ ತರಬೇತಿ ನೀಡಿತ್ತಿರುವ ಶಶಿಧರ ಒಡಿಪ್ರೊಟ್ಟು, ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಶ್ರೀಮತಿ ಸುಜಾತ, ಶ್ರೀಮತಿ ಚೈತ್ರ, ವರ್ಗಾವಣೆಗೊಂಡ ಶಿಕ್ಷಕ ವೈ.ಜಿ.ವಿಶ್ವನಾಥ, ಸವಣೂರಿನ ಗ್ರಂಥಪಾಲಕಿ ಶಾರದಾ ಎಂ.ಸಿ ಇವರುಗಳನ್ನು ಸನ್ಮಾನಿಸಲಾಯಿತು. ಸೇವಾ ಪ್ರತಿನಿಧಿ ಆಶಾ, ಅಂಗನವಾಡಿ ಕಾರ್ಯಕರ್ತೆ ಲಲಿತಾ, ಶ್ರೀಮತಿ ಭಾರತಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳು ಊರವರು ಸಹಕರಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶೇಖರಗೌಡ ಕೊಲ್ಲಿಮಾರು ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಧರ್ಣಮ್ಮ ವರದಿ ವಾಚಿಸಿದರು. ಅಧ್ಯಾಪಕರಾದ ಪ್ರಸನ್ನ, ಜ್ಯೋತಿ, ಎಂ.ಎಸ್ ಭವ್ಯ ಬಹುಮಾನ ಪಟ್ಟಿ ವಾಚಿಸಿದರು.
ಶಿಕ್ಷಕ ರಾಜೇಶ್ ಕಾರ್ಯಕ್ರಮ ನಿರೂಪಿಸಿ, ಯೋಗೀಶ್ ಹೆಚ್.ಆರ್ ವಂದಿಸಿದರು. ಸ್ಥಳೀಯ ಸ್ತ್ರೀಶಕ್ತಿ, ಜ್ಞಾನ ವಿಕಾಸ ಕೇಂದ್ರ, ನವೋದಯ, ದಯಾಲ್‌ಭಾಗ್, ಪ್ರಗತಿಬಂಧು ಒಕ್ಕೂಟದ ಸದಸ್ಯರು ಸಹಕರಿಸಿದರು. ಅನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.