ಕೋಲಾರಕ್ಕೆ ಕುಡಿಯಲು ನೀರು ಕೊಡಿ ಆದರೆ ಎತ್ತಿನ ಹೊಳೆ ಯೋಜನೆಯ ಮೂಲಕ ಜನತೆಗೆ ನಡೆಸುತ್ತಿರುವ ವಂಚನೆ ನಿಲ್ಲಿಸಿ : ನಳಿನ್

Advt_NewsUnder_1
Advt_NewsUnder_1

Ettina hole horata copy  ತಾಲೂಕಿನ ಕಾರ್ಯಕ್ರಮದ ವಿವರ
ಡಿ. 10 ರಂದು ಕೊಕ್ಕಡದ ಮೂಲಕ ರಥಯಾತ್ರೆ ಬೆಳ್ತಂಗಡಿಗೆ ಪ್ರವೇಶ. 5 ಗಂಟೆಗೆ ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶ. ಬಳಿಕ ಉಜಿರೆಗೆ ಬಂದು ತಂಗುವುದು.
ಡಿ. 11 ರಂದು ಉಜಿರೆಯಿಂದ ಹೊರಟು 10ಕ್ಕೆ ಬಳ್ತಂಗಡಿಯಲ್ಲಿ ಸ್ವಾಗತ. ಗುರುವಾಯನಕೆರೆ ಮೂಲಕ 12ಕ್ಕೆ ಉಪ್ಪಿನಂಗಡಿಗೆ ನಿರ್ಗಮನ.

ರಾಜ್ಯ ಸರಕಾರದಿಂದ ಇದೊಂದು ಭಾರೀ ದಂಧೆ
ಪ್ರಾರಂಭದಲ್ಲಿ 12 ಸಾವಿರ ಕೋಟಿ ರೂ ಇದ್ದ ಯೋಜನಾ ಗಾತ್ರ 19 ಸಾವಿರಕ್ಕೆ ಏರಿದೆ. ಯೋಜನೆಯಿಂದ ಅರಣ್ಯ- ಪರಿಸರ ಭಾರೀ ನಷ್ಟ ಉಂಟಾಗಲಿದೆ. ಉತ್ತರ ಕರ್ನಾಟಕ ಜನತೆಯ ಬಳಿ 9 ಟಿ.ಎಂ.ಸಿ. ನೀರು ಇದೆ ಎಂದು ಹೇಳಿ ಹಣ ಕೊಳ್ಳೆ ಹೊಡೆಯುವ ದಂಧೆ ನಡೆಯುತ್ತಿದೆ. ಈ ಬಗ್ಗೆ ಎಚ್ಚರ ವಹಿಸಬೇಕಾಗಿದೆ ಎಂದು ಮಾಜಿ ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಪ್ರಾಸ್ತಾವಿಕ ಭಾಷಣದಲ್ಲಿ ಹೇಳಿದರು.

ಜನರಿಂದ ವ್ಯಕ್ತವಾದ ಅಭಿಪ್ರಾಯಗಳ ಸಂಕ್ಷಿಪ್ತ ನೋಟ
ಇದೊಂದು ಒಳ್ಳೆಯ ಹೋರಾಟ. ಇದಕ್ಕೆ ಜನ ಬೆಂಬಲ ನೀಡಲೇ ಬೇಕು. ಇನ್ನೂ ಕೂಡ ಇದರಿಂದ ಏನು ತೊಂದರೆಯಾಗುತ್ತದೆ ಎಂದು ಜನ ಅರ್ಥೈಸಿಕೊಂಡಿಲ್ಲ ಎಂಬುದೇ ಬೇಸರ.
-ನ್ಯಾಯವಾದಿ ಬಿ.ಕೆ. ಧನಂಜಯ ರಾವ್
ಬುದ್ದಿವಂತರಾಗಿರುವ ನಮ್ಮ ಜಿಲ್ಲೆಯ ಜನತೆ ಯೋಜನೆಯ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಇಷ್ಟೆಲ್ಲಾ ಮುಂದುವರಿದು ಕಾಮಗಾರಿ ಆಗಿರುವುದರಿಂದ ಇನ್ನು ನಿಲ್ಲಿಸಲು ಸಾಧ್ಯವೇ ಎಂಬುದು ಜನರ ಸಂದೇಹವಾಗಿದೆ.
-ಗುತ್ತಿಗೆದಾರ ವಸಂತ ಮಜಲು
ಹೋರಾಟಕ್ಕೆ ನಾಂದಿ ಹಾಡಿದವರು ಬೆಳ್ತಂಗಡಿಯ ಪತ್ರಕರ್ತರು ಎಂದರೆ ತಪ್ಪಾಗಲಾರದು. ಮುಂದಿನ ಹೋರಾಟಕ್ಕಾಗಿ ತಾಲೂಕು ಮಟ್ಟದ ಒಂದು ಸಮಿತಿ ರಚಿಸುವುದು ಒಳಿತು.
-ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ.
ರಥ ಯಾತ್ರೆ ಡಿ. 10 ರಂದು ಉಜಿರೆಯಲ್ಲಿ ತಂಗುವುದರಿಂದ ಅಲ್ಲೇನಾದರೂ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡರೆ ಒಳ್ಳೆಯದು. ಈ ಹೋರಾಟ ಎಷ್ಟಿದ್ದರೂ ಇನ್ನೂ ಕೂಡ ಬಿಜೆಪಿ ಪಕ್ಷದ ಹೋರಾಟವೆಂದೇ ಕೆಲವರ ಮನದಲ್ಲಿದೆ. ಅದನ್ನು ಹೋಗಲಾಡಿಸಬೇಕು.
-ಬಂಟರ ಸಂಘದ ಅಧ್ಯಕ್ಷ ರಘುರಾಮ ಶೆಟ್ಟಿ ಸಾಧನಾ.
ಹೋರಾಟದಲ್ಲಿ ರಾಜಕಾರಣಿಗಳು ಬೇಕು. ಹೋರಾಟವೇ ರಾಜಕೀಯವಾಗಬಾರದು. ಇದಕ್ಕಾಗಿ ಎಂ.ಪಿ ಸಹಿತಿ ಎಲ್ಲ ಜನಪ್ರತಿನಿಧಿಗಳು ರಾಜೀನಾಮೆ ನೀಡಿ ಕಣಕ್ಕಿಳಿದರೆ ಪರಿಣಾಮ ಜಾಸ್ತಿಯಾದೀತು.
-ದೇವಿಪ್ರಸಾದ್ ಪತ್ರಕರ್ತರ ಸಂಘದ ಅಧ್ಯಕ್ಷ.
ಮುಖ್ಯ ಮಂತ್ರಿಗಳು ಜನತೆಯ ವಿಶ್ವಾಸ ಗಳಿಸುವಲ್ಲಿ ವಿಫಲರಾಗಿದ್ದಾರೆ. ಕೆಟ್ಟ ಸಾಹಸಕ್ಕೆ ಕೈ ಹಾಕುವ ಮೊದಲು ಸಮಸ್ಯೆ ಬಗೆಹರಿಸುವುದು ಒಳಿತು.
-ನಿವೃತ್ತ ಎಸ್.ಪಿ ಪೀತಾಂಬರ ಹೇರಾಜೆ
ಪಂಚಾಯತ್‌ನಿಂದ ಮೊದಲ್ಗೊಂಡು ಎಲ್ಲಾ ಸ್ಥರದ ಜನಪ್ರತಿನಿಧಿಗಳು ಕೈ ಜೋಡಿಸಿ ಹೋರಾಟಕ್ಕೆ ತೀವ್ರತೆ ನೀಡಬೇಕು. ಎಲ್ಲರೂ ಜವಾಬ್ಧಾರಿ ಇಟ್ಟುಕೊಂಡು ಬದುಕಿಗಾಗಿ ಹೋರಾಟ ಎಂದು ತಿಳಿಯೋಣ.
-ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ವಿಠಲ ಶೆಟ್ಟಿ ಲಾಲ.
ತಾಲೂಕು ಸಮಿತಿ ವತಿಯಿಂದ ಕರಪತ್ರವನ್ನೂ ಮಾಡಿ ಪ್ರತೀಪಂಚಾಯತ್ ಮಟ್ಟದಲ್ಲಿ ವಿತರಿಸಿ ತಾಲೂಕು ಮಟ್ಟದಿಂದ ಜನ ಬರುವ ಹಾಗೆ ಮಾಡುತ್ತೇವೆ.
-ಪುಷ್ಪರಾಜ್ ಶೆಟ್ಟಿ ಜಯ ಕರ್ನಾಟಕ ಅಧ್ಯಕ್ಷರು.

ಲಾಲ : ಇದು ಜಿಲ್ಲೆಯ ಜನತೆಯ ಹೋರಾಟ. ಇದರಲ್ಲಿ ಯಾವುದೇ ಪಕ್ಷ, ಜಾತಿ ವ್ಯತ್ಯಾಸವಿಲ್ಲ. ಎಲ್ಲರ ಅಭಿಪ್ರಾಯ ಸಲಹೆ ಪಡೆದು ಮುನ್ನಡೆಯುವ ಉದ್ಧೇಶದಿಂದ ಸಮಾಲೋಚನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರು ಕೊಡಬೇಡಿ ಎಂದು ನಾವು ಎಲ್ಲೂ ಹೇಳಿಲ್ಲ. ಜಿಲ್ಲೆಯ ಜನತೆಯ ಸಭೆ ಕರೆದು ಮುಕ್ತ ಸಂವಾದಕ್ಕೆ ಅವಕಾಶ ನೀಡುತ್ತೇವೆ ಎಂದು ಭರವಸೆ ನೀಡುತ್ತಲೇ ಜನತೆಯ ಕಣ್ಣಿಗೆ ಬಟ್ಟೆಕಟ್ಟೆ ಎತ್ತಿನಹೊಳೆ ಎಂಬ ಯೋಜನೆಯ ಮೂಲಕ ಜನತೆಗೆ ಆಗುತ್ತಿರುವ ವಂಚನೆಯನ್ನು ನಿಲ್ಲಿಸಿ ಎಂಬುದೇ ನಮ್ಮ ಆಗ್ರಹ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಲಾಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಎತ್ತಿನ ಹೊಳೆ ಯೋಜನೆ ವಿರೋಧಿಸಿ ಡಿ. 10 ರಿಂದ 12ರ ವರೆಗೆ ನಡೆಯುವ ಪಂಚ ತೀರ್ಥ, ಸಪ್ತ ಕ್ಷೇತ್ರ ಯಾತ್ರೆ ಎಂಬ ವೈಶಿಷ್ಟ್ಯಭರಿತ ಜನಾಂದೋಲನ ರಥ ಯಾತ್ರೆಯ ಪ್ರಚಾರಾರ್ಥದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಜನ ಇದುವರೆಗೆ ಶಾಂತಿಯುತ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ನಡೆದ ಈ ಹಿಂದಿನ ಹೋರಾಟಗಳ ಭಾಗವಾಗಿ ನಾಗಾರ್ಜುನ, ಎಸ್‌ಇಝೆಡ್ ೩ನೇ ಹಂತದ ಕಾಮಗಾರಿ ವಿಸ್ತರಣೆ, ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರದಂತಹ ಯೋಜನೆಗಳೇ ಸ್ಥಗಿತಗೊಂಡ ಉದಾಹರಣೆಗಳಿವೆ. ಆದ್ದರಿಂದ ನಮ್ಮ ತಾಳ್ಮೆ ಪರೀಕ್ಷಿಸುವ ಕೆಲಸ ಇನ್ನಾದರೂ ಸರಕಾರ ನಿಲ್ಲಿಸಲಿ.
ಕಾಮಗಾರಿ ಮುಕ್ಕಾಲು ಭಾಗ ಪೂರ್ಣಗೊಂಡಿದೆ. ಇನ್ನು ನಿಲ್ಲಿಸುವುದು ಸಾಧ್ಯವೇ ಎಂಬ ಬಗ್ಗೆ ಜನತೆಯ ನಡುವೆ ಸಾಮಾನ್ಯ ಜಿಜ್ಞಾಸೆ ಇದೆ ಎಂಬುದಾಗಿ ಕೇಳಲಾದಾಗ, ಜಿಲ್ಲೆಯ ಜನತೆ ಮನಸ್ಸು ಮಾಡಿದರೆ ಇನ್ನೂ ಕೂಡ ಯೋಜನೆ ನಿಲ್ಲಿಸಲು ಸಾಧ್ಯವಿದೆ ಎಂಬುದಾಗಿ ಅವರು ಉದಾಹರಣೆ ಸಮೇತ ವಿವರಿಸಿದರು.
ಭಾವನಾತ್ಮಕ ವಿಚಾರ. ಇಲ್ಲಿ ಉದ್ವೇಗ ಗೆಲ್ಲುವುದಿಲ್ಲ, ಬುದ್ದಿವಂತಿಕೆ ಮತ್ತು ಪ್ರಜ್ಞಾವಂತಿಗೆ ಗೆಲ್ಲುತ್ತದೆ. ನಮ್ಮ ಹೋರಾಟ ಯಾವುದೇ ಪಕ್ಷ ಅಲ್ಲ. ಇದಕ್ಕೆ ಈಗಾಗಲೇ ಶಾಸಕರುಗಳಾದ ವಸಂತ ಬಂಗೇರ, ಜೆ.ಆರ್. ಲೋಬೋ ಅವರು ಬೆಂಬಲ ನೀಡಿದ್ದಾರೆ. ಕಾಂಗ್ರೆಸ್‌ನ ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿ, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಎಂ. ಮುಹಮ್ಮದ್ ಮಸೂದ್ ಅವರು ಸಮಿತಿಯಲ್ಲಿದ್ದು ತೊಡಗಿಸಿಕೊಂಡಿದ್ದಾರೆ. ಖಾಝಿಗಳಿಂದ ಮೊದಲ್ಗೊಂಡು ಬಿಷಪ್
ವರೆಗೂ, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಹೆಗ್ಗಡೆಯವರೂ ಬೆಂಬಲ ನೀಡಿದ್ದಾರೆ ಎಂದರು.
ನಮ್ಮ ಜಿಲ್ಲೆಯಲ್ಲಿ 42 ಗ್ರಾಮಗಳು ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡತಕ್ಕ ಜಿಲ್ಲೆಗಳು. ಮಂಗಳೂರು ಮಹಾನಗರಕ್ಕೇ ನಮ್ಮಲ್ಲಿ ಬೇಕಾದಷ್ಟು ನೀರಿಲ್ಲ. ನಮ್ಮದು ಕೃಷಿ ತೋಟಗಾರಿಕಾ ಆಧಾರಿತ ಪ್ರದೇಶ. ಹಾಗಿರುವಾಗ ನಮ್ಮ ನಾಡನ್ನು ಬರಡು ಮಾಡುವ ಈ ಯೋಜನೆ ಸರಿಯಲ್ಲ ಎಂದರು.
ರಾಜೀನಾಮೆಗೂ ಸಿದ್ದ: ಎಲ್ಲರ ವಿಶ್ವಾಸ ಗಳಿಸಲು ಜನತೆಯ ಬಳಿ ಬಂದಿದ್ದೇವೆ. ನೇತ್ರಾವತಿಗಾಗಿ ಹೋರಾಟ ನಡೆಸಿದ್ದರಲ್ಲಿ ಬೆಳ್ತಂಗಡಿಯ ಪತ್ರಕರ್ತರು ಹಾಗೂ ತಾಲೂಕಿನ ಜನತೆ ಮೊದಲಿಗರು. ಇದೀಗ ಈ ರಥ ಯಾತ್ರೆ ಯಶಸ್ವಿಯಾದರೆ ಎಲ್ಲವೂ ಯಶಸ್ಸಾದಂತೆ. ಇದರಲ್ಲಿ ಸರಕಾರಕ್ಕೆ ಸಂದೇಶ ರವಾನೆಯಾಗಬೇಕು. ಈ ಹೋರಾಟಕ್ಕಾಗಿ ರಾಜೀನಾಮೆ ನೀಡಿಯೇ ಇಳಿಯಬೇಕಿಂದಿಲ್ಲ. ಅಧಿಕಾರದಲ್ಲಿದ್ದೂ ಸಾಧಿಸಬಹುದು. ಆದರೆ ಕೊನೆಗಳಿಗೆಯಲ್ಲಿ ಅಂತಹಾ ಸನ್ನಿವೇಶ ಎದುರಾದರೆ ರಾಜೀನಾಮೆಗೂ ಸಿದ್ದ ಎಂದು ನಳಿನ್ ಕುಮಾರ್ ಘೋಷಿಸಿದರು.ವೇದಿಕೆಯಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ, ನಿವೃತ್ತ ಎಸ್.ಪಿ. ಯೂ ಆಗಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ಪತ್ರಕರ್ತರ ಸಂಘದ ಅಧ್ಯಕ್ಷ ದೇವಿಪ್ರಸಾದ್, ತುಳುನಾಡು ಒಕ್ಕೂಟದ ಅಧ್ಯಕ್ಷ ಶೈಲೇಶ್ ಆರ್.ಜೆ, ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಆಗಿರುವ ಹೋರಾಟ ಸಮಿತಿ ಸಂಚಾಲಕ ಸಂಜೀವ ಮಠಂದೂರು, ನೇತ್ರಾವತಿ ಉಳಿಸಿ ಹೋರಾಟ ಸಮಿತಿ ತಾ| ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಇವರು ವೇದಿಕೆಯಲ್ಲಿದ್ದರು. ಪ್ರಭಾಕರ ಶೆಟ್ಟಿ ಉಪ್ಪಡ್ಕ ಸ್ವಾಗತಿಸಿದರು. ಹರೀಶ್ ಪೂಂಜ ವಂದಿಸಿದರು. ಸಮಿತಿ ಸಂಚಾಲಕ ಮೋನಪ್ಪ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.