ಆಕ್ರೋಶ್ ದಿವಸ್: ವೇಣೂರು ಬಿಜೆಪಿಯಿಂದ ಸಂಭ್ರಮಾಚರಣೆ

venurವೇಣೂರು: ಆಕ್ರೋಶ್ ದಿವಸ್ ಆಚರಿಸಬೇಕು ಎಂದು ನೀಡಿದ್ದ ಕಾಂಗ್ರೆಸ್‌ನ ಧೋರಣೆಯನ್ನು ವಿರೋಧಿಸಿ ವೇಣೂರಿನಲ್ಲಿ ಬಿಜೆಪಿ ಕಾರ್ಯಕರ್ತರು ವಿವಿಧ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಿಗೆ ತೆರಳಿ ಸಿಬ್ಬಂದಿಗಳಿಗೆ ಹೂ, ಸಿಹಿ ತಿಂಡಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ಈ ವೇಳೆಯಲ್ಲಿ ಬಿಜೆಪಿ ಮುಖಂಡರುಗಳಾದ ಕೆ. ವಿಜಯ ಗೌಡ, ಕರುಣಾಕರ ಹೆಗ್ಡೆ, ಪ್ರಶಾಂತ್ ಹೆಗ್ಡೆ, ಅಂಬರೀಶ್, ಪ್ರಕಾಶ್ ಹೆಗ್ಡೆ, ಆನಂದ ಪೂಜಾರಿ, ರವಿ ಹೆಗ್ಡೆ, ಸೀತಾರಾಮ ಹಾಗೂ ಮತ್ತಿತರರು ಜೊತೆಗಿದ್ದರು. ಅಕ್ರೋಶ್ ದಿವಸ್ ಏಕೆ ಮಾಡಬೇಕು ನಮಗೇನು ತೊಂದರೆಯಾಗಿಲ್ಲವಲ್ಲ ಎಂದು ಜನರೂ ಪ್ರತಿಕ್ರಿಯಿದ್ದಾರೆ. ನವೆಂಬರ್ ೨೮ರಂದು ಅಪನಗದೀಕರಣ ವಿರುದ್ಧ ದೇಶದಲ್ಲಿ ಆಕ್ರೋಶ್ ದಿವಸ್ ಆಚರಿಸಬೇಕು ಎಂದು ಕಾಂಗ್ರೆಸ್ ಕರೆ ನೀಡಿತ್ತು. ಜನರಿಗೆ ಹಣ ಬದಲಾವಣೆ, ಹಣ ಚಲಾವಣೆ ಸೇರಿದಂತೆ ಅನೇಕ ತೊಂದರೆಗಳಾಗಿವೆ. ಹೀಗಾಗಿ ಬಸ್ ಸಂಚಾರ ಸ್ಥಗಿತಗೊಳಿಸಬೇಕು, ಶಾಲಾ ಕಾಲೇಜುಗಳನ್ನು ಮುಚ್ಚಬೇಕು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಬೇಕು ಎಂದು ಕಾಂಗ್ರೆಸ್ ಹೇಳಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.