ಜೇಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಅಕ್ಯೂಫ್ರೆಶರ್ ಮತ್ತು ಸುಜೋಕ್ ಥೆರಫಿ ಚಿಕಿತ್ಸಾ ಶಿಬಿರ ಉದ್ಘಾಟನೆ

jc copyಚಿಕಿತ್ಸೆಯ ಪ್ರಯೋಜನ : ಅಕ್ಯೂಫ್ರೆಶರ್ ಚಿಕಿತ್ಸಾ ಪದ್ಧತಿಯು ಪ್ರಾಕೃತಿಕ ಚಿಕಿತ್ಸಾ ಪದ್ಧತಿಯ ಒಂದು ಅಂಗವಾಗಿದೆ. ಅಕ್ಯೂಪ್ರೆಶರ್ ಬಿಂದುಗಳು ದೇಹದ ಅಂಗೈ, ಅಂಗುಲಗಳಲ್ಲಿ ಇರುತ್ತದೆ ಎಂದು ಖುಷಿಮುನಿಗಳು ಕಂಡುಹಿಡಿದ ಚಿಕಿತ್ಸೆಯ ಪದ್ಧತಿಯಾಗಿರುತ್ತದೆ. ನಮ್ಮ ದೇಹದ ಯಾವುದೇ ನೋವು ಮತ್ತು ಕಾಯಿಲೆಗಳಿಗೆ ಸಂಬಂಧಿಸಿದ ಅಕ್ಯೂಪ್ರೆಶರ್ ಬಿಂದುಗಳಿಗೆ ಒತ್ತುವುದರಿಂದ ಆ ಸ್ಥಳದಲ್ಲಿ ರಕ್ತ ಪರಿಚಲನೆಯು ಸರಿಯಾಗಿ ಆಗಿ ನೋವು ಕಾಯಿಲೆಗಳು ನಿವಾರಣೆ ಆಗುತ್ತದೆ. ಈ ಚಿಕಿತ್ಸಾ ಪದ್ಧತಿಯಿಂದ ದೇಹದ ಅತಿಭಾರ, ಕೀಲು ನೋವು, ಪಿತ್ತವಾತ, ಡಯಾಬಿಟಿಸ್(ಸಿಹಿಮೂತ್ರ), ಮೊಣಕಾಲು ನೋವು, ರಕ್ತದೊತ್ತಡ, ಬೆನ್ನು ಉರಿ ನೋವು, ಸಂಧಿವಾತ, ಮಲಬದ್ಧತೆ, ಅರ್ಧ ತಲೆನೋವು, ಅಪಚನ, ಮಲಬದ್ಧತೆ, ಕಾಯಿಲೆಯನ್ನು ಯಾವುದೆ ಔಷದೋಪಚಾರವಿಲ್ಲದೆ ವಿವಿಧ ವ್ಯಾದಿಗಳನ್ನು ಈ ಚಿಕಿತ್ಸಾ ಪದ್ಧತಿಯಿಂದ ನಿವಾರಣೆಗೊಳಿಸಬಹುದು.
ಈ ಚಿಕಿತ್ಸೆಯನ್ನು ಎಲ್ಲಾ ವಯೋಮಾನದವರು ಪಡೆದುಕೊಳ್ಳಬಹುದು. ಒಬ್ಬರಿಗೆ 7 ದಿನ ಬೆಳಗ್ಗೆ 8ರಿಂದ 12 ಗಂಟೆ, ಸಂಜೆ 4ರಿಂದ 8 ಗಂಟೆಯವರೆಗೆ ಚಿಕಿತ್ಸೆ ಪಡೆಯಬಹುದು ಹಾಗೂ ನೊಂದಣಿ ಶುಲ್ಕ 7 ದಿನಗಳಿಗೆ ಕೇವಲ ರೂ.150 ಮಾತ್ರವಿದ್ದು, ಚಿಕಿತ್ಸೆ 30 ನಿಮಿಷವಿರುತ್ತದೆ. ಅಕ್ಯೂಪ್ರೆಶರ್ ಟ್ರೈನಿಂಗ್, ಟ್ರೀಟ್‌ಮೆಂಟ್ ಮತ್ತು ರಿಸರ್ಚ್ ಸೆಂಟರ್‌ನ ನುರಿತ ತಜ್ಞರಾದ ಡಾ| ಎ.ಆರ್ ಜಾಖಡ್, ಡಾ| ಭವಾನಿ ಜೈನ್ ಇವರಿಂದ ಚಿಕಿತ್ಸೆ ನೀಡಲಾಗುತ್ತದೆ. ತಾಲೂಕಿನ ನಾಗರೀಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಬೆಳ್ತಂಗಡಿ ಜೇಸಿನ ಅಧ್ಯಕ್ಷ ಸಂತೋಷ್ ಪಿ.ಕೋಟ್ಯಾನ್ ಬಳಂಜ ತಿಳಿಸಿದ್ದಾರೆ. ಮಾಹಿತಿಗಾಗಿ 9480258238, 9448724657, 9449107507, 9900904170 ಸಂಪರ್ಕಿಸಬಹುದು.

ಬೆಳ್ತಂಗಡಿ : ಕಳೆದ ಹಲವು ವರ್ಷಗಳಿಂದ ಹಲವಾರು ಸಡಮಾಜಮುಖಿ ಕೆಲಸ ಕಾರ್ಯಗಳನ್ನು ಹಮ್ಮಿಕೊಂಡು ಜನರ ಪ್ರೀತಿ-ವಿಶ್ವಾಸ ಗಳಿಸಿರುವ ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಒಂದು ವಾರಗಳ ಕಾಲ ನಡೆಯುವ ಅಕ್ಯೂಫ್ರೆಶರ್ ಮತ್ತು ಸುಜೋಕ್ ಥೆರಫಿ ಚಿಕಿತ್ಸಾ ಶಿಬಿರದ ಉದ್ಘಾಟನಾ ಸಮಾರಂಭವು ಜೇಸಿ ಭವನದಲ್ಲಿ ಡಿ.13ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಉಜಿರೆ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನ ಮಾಲಕರಾದ ಮೋಹನ್ ಚೌದರಿ ದೀಪ ಬೆಳಗಿಸುವುದರ ಮೂಲಕ ನೆರವೇರಸಿ ಮಾತನಾಡಿ ಜೀವನದಲ್ಲಿ ಯೋಗ ಪ್ರಾಣಾಯಾಮದ ಜೊತೆ ಅಕ್ಯೂಫ್ರೆಶರ್ ಚಿಕಿತ್ಸೆ ಪದ್ಧತಿಯನ್ನು ಅಳವಡಿಸಿಕೊಂಡರೆ ಆರೋಗ್ಯ ಸದೃಢವಾಗುವುದರ ಜೊತೆಗೆ ದಿನಾಲೂ ಉಲ್ಲಾಸದಿಂದಿರಲು ಕಾರಣವಾಗುತ್ತದೆ ಎಂದರು. ಜೊತೆಗೆ ಇಂತಹ ಸಮಾಜಮುಖಿ ಕಾರ್ಯ ಕ್ರಮ ವನ್ನು ಹಮ್ಮಿಕೊಂಡ ಬೆಳ್ತಂಗಡಿ ಜೇಸಿಐ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಮುಖ್ಯ ಅತಿಥಿ ನೆಲೆಯಲ್ಲಿ ಡಾ| ಭವಾನಿ ಜೈನ್ ಮಾತನಾಡಿ ಅಕ್ಯುಫ್ರೆಶರ್ ಹಾಗೂ ಸುಜನೋಕ್ ಥೆರಫಿ ಚಿಕಿತ್ಸೆಯಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಇಲ್ಲ ಅದರಿಂದ ಸಮಾಜದ ಎಲ್ಲರೂ ಈ ಚಿಕಿತ್ಸೆ ಪಡೆದುಕೊಳ್ಳುವುದರೊಂದಿಗೆ ಕಾಯಿಲೆ ಹಾಗೂ ನೋವುಗಳನ್ನು ನಿವಾರಣೆಗೊಳಿಸಬಹುದು ಎಂದರು.
ವೇದಿಕೆಯಲ್ಲಿ ಬೆಳ್ತಂಗಡಿ ಜೇಸಿಐನ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಬಳಂಜ, ನಿಕಟಪೂರ್ವಾಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ, ಕಾರ್ಯದರ್ಶಿ ರಂಜಿತ್ ಹೆಚ್.ಡಿ, ಯುವ ಜೇಸಿ ಅಧ್ಯಕ್ಷ ಮನೋಜ್, ಪೂರ್ವಾಧ್ಯಕ್ಷ ಪ್ರಮೋದ್ ಆರ್ ನಾಯಕ್, ಅಶೋಕ್ ಕುಮಾರ್ ಬಿ.ಪಿ, ಚಿದಾನಂದ ಇಡ್ಯ, ಕೋಶಾಧಿಕಾರಿ ವಿಶಾಲ್ ಅಗಸ್ಟಿನ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.