HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಲಾಲ ಗೋಲ್ಡ್ ಕಿರುಚಿತ್ರಕ್ಕೆ ರಾಷ್ಟ್ರೀಯ ಪುರಸ್ಕಾರ

niranjan vannali award copyಬೆಳ್ತಂಗಡಿ : ಕನ್ನಡದ ಹಿರಿಯ ಫ್ರೀಲಾನ್ಸ್ ಪತ್ರಕರ್ತ ಹಾಗೂ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಸಚಿವ ಪ್ರೋ. ನಿರಂಜ ವಾನಳ್ಳಿ ನಿರ್ದೇಶಿಸಿದ ಲಾಲ ಗ್ರಾಮ ಪಂಚಾಯತು ವತಿಯಿಂದ ಮಾಡಲಾಗುತ್ತಿರುವ ತ್ಯಾಜ್ಯದಿಂದ ಗೊಬ್ಬರ ಕುರಿತಾದ ಕಿರುಚಿತ್ರಕ್ಕೆ ರಾಷ್ಟ್ರೀಯ ಪುರಸ್ಕಾರ ದೊರಕಿದೆ.
ಕೇಂದ್ರ ಸರಕಾರದ ಪಂಚಾಯತ್‌ರಾಜ್ ಮಂತ್ರಾಲಯ ಆಹ್ವಾನಿಸಿದ್ದ ಪಂಚಾಯತ್ ರಾಜ್ ಸಂಸ್ಥೆಗಳ ಕುರಿತ ಕಿರುಚಿತ್ರ ಸ್ಪರ್ಧೆಯಲ್ಲಿ ವಾನಳ್ಳಿ ಅವರು ಬರೆದು ನಿರ್ದೇಶಿಸಿದ ‘ಲಾಲ ಗೋಲ್ಡ್’ ಕಿರುಚಿತ್ರ ಸ್ಪರ್ಧೆಗೆ ಬಂದಿದ್ದ 510 ಚಿತ್ರಗಳ ಪೈಕಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಪುರಸ್ಕಾರ ರೂ.7.50 ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಲಾಲ ಗ್ರಾಮ ಪಂಚಾಯತಿನಲ್ಲಿ ಮನೆ, ಮನೆಯಿಂದ ಕಸ ಸಂಗ್ರಹಿಸಿ ಅದನ್ನು ಪ್ರತ್ಯೇಕವಾಗಿ ಬೇರ‍್ಪಡಿಸಿ ನಂತರ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸಿ ಇದನ್ನು ‘ಲಾಲ ಗೋಲ್ಡ್’ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದು ಜನಪ್ರಿಯವಾಗುತ್ತಿದ್ದು, ಪಂಚಾಯತಕ್ಕೆ ಆದಾಯ ತರುವ ಜನತೆಗೆ ಪರಿಸರದ ಸ್ವಚ್ಚತೆಗೆ ಕಾರಣವಾಗಿದೆ. ಇದನ್ನು ತಮ್ಮ ಗ್ರಾಮ ಪಂಚಾಯತದಲ್ಲೂ ಅಳವಡಿಸಿಕೊಳ್ಳಲು ರಾಜ್ಯದಾದ್ಯಂತದಿಂದ ಗ್ರಾ.ಪಂ.ದವರು ಭೇಟಿ ನೀಡುತ್ತಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.