HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಕುಕ್ಕುಂದೂರು ದೇವಸ್ಥಾನಕ್ಕೆ ಹೆಗ್ಗಡೆ ಭೇಟಿ

heggade kukkunduru beti copy ಧರ್ಮಸ್ಥಳ : ಶೃದ್ಧಾ ಕೇಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳ ದೇಶದಲ್ಲಿಯೇ ಅತ್ಯಂತ ಸ್ವಚ್ಚ ಧಾರ್ಮಿಕ ನಗರಿ ಎಂದು ಪ್ರಶಸ್ತಿಗೊಳಗಾಗಿರುವುದು ಸಂಭ್ರಮ ಮತ್ತು ಹೆಮ್ಮೆಯ ವಿಚಾರವಾಗಿದೆ. ಆದರೆ ಇದೀಗ ಈ ಗೌರವವನ್ನು ಉಳಿಸಿಕೊಳ್ಳಲು ಶ್ರೀ ಕ್ಷೇತ್ರವನ್ನು ಸ್ವಚ್ಚವಾಗಿ ರಕ್ಷಿಸುವುದು ಬಹು ಹೊಣೆಗಾರಿಕೆಯ ಕಾರ್ಯವಾಗಿದೆ.
ಈ ಸಂತೋಷವನ್ನು ಗ್ರಾಮ ಗ್ರಾಮಗಳಲ್ಲಿಯೂ ಹಂಚಿಕೊಳ್ಳುವಂತೆ ಮತ್ತು ಈ ಪ್ರಶಸ್ತಿಯು ಚಿರಸ್ಥಾಯಿಯಾಗಿ ನೆನಪಿನಲ್ಲುಳಿಯುವಂತೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಇದೀಗ ನೂತನ ಕ್ರಿಯಾ ಯೋಜನೆಯನ್ನು ಘೋಷಿಸಿದ್ದಾರೆ. ಅದುವೇ ಸ್ವಚ್ಚ ಶ್ರದ್ಧಾ ಕೇಂದ್ರಗಳ ಪರಿಕಲ್ಪನೆ, ಈ ನಿಟ್ಟಿನಲ್ಲಿ ಡಿ.20 ರಂದು ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಭೇಟಿ ನೀಡಿ ಕರ್ನಾಟಕ ರಾಜ್ಯದಾದ್ಯಂತ ಶ್ರದ್ಧಾ ಕೇಂದ್ರಗಳ ಸ್ವಚ್ಚತಾ ಕಾರ್ಯಕ್ರಮದ ಕರಪತ್ರ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಶ್ರದ್ಧಾ ಕೇಂದ್ರ ಸ್ವಚ್ಚವಾಗಿರಲು ಧಾರ್ಮಿಕ ಕೇಂದ್ರಕ್ಕೆ ಆಗಮಿಸುವ ಭಕ್ತರಿಗೆ ಸರಿಯಾದ ವ್ಯವಸ್ಥೆ ಮತ್ತು ಸ್ವಚ್ಚತೆಯ ಬಗ್ಗೆ ಅರಿವು ಅಗತ್ಯ. ಆ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಧಾರ್ಮಿಕ ಮತ್ತು ಶ್ರದ್ದಾ ಕೇಂದ್ರಗಳು ಜನವರಿ 14 ಮಕರ ಸಂಕ್ರಾಂತಿ ಒಳಗಾಗಿ ಸ್ವಚ್ಚ ಕೇಂದ್ರವಾಗಿರಬೇಕು ಇದಕ್ಕೆ ಸಾರ್ವಜನಿಕರು, ಸಂಘ ಸಂಸ್ಥೆಯವರು, ಊರಿನ ಗಣ್ಯರು, ಶ್ರದ್ಧಾಕೇಂದ್ರದ ಆಡಳಿತ ಮಂಡಳಿಯವರು ಸಹಕರಿಸಬೇಕು ಎಂದರು ಮತ್ತು ಜಾಗೃತಿ ಕರಪತ್ರಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮೊಕ್ತೇಸರ ಕೆ ರತ್ನರಾಜ್ ಮುದ್ಯ, ಪ್ರಧಾನ ಅರ್ಚಕ ವೇದಮೂರ್ತಿ ಶಂಕರನಾರಾಯಣ ಭಟ್, ಕಮಲಾಕ್ಷ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭ ಪ್ರಾದೇಶಿಕ ನಿರ್ದೇಶಕರಾದ ಮಹಾವೀರ ಅಜ್ರಿ, ಉಡುಪಿ ಜಿಲ್ಲೆಯ ನಿರ್ದೇಶಕರಾದ ಪುರುಷೋತ್ತಮ, ಯೋಜನಾಧಿಕಾರಿ ಕೃಷ್ಣ ಟಿ, ಮತ್ತು ಕೃಷಿ ಅಧಿಕಾರಿ, ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ದೇವಸ್ಥಾನದ ಆಡಳಿತ ಮಂಡಳಿಯವರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.