ಬಹುನಿರೀಕ್ಷಿತ ತುಳು ಚಲನಚಿತ್ರ ಪಿಲಿಬೈಲ್ ಯಮುನಕ್ಕ ಡಿ.9ರಂದು ಬಿಡುಗಡೆ

   ಪಿಲಿಬೈಲು ಯಮುನಕ್ಕ ಚಿತ್ರವು ತುಳುನಾಡಿನ ಸಿನಿ ಪ್ರೇಕ್ಷಕರಿಗೆ ತುಂಬಾ ಮನೋರಂಜನೆಯನ್ನು ನೀಡುವ ಚಿತ್ರವಾಗಿದ್ದು ಸುಮಾರು 85 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಡಿ. 9ರಂದು ಬಹುತೇಕ ಕರಾವಳಿಯ ಎಲ್ಲಾ ಚಿತ್ರ ಮಂದಿರದಲ್ಲಿ ಬಿಡುಗಡೆಗೊಳ್ಳಲಿದ್ದು, ಚಿತ್ರವು ಪಕ್ಕ ಕೌಟುಂಬಿಕ ಹಾಗೂ ಹಾಸ್ಯಗಳನ್ನು ಒಳಗೊಂಡಿದ್ದು, ಯುವ ಸಮುದಾಯಕ್ಕೆ ಒಳ್ಳೆಯ ಸಂದೇಶ ನೀಡುವ ಮೇಸೆಜ್ ಚಿತ್ರದಲ್ಲಿದೆ.
ಸುಮಾರು 106 ಕಲಾವಿದರು, ತುಳುನಾಡಿನ ಖ್ಯಾತ ಕಲಾ ದಿಗ್ಗಜರು ನಟಿಸಿದ್ದು ಮುಂಬಯಿಯ ಹೆಸರಾಂತ ಸ್ಟುಡಿಯೋದಲ್ಲಿ ತಯಾರಾಗಿದೆ. ಈಗಾಗಲೇ ಬಾರಿ ಸುದ್ದಿ ಮಾಡುತ್ತಿರುವ ಚಿತ್ರದ ಎಲ್ಲಾ ಹಾಡುಗಳು ಎಲ್ಲರ ವಾಟ್ಸ್‌ಪ್‌ನಿಂದ ರವಾನೆ ಯಾಗುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರವನ್ನು ನೋಡಿ ಹರಸಿ ಆಶೀರ್ವದಿಸಿ ಪ್ರೋತ್ಸಾಹಿಸುತ್ತೀರಿ ಎಂಬ ನಂಬಿಕೆಯಿದೆ.Harish Rao Naala copy

ಹರೀಶ್ ರಾವ್ , ಸಹ ನಿರ್ಮಾಪಕ 

pilibailu yamunakka copyಬೆಳ್ತಂಗಡಿ : ಲಕುಮಿ ಸಿನಿ ಕ್ರಿಯೇಷನ್ ಬ್ಯಾನರ್ ಹಾಗೂ ಶ್ರೀದುರ್ಗಾ ಎಂಟರ್‌ಟೈನ್‌ಮೆಂಟ್‌ನಲ್ಲಿ ನಿರ್ಮಾಣವಾದ ಬಹುನಿರೀಕ್ಷಿತ ತುಳು ಚಲನಚಿತ್ರ ಪಿಲಿಬೈಲ್ ಯಮುನಕ್ಕ ಡಿ. 9ರಂದು ದ.ಕ ಹಾಗೂ ಉಡುಪಿ ಜಿಲ್ಲೆಯ ಬಹುತೇಕ ಚಿತ್ರಮಂದಿರದಲ್ಲಿ ಏಕಕಾಲದಲ್ಲಿ ಬಿಡುಗಡೆಗೊಂಡು ತೆರೆಕಾಣಲಿದೆ.
ಚಿತ್ರದ ಇಂಪಾದ ಸಂಗೀತ ಈಗಾಗಲೇ ಜನರ ಮನಸೂರೆಗೊಂಡಿದ್ದು, ಯುವ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ಹಾಡಿರುವ ಮಾಯಕಡೂಂಜಿ ಪೂನ್ನ ಗಾಳಿ ಬೀಸುಂಡುಗೆ ಎಂಬ ಗೀತೆಯು ತುಳುನಾಡಿನ ಮನೆಮಾತಾಗಿದೆ. ಪ್ರಥಮವಾಗಿ ಬಾಲಿವುಡ್‌ನ ಹೆಸರಾಂತ ಗಾಯಕರು ಹಾಡಿರುವ ಗೀತೆಗಳು ಅದ್ಭುತವಾಗಿ ಮೂಡಿಬಂದಿವೆ.
ಲಕುಮಿ ಸಿನಿ ಕ್ರಿಯೇಷನ್ ಬ್ಯಾನರ್ ಹಾಗೂ ಶ್ರೀ ದುರ್ಗಾ ಎಂಟರ್‌ಟೈನ್ ಮೆಂಟ್‌ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವನ್ನು ಎಕ್ಕಸಕ ಖ್ಯಾತಿಯ ಕೆ.ಸೂರಜ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ. ರೋಹನ್ ಶೆಟ್ಟಿ ನಿರ್ಮಾಪಕರಾಗಿದ್ದು, ಬೆಳ್ತಂಗಡಿಯ ಹರೀಶ್ ರಾವ್ ಮತ್ತು ಸಂದೇಶ್‌ರಾಜ್ ಬಂಗೇರ ಸಹ ನಿರ್ಮಾಪಕರಾಗಿದ್ದಾರೆ.
ಸಂಗೀತ ನಿರ್ದೇಶಕ ಕಿಶೋರ್ ಕುಮಾರ್ ಶೆಟ್ಟಿ ಅವರು ಅದ್ಭುತ ಸಂಗೀತವಿದೆ. ಸಾಹಿತ್ಯ ಹಾಗೂ ಸಹ ನಿರ್ದೇಶನದ ಜವಾಬ್ದಾರಿಯನ್ನು ಮಯೂರ್ ಆರ್.ಶೆಟ್ಟಿ ನಿರ್ವಹಿಸಿದ್ದಾರೆ. ಛಾಯಾಗ್ರಾಹಕ ಕೀರ್ತನ್ ಪೂಜಾರಿ ಇದರ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಕೆ.ಆರ್.ಲಿಂಗರಾಜು ಸಂಕಲನ ಮುಗಿಸಿದ್ದಾರೆ.
ಪುಟ್ಟಗೌರಿ ಮದುವೆ ಧಾರಾವಾಹಿಯ ಚಂದ್ರಕಲಾ ಮೋಹನ್ ಅವರು ಯಮುನಕ್ಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಾಯಕನಾಗಿ ಪೃಥ್ವಿ ಅಂಬರ್ ಹಾಗೂ ನಾಯಕಿಯಾಗಿ ಸೋನಾಲ್ ಮೊಂತೇರೊ ಅಭಿನಯಿಸಿದ್ದಾರೆ. ಮಂಗಳೂರಿನ ಹಾಸ್ಯ ಚಕ್ರವರ್ತಿಗಳಾದ ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಮಂಜು ರೈ, ವಿಸ್ಮಯ ವಿನಾಯಕ್, ಉಮೇಶ್ ಮಿಜಾರ್ ಮತ್ತು ದೀಪಕ್ ರೈ ಅವರ ಹಾಸ್ಯದ ಝಲಕ್ ಚಿತ್ರವನ್ನು ಮತ್ತಷ್ಟು ರಂಗೇರಿಸಿದೆ.
ಈ ಚಿತ್ರದಲ್ಲಿ ಒಟ್ಟು 106 ಕಲಾವಿದರು ಅಭಿನಯಿಸಿದ್ದಾರೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಂಬಯಿಯ ಹೆಸರಾಂತ ಸ್ಟುಡಿಯೋದಲ್ಲಿ ತಯಾರಾಗಿದೆ. ಡಿ.9 ರಂದು ಈ ಚಿತ್ರವನ್ನು ಸಿನಿಮಾ ಮಂದಿರಗಳಲ್ಲಿ ನಿರೀಕ್ಷಿಸಬಹುದು ಎಂದು ಚಿತ್ರತಂಡದ ಪ್ರಕಟನೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.