ಸಾಹಿತಿ ಪ.ರಾ. ಶಾಸ್ತ್ರಿಯವರಿಗೆ ಸಾಹಿತ್ಯ ಸಿಂಧು ಪ್ರಶಸ್ತಿ ಪ್ರದಾನ

Advt_NewsUnder_1
Advt_NewsUnder_1

ujire pa ra shastri prasasti pradana copy ಉಜಿರೆ : ಸಾಹಿತ್ಯ ಸಜ್ಜನರ ಸ್ನೇಹವನ್ನೂ, ವೇದಿಕೆಯ ಅವಕಾಶ ವನ್ನೂ, ವಿಶೇಷ ಗೌರವವನ್ನೂ ತಂದು ಕೊಟ್ಟಿದೆ. ಅದು ನನ್ನ ಬದುಕಿನಲ್ಲಿ ಪ್ರೀತಿ, ಅಭಿಮಾನ, ಆತ್ಮವಿಶ್ವಾಸ ಹಾಗೂ ಸಂತೃಪ್ತಿಯನ್ನೂ ಕೊಟ್ಟಿದೆ. ಯಾವುದೇ ಸನ್ಮಾನ, ಪುರಸ್ಕಾರವನ್ನು ನಿರೀಕ್ಷಿಸಿದ ವನಲ್ಲ. ಪ್ರೀತಿಯ ಸನ್ಮಾನವನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ ಎಂದು ಹಿರಿಯ ಸಾಹಿತಿ ಅಂಕಣಕಾರ ಪ.ರಾಮಕೃಷ್ಣ ಶಾಸ್ತ್ರಿ ಹೇಳಿದರು.
ಅವರು ನ. 27ರಂದು ಗುರುವಾಯನಕೆರೆ ಶ್ರೀ ವರದ ಪಾಂಡುರಂಗ ವಿಠಲ ಮಂದಿರದಲ್ಲಿ ಶ್ರೀ ಮದವೂರ ವಿಘ್ನೇಶಕಲಾ ಸಂಘ ಗೇರುಕಟ್ಟೆ ಮತ್ತು ಕರ್ನಾಟಕ ಗಮಕ ಕಲಾ ಪರಿಷತ್ತು ದ.ಕ.ಜಿಲ್ಲೆ ಸಹಯೋಗದೊಂದಿಗೆ ನಡೆದ ಉದಯಾಸ್ತಮಾನ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದ ಮಧ್ಯಂತರದಲ್ಲಿ ನಡೆದ ಗೌರವ ಸಮರ್ಪಣೆ ಸ್ವೀಕರಿಸಿ ಮಾತನಾಡುತ್ತಿದ್ದರು. ಅವರ ಬಹುಮುಖ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಪತ್ನಿ ಶಾರದಾ ಶಾಸ್ತ್ರಿ ಸಹಿತ ಸಾಹಿತ್ಯ ಸಿಂಧು ಪ್ರಶಸ್ತಿ ಪತ್ರ, ಸ್ಮರಣಿಕೆ, ಶಾಲು ಹೊದಿಸಿ ಪುರಸ್ಕರಿಸಲಾಯಿತು.
ಮಂಗಳೂರು ಮ್ಯಾಪ್ಸ್ ಕಾಲೇಜು ನಿವೃತ್ತ ಪ್ರಾಧ್ಯಾಪಕ ಸಂಶೋಧಕ ಡಾ. ದೇಜಪ್ಪ ದಲ್ಲೋಡಿ ಅಧ್ಯಕ್ಷತೆ ವಹಿಸಿ ಪ.ರಾ. ಶಾಸ್ತ್ರಿಯವರು ತಮ್ಮ ಸ್ವಾನುಭವವನ್ನು ಸಮಾಜಕ್ಕೆ ತೋರಿಸಿಕೊಟ್ಟ ಅನರ್ಘ್ಯ ರತ್ನವೆಂದರು. ಕರ್ನಾಟಕ ಗಮಕ ಕಲಾ ಪರಿಷತ್ತು ದ.ಕ. ಜಿಲ್ಲಾಧ್ಯಕ್ಷ ಮಧೂರು ಮೋಹನ ಕಲ್ಲೂರಾಯ ಅಭಿನಂದನಾ ಪತ್ರ ವಾಚಿಸಿ, ಪುಂಜಾಲಕಟ್ಟೆ ಸರಕಾರಿ ಪ್ರ.ದರ್ಜೆ ಕಾಲೇಜು ಪ್ರಾಂಶುಪಾಲ ಗಣಪತಿ ಭಟ್ ಕುಳಮರ್ವ ಶುಭಾಶಂಸನೆಗೈದರು. ಮೂಡಬಿದ್ರೆ ಧನಲಕ್ಷ್ಮೀ ಕ್ಯಾಶ್ಯೂಸ್ ಸಮೂಹ ಸಂಸ್ಥೆಯ ಶ್ರೀಪತಿ ಭಟ್, ಶ್ರೀ ತುಳಸಿ ಪತ್ರಿಕೆ ಸಂಪಾದಕ ಪತ್ರಕರ್ತ ಸಾಂತೂರು ಶ್ರೀನಿವಾಸ ತಂತ್ರಿ, ಶ್ರೀಶ ಮುಚ್ಚಿಂತ್ತಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಸುವರ್ಣ ಕುಮಾರಿ ನಿರೂಪಿಸಿದ ಕಾರ್ಯಕ್ರಮದಲ್ಲಿ ವಸಂತಿ ಕುಳಮರ್ವ ಸ್ವಾಗತಿಸಿ ಕಲಾ ಸಂಘದ ಅಧ್ಯಕ್ಷ ಮಧೂರು ಮೋಹನ ಕಲ್ಲೂರಾಯ ವಂದಿಸಿದರು.
ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಶ್ರೀ ಮದವೂರ ವಿಘ್ನೇಶ ಕಲಾ ಸಂಘದ ಮಹಿಳಾ ಸದಸ್ಯರಿಂದ ಕಚ ದೇವಯಾನಿ, ಯಕ್ಷಭಾರತಿ ಕನ್ಯಾಡಿ ಇವರಿಂದ ಭೀಷ್ಮ ವಿಜಯ, ಕಾಸರಗೋಡು ಕಾವುಗೋಳಿ ಶ್ರೀ ವಿಷ್ಣು ವಿನಾಯಕ ಮಹಿಳಾ ಯಕ್ಷಗಾನ ಸಂಘದ ಕಲಾವಿದರಿಂದ ಅರ್ಜುನ ಸನ್ಯಾಸಿ, ಗೇರುಕಟ್ಟೆ ಶ್ರೀ ಮದವೂರ ವಿಘ್ನೇಶ ಕಲಾ ಸಂಘದವರಿಂದ ಕೃಷ್ಣ ಸಂಧಾನ, ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸಂಘದವರಿಂದ ಕರ್ಣಾರ್ಜುನ ಕಾಳಗ ಮತ್ತು ಕೊಯ್ಯೂರು ಶ್ರೀ ಪಂಚದುರ್ಗಾ ಯಕ್ಷಗಾನ ಕಲಾ ಸಂಘದವರಿಂದ ತಾಮ್ರದ್ವಜ ಕಾಳಗ ಯಕ್ಷಗಾನ ತಾಳಮದ್ದಳೆ ಯಶಸ್ವಿಯಾಗಿ ನಡೆಯಿತು
ಚಿತ್ರ-ವರದಿ :
ಸಾಂತೂರು ಶ್ರೀನಿವಾಸ ತಂತ್ರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.