ಉಜಿರೆ ಕಾಲೇಜಿನ ಪ್ರಾಂಶುಪಾಲರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ

 sdm mohana narayana prasasti copyಉಜಿರೆ : ಪಂಚಾಯ್ತ್ ರಾಜ್ ಕ್ಷೇತ್ರದಲ್ಲಿನ ವಿಶೇಷ ಸಾಧನೆ-ಸಂಶೋಧನೆ ಹಾಗೂ ಸಮರ್ಪಣಾ ಭಾವದ ಸೇವೆಯನ್ನು ಗುರುತಿಸಿ ಉಜಿರೆ ಶ್ರೀ ಧ.ಮಂ. ಕಾಲೇಜಿನ ಪ್ರಾಂಶುಪಾಲ ಡಾ. ಮೊಹನನಾರಾಯಣ ಅವರು ರಾಷ್ಟ್ರಮಟ್ಟದ ಪ್ರತಿಷ್ಠಿತ ಭಾರತ ವಿಕಾಸ ಅವಾರ್ಡ್ ಹಿರಿಮೆಗೆ ಪಾತ್ರರಾಗಿದ್ದಾರೆ.
ಪಂಚಾಯ್ತ್ ರಾಜ್ ಸಬಲೀಕರಣದ ದಿಸೆಯಲ್ಲಿನ ಅವರ ಪ್ರಯೋಗ, ವಿನೂತನ ಬೋಧನಾ ವಿಧಾನ ಹಾಗೂ ನಾಗರಿಕ ಪ್ರಜ್ಞೆ ಮೂಡಿಸುವ ದಿಸೆಯಲ್ಲಿ ಅವರ ಪ್ರಯತ್ನ ಹಾಗೂ ಪುಸ್ತಕ ಪ್ರಕಟಣೆ ಮುಂತಾದ ಎಲ್ಲ ಸಾಧನೆಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಮೋಹನನಾರಾಯಣರವರು ಅಯ್ಕೆಯಾಗಿದ್ದಾರೆ.
ಒಡಿಸ್ಸಾದ ಬುವನೇಶ್ವರದಲ್ಲಿ ಡಿ.10ರಂದು ನಡೆದ ರಾಷ್ಟ್ರಮಟ್ಟದ ಅರ್ಥಶಾಸ್ತ್ರ ಹಾಗೂ ಗ್ರಾಮೀಣಾಭಿವೃದ್ಧಿ ಕುರಿತ ಸಮಾವೇಶದ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ವಿತರಿಸಲಾಯಿತು.
ರಾಷ್ಟ್ರಮಟ್ಟದ ಇನ್ಸ್‌ಸ್ಟಿಟ್ಯುಟ್ ಅಫ್ ಸೆಲ್ಫ್ ರಿಲಾಯನ್ಸ್ ಸಂಸ್ಥೆಯು ಭಾರತ ವಿಕಾಸ ಪರಿಷತ್‌ನ ಸಹಯೋಗದಲ್ಲಿ ಈ ಸಮಾವೇಶ ಏರ್ಪಡಿಸಿತ್ತು ಹಾಗೂ ಪ್ರಶಸ್ತಿಯನ್ನು ಘೋಷಿಸಿತ್ತು. ವಿವಿಧ ಕ್ಷೇತ್ರದ ರಾಷ್ಟ್ರ-ಅಂತರಾಷ್ಟ್ರೀಯ ಗಣ್ಯರ ವಿಶಿಷ್ಟ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಭವನೇಶ್ವರ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ಗೀತಾಂಜಲಿ ಅವರು ವರ್ಣರಂಜಿತ ಸಮಾರಂಭದಲ್ಲಿ ಮೋಹನನಾರಾಯಣರಿಗೆ ಪ್ರಶಸ್ತಿಯನ್ನು ವಿತರಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.