ಮಹಿಳೆಯರನ್ನು ಗೌರವಿಸುವ ಪರಿಪಾಠ ಮನೆಯಿಂದಲೇ ಬೆಳೆಯಬೇಕು: ಹೇಮಾವತಿ ಹೆಗ್ಗಡೆ

Advt_NewsUnder_1
Advt_NewsUnder_1

padangadi dasamanosava vicharagosti copy  ಪಡಂಗಡಿಯಲ್ಲಿ ಮಹಿಳಾ ಗೋಷ್ಠಿ

ಪಡಂಗಡಿ: ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಇದಕ್ಕಾಗಿ ಬಂದ ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಇದಕ್ಕಾಗಿ ನೈತಿಕ ಪಾಠದ ಅಗತ್ಯತೆ ಇದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮಗಳ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ ಹೇಳಿದರು.
ಅವರು ಡಿ.4ರಂದು ಪಡಂಗಡಿ ಸ.ಹಿ.ಪ್ರಾ. ಶಾಲಾ ಕ್ರೀಡಾಂಗಣದಲ್ಲಿ ಜರಗುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆಯ ಕೃಷಿ ಉತ್ಸವ ಹಾಗೂ ಪಡಂಗಡಿ ಪ್ರಾ.ಕೃ.ಪ.ಸ. ಸಂಘದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಜರಗಿದ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜ್ಞಾನ ವಿಕಾಸ ಯೋಜನೆಯಿಂದ ಮಹಿಳೆಯರ ಮನಸ್ಸು ವಿಕಸನಗೊಂಡಿದೆ. ಜೀವನದಲ್ಲಿ ವಯಸ್ಸು ಮುಖ್ಯವಲ್ಲ ಬದಲಾಗಿ ಸಾಧನೆ ಮುಖ್ಯ. ಅದಕ್ಕಾಗಿ ನಿರಂತರ ಶ್ರಮ ಬೇಕಾಗುತ್ತದೆ. ಮನಸ್ಸು ಬದಲಾದಾಗ ಜೀವನ ಪರಿವರ್ತನೆಗೊಂಡು ಬೆಳವಣಿಗೆ ಸಾಧ್ಯ. ಕುಂಬಾರ ಮಣ್ಣಿನಿಂದ ಧೂಮಪಾನದ ಕೊಳವೆಯನ್ನು ಮಾಡುತ್ತಿದ್ದ. ಇದರಿಂದ ಬೇಸರಗೊಳ್ಳುತ್ತಿದ್ದ ಆತ ಬಳಿಕ ಕಳಸ ಮಾಡಲು ಪ್ರಾರಂಭಿಸಿದ. ಮನಸ್ಸಿನ ಬದಲಾವಣೆಯಿಂದ ಉತ್ತಮ ಕಾರ್ಯಕ್ಕೆ ಪ್ರೇರಣೆಯಾಗುತ್ತದೆ. ವಿಶ್ವಾಸ ಮತ್ತು ತೆರೆದ ಮನಸ್ಸು ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ಮೂಡಬಿದಿರೆ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕಿ ಡಾ| ಮಧುಮಾಲ ಕೆ. ಉಪನ್ಯಾಸ ನೀಡಿ, ಸಂಪನ್ಮೂಲ ಹಾಗೂ ನಿರ್ಧಾರಗಳನ್ನು ಹಿಡಿದು ಸಾಧಿಸಿದಾಗ ಮಹಿಳೆಯರು ಸಬಲೀಕರಣ ಆಗುತ್ತಾರೆ. ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಮಹಿಳೆಯರು ಶಸಕ್ತರಾಗಬೇಕು. ಇದಕ್ಕಾಗಿ ದೃಢ ಹೆಜ್ಜೆ ಇಡಬೇಕಾಗಿದೆ ಎಂದರು.
ನಿಟ್ಟಡೆ ಜ್ಞಾನ ವಿಕಾಸ ಕೇಂದ್ರದ ಸದಸ್ಯೆ ಗೌರಿ ಅವರು ಅನುಭವ ಹಂಚಿಕೊಂಡರು. ಮುಖ್ಯ ಅತಿಥಿಯಾಗಿ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಪ್ರಾದೇಶಿಕ ಕಚೇರಿಯ ನಿರ್ದೇಶಕ ಮಹಾವೀರ ಅಜ್ರಿ, ಕೃಷಿ ಉತ್ಸವ ಸಮಿತಿ ಮತ್ತು ದಶಮಾನೋತ್ಸವ ಸಮಿತಿ ಅಧ್ಯಕ್ಷ ಕೆ.ಎಸ್. ಯೋಗೀಶ್ ಕುಮಾರ್ ನಡಕ್ಕರ ಉಪಸ್ಥಿತರಿದ್ದರು. ತಾಲೂಕು ಯೋಜನಾಧಿಕಾರಿ ರೂಪಾ ಜಿ. ಜೈನ್ ಸ್ವಾಗತಿಸಿ ಜ್ಞಾನ ವಿಕಾಸ ಸಮನ್ವಯಧಿಕಾರಿ ರೇಣುಕಾ ವಂದಿಸಿದರು. ಮೇಲ್ವಿಚಾರಕರಾದ ಸತೀಶ್ ಮತ್ತು ಸುರೇಶ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.