HomePage_Banner_
HomePage_Banner_
HomePage_Banner_

ಯುವಕರು ಅವಕಾಶಗಳ ಸದುಪಯೋಗ ಪಡೆದುಕೊಳ್ಳಬೇಕು : ಯೋಗೀಶ್ ಕುಮಾರ್

bdy jc 1 copyಜೇಸಿ ಪದಗ್ರಹಣ ಸಮಾರಂಭ

ಬೆಳ್ತಂಗಡಿ : ಜೆಸಿಐ ಮಂಜುಶ್ರೀ ಬೆಳ್ತಂಗಡಿ ಇದರ ನೂತನ ಅಧ್ಯಕ್ಷ ಜೇಸಿ ಸಂತೋಷ್ ಪಿ. ಕೋಟ್ಯಾನ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಡಿ.5ರಂದು ಜೇಸಿ ಭವನ ಬೆಳ್ತಂಗಡಿಯಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪಡಂಗಡಿ ಸಿ.ಎ ಬ್ಯಾಂಕ್‌ನ ಅಧ್ಯಕ್ಷ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗೀಶ್ ಕುಮಾರ್ ಕೆ.ಎಸ್ ಅವರು ಮಾತನಾಡಿ ನಮ್ಮ ದೇಶದ ಶೇ. 18ರಿಂದ ಶೇ. 19ರಷ್ಟು ಪ್ರತಿಭಾವಂತ ಯುವಕರು ವಿದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ಯುವಕರಿಗೆ ಸರಿಯಾದ ಅವಕಾಶ ಮತ್ತು ಮಾರ್ಗದರ್ಶನ ದೊರೆಯದಿರುವುದು ಇದಕ್ಕೆ ಕಾರಣವಾಗಿದೆ. ಈ ಯುವಕರು ನಮ್ಮ ದೇಶದಲ್ಲಿದ್ದರೆ ದೇಶದ ಪ್ರಗತಿಗೆ ಸಹಕಾರಿಯಾಗುತ್ತಿತ್ತು. ಯುವಕರಿಗೆ ಹಿರಿಯರು ಮಾರ್ಗದರ್ಶನ ನೀಡಬೇಕು ಜೇಸಿಯಂತಹ ಸಂಸ್ಥೆಗಳಲ್ಲಿ ಸೇರಿಕೊಂಡು ಇದರಲ್ಲಿ ದೊರೆಯುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜೇಸಿ ವಲಯ 15ರ ಅಧ್ಯಕ್ಷ ಜೆಎಫ್‌ಎಂ ಸಂತೋಷ್ ಜಿ. ಅವರು ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿ, ಜೇಸಿ ಸಂಸ್ಥೆ ಬೆಳೆಯುವುದರ ಜೊತೆಗೆ ನಾವು ಬೆಳೆಯಬೇಕು ಎಂಬುದು ಜೇಸಿಯ ತತ್ವವಾಗಿದೆ. ಈ ಸಂಸ್ಥೆಗೆ ಯುವಕರು ಸೇರಿದರೆ ಅವರ ವ್ಯಕ್ತಿತ್ವ ವಿಕಾಸ ಮತ್ತು ಪ್ರಕಾಶ ಜೇಸಿಯಿಂದ ಆಗುತ್ತದೆ. ಇದಕ್ಕೆ ಬೇಕಾದ ಎಲ್ಲಾ ಅವಕಾಶಗಳು ಮತ್ತು ತರಬೇತಿಗಳು ಇಲ್ಲಿ ಸಿಗುತ್ತದೆ ಎಂದರು.
ಬೆಳ್ತಂಗಡಿ ಜೇಸಿ ಸಂಸ್ಥೆಗೆ ದೊಡ್ಡ ಇತಿಹಾಸವಿದೆ. ಉತ್ತಮ ಯುವಕರ ತಂಡ ಇಲ್ಲಿದೆ. ಹಳೇ ಬೇರು ಹೊಸ ಚಿಗುರು ಸೇರಿ ಇಲ್ಲಿಯ ತಂಡ ಜೇಸಿ ವಲಯದಲ್ಲೇ ಹಲವಾರು ಪ್ರಶಸ್ತಿಗಳನ್ನು ಪಡೆದು ದಾಖಲೆ ನಿರ್ಮಿಸಿದೆ. ಕಳೆದ ಅವಧಿಯಲ್ಲಿ ವಸಂತ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಅದ್ಭುತ ಕಾರ್ಯಕ್ರಮಗಳನ್ನು ಮಾಡಿರುವುದು ಇದಕ್ಕೆ ಸಾಕ್ಷಿಯಾಗಿದೆ, ನೂತನ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಅವರ ಅವಧಿಯಲ್ಲೂ ಉತ್ತಮ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.
ಜೇಸಿ ವಲಯ ಉಪಾಧ್ಯಕ್ಷ ಜೇಸಿ ಪುರುಷೋತ್ತಮ ಶೆಟ್ಟಿಯವರು ಮಾತನಾಡಿ, ಬೆಳ್ತಂಗಡಿ ಜೇಸಿ ಕಳೆದ ಅವಧಿಯಲ್ಲಿ ಉತ್ತಮ ಚಟುವಟಿಕೆಗಳನ್ನು ಮಾಡುವ ಮೂಲಕ ವಲಯದಲ್ಲೇ ಗುರುತಿಸಲ್ಪಟ್ಟ ಸಂಸ್ಥೆಯಾಗಿದೆ. ನೂತನ ಅಧ್ಯಕ್ಷ ಸಂತೋಷ್ ಅವರ ಅವಧಿಯಲ್ಲಿಯೂ ಉತ್ತಮ ಸಾಧನೆಗಳಾಗಲಿ, ವಲಯ ಉಪಾಧ್ಯಕ್ಷನ ನೆಲೆಯಲ್ಲಿ ಎಲ್ಲಾ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ನೂತನ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳ್ತಂಗಡಿ ಮಂಜುಶ್ರೀ ಜೇಸಿ ಸಮಾಜ ಮುಖಿ ಕಾರ್ಯಕ್ರಮಗಳ ಮೂಲಕ ಜನರ ಪ್ರೀತಿ-ವಿಶ್ವಾಸವನ್ನು ಗಳಿಸಿದೆ. ಜೇಸಿಯಲ್ಲಿ ನಾನು ತೊಡಗಿಸಿಕೊಂಡದ್ದರಿಂದ ನನಗೆ ಬದುಕುವುದು ಹೇಗೆ ಎಂದು ಈ ಸಂಸ್ಥೆ ಕಲಿಸಿದೆ. ಈ ಹಿಂದಿನ ಅಧ್ಯಕ್ಷರು ಉತ್ತಮ ಕಾರ್ಯಕ್ರಮಗಳ ಮೂಲಕ ಈ ಸಂಸ್ಥೆಯನ್ನು ಮುನ್ನಡೆಸಿದ್ದು, ನನ್ನ ಅವಧಿಯ ಎಲ್ಲಾ ಕಾರ್ಯಕ್ರಮಗಳಿಗೂ ಸಹಕಾರ ನೀಡುವಂತೆ ವಿನಂತಿಸಿದರು.
ಸಮಾರಂಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೆ. ಎಸ್ ಯೋಗೀಶ್ ಕುಮಾರ್ ನಡಕ್ಕರ ಇವರನ್ನು ಜೇಸಿ ವತಿಯಿಂದ ಸನ್ಮಾನಿಸಲಾಯಿತು. ನೂತನ ಸದಸ್ಯರಾಗಿ ಅವಿನ್ ಶೆಟ್ಟಿ ಕಣಿಯೂರು, ಗುರುರಾಜ ಕೆ. ಮಿತ್ತಬಾಗಿಲು, ಸಂತೋಷ್ ಕುಮಾರ್ ನಾಲ್ಕೂರು, ತನ್ಸಿಫ್ ಬೆದ್ರಬೆಟ್ಟು, ಸದಾಶಿವ ಕಕ್ಕಿಂಜೆ, ಗಣೇಶ್ ಚಾರ್ಮಾಡಿ, ವಿಜಯಕುಮಾರ್ ನಿಡಿಗಲ್, ಜಗದೀಶ್ ತಾರಿಪಡ್ಪು ನಾಲ್ಕೂರು ಜೇಸಿಗೆ ಸೇರ‍್ಪಡೆಗೊಂಡರು. ನಿರ್ಗಮನ ಅಧ್ಯಕ್ಷ ಜೇಸಿ ವಸಂತ ಶೆಟ್ಟಿ ಶ್ರದ್ಧಾ ಮಾತನಾಡಿ, ನನ್ನ ಅವಧಿಯಲ್ಲಿ ಜೇಸಿ ಉತ್ತಮ ಸಾಧನೆ ಮಾಡಲು ಕಾರಣರಾದ ಎಲ್ಲಾ ಜೇಸಿ ಮಿತ್ರರನ್ನು ಹಾಗೂ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ವರದಿ ವಾಚಿಸಿದರು. ನಿಕಟಪೂರ್ವ ಅಧ್ಯಕ್ಷ ಜೇಸಿ ಚಿದಾನಂದ ಇಡ್ಯ ಮಾತನಾಡಿ ಸಹಕರಿಸಿದ ಎಲ್ಲರನ್ನು ಸ್ಮರಿಸಿಕೊಂಡು ಅಭಿನಂದಿಸಿದರು. ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಸುದ್ದಿ ಪತ್ರಿಕೆ ವ್ಯವಸ್ಥಾಪಕ ಮಂಜುನಾಥ ರೈ, ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಭಗೀರಥ ಜಿ, ಬಳೆಂಜ ಬಿಲ್ಲವ ಸಂಘದ ಗೌರವಾಧ್ಯಕ್ಷ ಧರ್ಣಪ್ಪ ಪೂಜಾರಿ, ರೋಟರಿ ಪೂರ್ವಾಧ್ಯಕ್ಷ ದಯಾನಂದ ನಾಯಕ್, ಮಡಂತ್ಯಾರು ಜೇಸಿ ನಿಯೋಜಿತ ಅಧ್ಯಕ್ಷ ರಾಜೇಶ್, ಬಳಂಜ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನಿಲ್‌ನಾಯ್ಗ ಮೊದಲಾದವರು ಶುಭಶಂಸನೆ ಗೈದರು.
ವೇದಿಕೆಯಲ್ಲಿ ಕಾರ್ಯದರ್ಶಿ ಜೇಸಿ ರಂಜಿತ್ ಹೆಚ್.ಡಿ, ಜೇಸಿರೇಟ್ ಅಧ್ಯಕ್ಷೆ ಶ್ರೀಮತಿ ಅಮೃತಾ, ಕೋಶಾಧಿಕಾರಿ ವಿಶಾಲ್‌ಅಗಸ್ಟಿನ್, ಜೂ.ಜೇಸಿ ಅಧ್ಯಕ್ಷ ಮನೋಜ್, ನಿಕಟ ಪೂರ್ವ ಕಾರ್ಯದರ್ಶಿ ಜೇಸಿ ಪ್ರಶಾಂತ ಲಾಲ, ಕೋಶಾಧಿಕಾರಿ ಜೇಸಿ ಸ್ವರೂಫ್, ಜೇಸಿರೇಟ್ ಅಧ್ಯಕ್ಷೆ ಶಾಲಿನಿ ವಸಂತ್, ಜೂ.ಜೇಸಿ ಅಧ್ಯಕ್ಷ ಸ್ಮಿತೇಶ್ ಬಾರ್ಯ ಉಪಸ್ಥಿತರಿದ್ದರು.
ಜೇಸಿ ಗಣೇಶ್ ಶಿರ್ಲಾಲು ಅತಿಥಿಗಳನ್ನು ವೇದಿಕೆ ಆಹ್ವಾನಿಸಿದರು. ವಸಂತ ಶೆಟ್ಟಿ ಶ್ರದ್ಧಾ ಸ್ವಾಗತಿಸಿದರು. ಅಭಿನಂದನ್ ನೂತನ ಸದಸ್ಯರನ್ನು ಪರಿಚಯಿಸಿದರು. ಸ್ವಾತಿ ಜೇಸಿ ವಾಣಿ ಉದ್ಘೋಶಿಸಿದರು.
ಅತಿಥಿಗಳನ್ನು ಗುರುರಾಜ್, ರಂಜಿತ್ ಹೆಚ್.ಡಿ, ಪ್ರಸಾದ್ ಕಕ್ಕಿಂಜೆ ಪರಿಚಯಿಸಿದರು. ನೂತನ ಅಧ್ಯಕ್ಷರನ್ನು ಪೂರ್ವಾಧ್ಯಕ್ಷ ಶ್ರೀನಾಥ್ ಕೆ.ಎಂ. ಪರಿಚಯಿಸಿದರು.
ಚಿದಾನಂದ ಇಡ್ಯರನ್ನು ಪೂರ್ವಾಧ್ಯಕ್ಷರ ಸಾಲಿಗೆ ಜೇಸಿ ತುಕರಾಮ್ ಪರಿಚಯಿಸಿದರು. ನೂತನ ಕಾರ್ಯದರ್ಶಿ ರಂಜಿತ್ ಹೆಚ್.ಡಿ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.