ಬೆಳ್ತಂಗಡಿ : ಇಕೋ ಫ್ರೆಶ್ ಎಂಟರ್‌ಪ್ರೈಸಸ್ ಸ್ಥಳಾಂತರಗೊಂಡ ಮಳಿಗೆ ಶುಭಾರಂಭ

eco 1

eco

ಬೆಳ್ತಂಗಡಿ ರಾಘವೇಂದ್ರ ನರ್ಸಿಂಗ್ ಹೋಂ ಹತ್ತಿರ ಐಡಿಯಲ್ ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್ ಇಕೋ ಫ್ರೆಶ್ ಎಂಟರ್‌ಪ್ರೈಸಸ್ ಸ್ಥಳಾಂತರಗೊಂಡ ಮಳಿಗೆಯು ಇಂದು ಶುಭಾರಂಭಗೊಂಡಿತು.
ಒಂದೇ ಸೂರಿನಡಿ ಎ೩ಲ್ಲಾ ಮಿಷನರಿಗಳು ದೊರೆಯುವ ವಿಶಾಲವಾದ ೧೦೦೦ ಚ.ಟ ವಿಸ್ತೀರ್ಣ ಹೊಂದಿರುವ ತಾಲೂಕಿನ ಏಕೈಕ ಬೃಹತ್ ಕೃಷಿ ಯಂತ್ರೋಪಕರಣ ಮಳಿಗೆ ಹಾಗೂ ಆಧುನಿಕ ಕೃಷಿ ಯಂತ್ರೋಪಕರಣ, ಪವರ್ ಟೂಲ್ಸ್, ಜನರೇಟರ‍್ಸ್, ಗೃಹ ಹೊಟೇಲ್, ಬೇಕರಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವಾ ಮಳಿಗೆಯನ್ನು ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉದ್ಘಾಟಿಸಿದರು. ಸೇವಾ ಮಳಿಗೆಯನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಶಾಸಕ ಕೆ.ವಸಂತ ಬಂಗೇರ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ನಗರ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ಖ್ಯಾತ ಚಲನಚಿತ್ರ ನಟ ಅರ್ಜುನ್ ಕಾಪಿಕಾಡ್, ಉದಯೋನ್ಮುಖ ಚಲನಚಿತ್ರ ನಟ ಅನುರಾಗ್ ಬಂಗೇರ, ಕಟ್ಟಡ ಮಾಲಕರಾದ ಅಶೋಕ್ ಮಿನೇಜಸ್ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಹೊಳೆಹೊದ್ದು ಪ್ರಗತಿಪರ ಹೈನೋದ್ಯಮಿ ರತ್ನಾಕರ ರಾವ್, ಚಲನಚಿತ್ರ ನಟ ಅರ್ಜುನ್ ಕಾಪಿಕಾಡ್, ಉದಯೋನ್ಮುಖ ಚಲನಚಿತ್ರ ನಟ ಅನುರಾಗ್ ಬಂಗೇರರವರನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.