HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬೆಳ್ತಂಗಡಿಯಲ್ಲಿ ಕೋಟಿ ಚೆನ್ನಯ್ಯ ಕ್ರೀಡಾಕೂಟ ಉದ್ಘಾಟನೆ

koti chennayya ಬೆಳ್ತಂಗಡಿ: ತಾಲೂಕಿನಲ್ಲಿ ಅತೀ ಹೆಚ್ಚು ಸಮುದಾಯ ಹೊಂದಿರುವ ಬಿಲ್ಲವ ಸಮಾಜದ ಐಖ್ಯತೆಗಾಗಿ ಹಿರಿಯರಾದ ಪೀತಾಂಬರ ಹೇರಾಜೆಯವರು ಪ್ರಾರಂಭಿಸಿದ ಈ ಬಿಲ್ಲವ ಕ್ರೀಡಾ ಕೂಟಕ್ಕೆ ಇದೀಗ ೭ ವರ್ಷ ತುಂಬಿದ್ದು ಇದರಲ್ಲಿ ಸಮುದಾಯದ ಕ್ರೀಡಾಪಟುಗಳು, ಬಾಂಧವರ ಹೆಚ್ಚು ತೊಡಗಿಸಿಕೊಳ್ಳಬೇಕು. ಆ ಮೂಲಕ ಈ ಕ್ರೀಡಾಕೂಟವನ್ನು ಕ್ರೀಡಾ ಜಾತ್ರಯಾಗಿ ಪರಿವರ್ತಿಬೇಕು ಎಂದು ಕೃಷಿಕ ಹಾಗೂ ಉದ್ಯಮಿ ಸೋಮನಾಥ ಬಂಗೇರ ವರ್ಪಾಳೆ ಹೇಳಿದರು.
ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆಯ ಆಶ್ರಯದಲ್ಲಿ ಡಿ. 18 ರಂದು ಬೆಳ್ತಂಗಡಿ ಸರಕಾರಿ ಪ. ಪೂ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದ್ದಕೋಟಿ ಚೆನ್ನಯ್ಯ ಕ್ರೀಡಾ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ತಾಲೂಕು ಅಧ್ಯಕ್ಷ, ನ್ಯಾಯವಾದಿ ಭಗೀರಥ ಜಿ ಅವರು ಮಾತನಾಡಿ, ಈ ಕ್ರೀಡಾ ಕೂಟ ಸಮುದಾಯದ ಎಲರೂ ಜೊತೆಯಾಗಿ ಸೇರಿ ಖುಷಿಪಡುವ ರೀತಿಯಲ್ಲಿ ಪರಿವರ್ತನೆಯಾಗಬೇಕು., ಅದಕ್ಕೆ ಎಲ್ಲರ ಸಹಕಾರ ಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ಉಜಿರೆಯ ಯುವ ಉದ್ಯಮಿ ರವಿ ಕುಮಾರ್ ಬರಮೇಲು ಅವರು ಮಾತನಾಡಿ, ಸಂಘಟನೆಯೊಳಗಿನ ನಾಯಕರಲ್ಲಿ ರಾಜಕೀಯ ಮತ್ತು ಸ್ವಾರ್ಥತೆಯ ಭಿನ್ನಾಭಿಪ್ರಾಯಗಳಿದ್ದು ಅವುಗಳನ್ನು ದೂರವಿರಿಸಿ ಒಗ್ಗಟ್ಟನ್ನು ಕಾಣಬೇಕು. ಒಂದೇ ಭಾವನೆಯಿಂದ ಒಗ್ಗಟ್ಟಿನಿಂದ ಕಾರ್ಯಕ್ರಮ ಸಂಯೋಜಿಸಬೇಕು ಎಂದರು. ಯೋಗೀಶ್ ಕುಮಾರ್ ಕೆ. ಎಸ್ ಅವರಿಗೆ ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು ಅವರಂತೆ ಸಮಾಜ ಸೇವೆಯಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. ಇದು ನಮ್ಮ ಸಮುದಾಯಕ್ಕೆ ಹೆಮ್ಮೆಯ ವಿಚಾರ ಎಂದರು. ಇನ್ನಿಬ್ಬರು ಅತಿಥಿಗಳಾಗಿದ್ದ ಮಾಜಿ ಶಾಸಕ ಪ್ರಭಾಕರ ಬಂಗೇರ ಮತ್ತು ಯುವವಾಹಿನಿ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಅವರು ಸಂದರ್ಭೋಚಿತವಾಗಿ ಮಾತನಾಡಿ, ಒಗ್ಗಟ್ಟು ಮತ್ತು ಸಂಕಲ್ಪದ ಬಗ್ಗೆ ತಿಳಿಹೇಳಿದರು.
ವೇದಿಕೆಯಲ್ಲಿ ಸಂತೋಷ್ ಕುಮಾರ್ ಕಾಪಿನಡ್ಕ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷ ತನುಜಾ ಶೇಖರ್, ಶೇಖರ್ ಬಂಗೇರ ಉಪಸ್ಥಿತರಿದ್ದರು. ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಚಿದಾನಂದ ಇಡ್ಯ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಸಂತೋಷ್ ಪಿ ಕೋಟ್ಯಾನ್ ಧನ್ಯವಾದ ಸಲ್ಲಿಸಿದರು. ಸ್ಮಿತೇಶ್ ಎಸ್ ಬಾರ್ಯ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.