HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ನಿಡ್ಲೆ ಕರುಂಬಿತ್ತಿಲ್‌ನ ಅಂತರಾಷ್ಟ್ರೀಯ ವಯಲಿನ್ ವಾದಕ ವಿಠಲ ರಾಮಮೂರ್ತಿಯವರಿಗೆ ಪ್ರತಿಷ್ಠಿತ ವಾಣೀ ಕಲಾ ಸುಧಾಕರ ಪ್ರಶಸ್ತಿ

nidle ramamurthi prasasti copyನಿಡ್ಲೆ : ಕರ್ನಾಟಕ ಸಂಗೀತ ಕ್ಷೇತ್ರದ ವಯಲಿನ್ ದಂತಕತೆ ಲಾಲ್ಗುಡಿ ಜಯರಾಮನ್ ಅವರ ಪ್ರೀತಿಯ ಶಿಷ್ಯ ಮೂಲತಃ ನಿಡ್ಲೆ ಕರುಂಬಿತ್ತಿಲ್ ಮನೆಯ ವಿದ್ವಾನ್ ವಿಠಲ ರಾಮಮೂರ್ತಿ ಯವರು ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ವಯಲಿನ್ ವಾದನದಲ್ಲಿ ಮಾಡಿರುವ ಅನನ್ಯ ಸಾಧನೆಗಾಗಿ ಸಂಗೀತ ಕ್ಷೇತ್ರದ ದಿಗ್ಗಜರಿಗಾಗಿ ಚೆನ್ನೈಯ ತ್ಯಾಗಬ್ರಹ್ಮ ಸಭಾದಿಂದ ಪ್ರತೀ ವರ್ಷ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾದ ವಾಣೀ ಕಲಾ ಸುಧಾಕರ ಈ ವರ್ಷದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಂಗೀತ ಕಲೆಯನ್ನೇ ಆರಾಧಿಸುವ ಮನೆತನ ಧರ್ಮಸ್ಥಳ ಸಮೀಪದ ನಿಡ್ಲೆ ಕರುಂಬಿತ್ತಿಲ್ ನಲ್ಲಿ ವಿಥಲ ರಾಮಮೂರ್ತಿ ಜನಿಸಿದ್ದರೂ ಸಂಗೀತ ಕ್ಷೇತ್ರದ ಅನನ್ಯ ಸಾಧನೆಗಾಗಿ ದೂರದ ಚೆನ್ನೈಯಲ್ಲಿ ನೆಲೆಸಿ ಮೇರು ಕಲಾವಿದರ ಸಾಂಗತ್ಯದಿಂದ ಅಂತರಾಷ್ಟ್ರೀಯ ಕಲಾವಿದನಾಗಿ ಇಂದು ತನ್ನ ಛಾಪನ್ನು ಒತ್ತಿದ್ದಾರೆ. ಲಾಲ್ಗುಡಿಯವರ ಶಿಷ್ಯನಾಗಿ ಮಧುರವಾದ ಅನುಪಮ ವಯಲಿನ್ ವಾದನಕ್ಕೆ ಹೆಸರಾಗಿರುವ ಇವರು ಆಕಾಶವಾಣಿಯ ಎ-ಟಾಪ್ ಕಲಾವಿದರಾಗಿದ್ದಾರೆ.
ಸಂಗೀತ ಕ್ಷೇತ್ರದ ಎಲ್ಲಾ ಪ್ರಖ್ಯಾತ ಕಲಾವಿದರಿಗೆ ಪಕ್ಕ ವಾದ್ಯಕರಾಗಿ ಪ್ರಶಂಸೆಗೊಳಗಾಗಿರುವ ಇವರು ದೇಶ ವಿದೇಶಗಳಲ್ಲಿ ಎಣಿಕೆಯಿಲ್ಲದಷ್ಟು ಕಛೇರಿಗಳನ್ನು ನೀಡಿ ಸದಾ ಕಲಾ ಸೇವೆ ಮಾಡುತ್ತಿದ್ದಾರೆ. ಉತ್ತಮ ಗುರುವಾಗಿ ಅಸಂಖ್ಯಾತ ಹೆಸರಾಂತ ಶಿಷ್ಯ ಗಡಣವನ್ನೇ ಹೊಂದಿರುವ ಇವರು ವರ್ಷದಲ್ಲೊಮ್ಮೆ ತನ್ನ ಹುಟ್ಟೂರು ಕರುಂಬಿ ಮನೆಯಲ್ಲಿ ಬೇಸಗೆ ಸಂಗೀತ ಶಿಬಿರವನ್ನು ಪ್ರತೀ ವರ್ಷವೂ ನಡೆಸುವ ಮೂಲಕ ಸಂಗೀತ ಕ್ಷೇತ್ರದ ದಿಗ್ಗಜರನ್ನು ಕರೆತಂದು ತಮ್ಮ ಹುಟ್ಟೂರಿಗೂ ಪರಿಚಯಿಸುತ್ತಿರುವುದು ಇವರ ಹಿರಿಮೆಯಾಗಿದೆ. ಆದಿ ಶಂಕರಾಚಾರ್ಯರ ಚತುರಾಮ್ನಾಯ ಶಾರದಾ ಪೀಠಗಳಲ್ಲೊಂದಾದ ಕಂಚಿ ಕಾಮಕೋಟಿ ಪೀಠದ ಆಸ್ಥಾನ ವಿದ್ವಾನ್ ಕೂಡಾ ಆಗಿರುವ ಇವರಿಗೆ ಡಿ.೯ ರಂದು ಚೆನ್ನೈನಲ್ಲಿ ನಡೆದ ತ್ಯಾಗಬ್ರಹ್ಮ ಸಭಾದ ವರ್ಣರಂಜಿತ ಸಮಾರಂಭದಲ್ಲಿ ಶ್ರೀ ವನಮಾಮಲೈ ರಾಮಾನುಜ ಜೀರ್ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
– ಸುಬ್ರಹ್ಮಣ್ಯ ಶಗ್ರಿತ್ತಾಯ ಕೊಕ್ಕಡ

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.