ಡಿ.11: ಉಜಿರೆಯಲ್ಲಿ ಶ್ರವಣ ತಪಾಸಣಾ ಶಿಬಿರ

  ಬೆಳ್ತಂಗಡಿ : ಸೇವಾ ಭಾರತಿ ಕನ್ಯಾಡಿ, ಪಟವರ್ಧನ ಸೇವಾ ಟ್ರಸ್ಟ್, ಸಕ್ಷಮ ಬೆಳ್ತಂಗಡಿ, ಆಡಿಯೋಲೊಜಿ ಇಂಡಿಯ ಟ್ರಸ್ಟ್ ಮೈಸೂರು ಮತ್ತು ದ.ಕ ಮತ್ತು ಉಡುಪಿ ಜಿಲ್ಲಾ ಅಂಗವಿಕಲರ ಸಂಘ ಇವುಗಳ ಸಹಭಾಗಿತ್ವದಲ್ಲಿ ಶ್ರವಣ ತಪಾಸಣೆ ಹಾಗೂ ಶ್ರವಣ ಸಾಧನ ವಿತರಣಾ ಕಾರ್ಯಕ್ರಮ ಡಿ.11ರಂದು ಉಜಿರೆ ಶಾರದಾ ಮಂಟಪದಲ್ಲಿ ನಡೆಯಲಿದೆ ಎಂದು ಸೇವಾ ಭಾರತಿಯ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್ ಹಾಗೂ ಸಕ್ಷಮ ಬೆಳ್ತಂಗಡಿಯ ಅಧ್ಯಕ್ಷ ರಾಜಪ್ರಸಾದ್ ಪೋಳ್ನಾಯ ತಿಳಿಸಿದ್ದಾರೆ.
ಸೇವಾ ಭಾರತಿಯ ಎರಡನೇ ಶಿಬಿರ ಇದಾಗಿದ್ದು, ಕಳೆದ ಬಾರಿ 120 ಮಂದಿಗೆ ಶ್ರವಣಯಂತ್ರ ಉಚಿತವಾಗಿ ನೀಡಲಾಗಿದೆ. ಈ ಬಾರಿ ಮೊದಲ ನೋಂದಾಯಿತ ೧೦೦ ಮಂದಿಗೆ ಶ್ರವಣ ತಪಾಸಣೆ ಹಾಗೂ ಅರ್ಹ 40 ಮಂದಿಗೆ ಕಿವಿಯ ಅಚ್ಚಿನ ಅಳತೆಯನ್ನು ಪಡೆದು ಮುಂದಿನ ತಿಂಗಳ ೨ನೇ ಭೇಟಿಯ ಸಮಯದಲ್ಲಿ ಶ್ರವಣ ಯಂತ್ರ ವಿತರಿಸಲಾಗುವುದು ಎಂದು ತಿಳಿಸಿದರು.
ಶಿಬಿರಕ್ಕೆ ಕಿವುಡುತನ ಪರಿಶೀಲನೆಗೆ ಬರುವವರು ಬಿಪಿಎಲ್ ಕಾರ್ಡ್ ಜೊತೆಗೆ 2 ಪಾಸ್‌ಪೋರ್ಟ್ ಸೈಜಿನ ಫೋಟೋ ತರಬೇಕು ಹೆಚ್ಚಿನ ಮಾಹಿತಿಗೆ(9945491241) ಸಂಪರ್ಕಿಸಬಹುದು ಎಂದು ಹೇಳಿದರು. ಸೇವಾ ಭಾರತಿಯಿಂದ ಪ್ಲಾಸ್ಟಿಕ್ ಮುಕ್ತ ಮತ್ತು ಅಂಧತ್ವ ಮುಕ್ತ ಭಾರತ ಕಾರ್ಯಕ್ರಮ ನಡೆಸಲಾಗಿದೆ. ನಾರಾವಿ ಜಿ.ಪಂ ವ್ಯಾಪ್ತಿಯಲ್ಲಿ ಕಣ್ಣಿನ ತಪಾಸಣೆ, ಕನ್ನಡಕ ವಿತರಣೆ ಕಾರ್ಯಕ್ರಮ ಸಕ್ಷಮದ ವತಿಯಿಂದ ನಡೆಯಲಿದೆ. ಸೇವಾ ಭಾರತಿಯಲ್ಲಿ ಕಣ್ಣುದಾನ ಮತ್ತು ದೇಹ ದಾನದ ನೋಂದಾವಣೆ ಮಾಡಿಕೊಳ್ಳಲಾಗುತ್ತಿದ್ದು, ಇದರ ಮಾಹಿತಿಯನ್ನು ಆಸ್ಪತ್ರೆಗಳಿಗೆ ನೀಡಲಾಗಿದೆ. ಜಿಲ್ಲೆಗೆ ಒಂದು ಐ ಬ್ಯಾಂಕ್ ಮಾಡಲು ಒತ್ತಾಯ ಮಾಡಲಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪಟವರ್ಧನ್ ಸೇವಾ ಟ್ರಸ್ಟ್‌ನ ಸಂಚಾಲಕ ಯಶವಂತ ಪಟವರ್ಧನ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.