ವಿಶೇಷ ಚೇತನರೂ ರಾಷ್ಟ್ರದ ಆಸ್ತಿ: ಡಾ.ಶಶಿಧರ ಡೋಂಗ್ರೆ

Advt_NewsUnder_1
Advt_NewsUnder_1
Advt_NewsUnder_1

ujire bennmule muritadavara shibira copy

ujire bennumule muritadavara shibira copy

ಉಜಿರೆ : ಅಂಗ ವೈಕ್ಯಲ್ಯತೆಯು ಶಾಪವಲ್ಲ, ಅದರೊಂದಿಗೆ ಬದುಕುತ್ತಾ ಇತರ ಅಂಗವೈಕಲ್ಯರಿಗೆ ಸಹಾಯ ಹಸ್ತ ಚಾಚಬೇಕಿರುವುದು ಇಂದಿನ ಅನಿವಾರ್ಯತೆಯಿದೆ. ಪ್ರತಿ ವಿಕಲಚೇತನರು ನಮ್ಮ ರಾಷ್ಟ್ರದ ಆಸ್ತಿ ಎಂದು ಖ್ಯಾತ ದಂತ ವೈದ್ಯ ಡಾ. ಶಶಿಧರ ಡೋಂಗ್ರೆ ನುಡಿದರು.
ಅವರು ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಜರಗಿದ ಎರಡು ದಿನಗಳ ಕಾಲ ನಡೆದ ಬೆನ್ನು ಮೂಳೆ ಮುರಿತಕ್ಕೊಳಗಾದವರಿಗಿನ ವಿಶೇಷ ಶಿಬಿರವನ್ನು ಉಧ್ಘಾಟಿಸಿ ವಿಶೇಷ ಚೇತನರಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಸಭಾಧ್ಯಕ್ಷರಾಗಿ ಸೇವಾಭಾರತಿಯ ಅಧ್ಯಕ್ಷ ಬಿ.ಕೃಷ್ಣಪ್ಪ ಗುಡಿಗಾರ್, ಸಕ್ಷಮದ ತಾಲೂಕು ರಾಜಪ್ರಸಾದ್ ಪೋಳ್ನಾಯ, ಖ್ಯಾತ ಬೆನ್ನುಮೂಳೆ ತಜ್ಞ ಡಾ.ರಾಘವೇಂದ್ರ.ಎಸ್., ಬೆಂಗಳೂರಿನ ಎಪಿಡಿ ಸಂಸ್ಥೆಯ ರೂಬೆನ್ ಡೇನಿಯಲ್ ಉಪಸ್ಥಿತರಿದ್ದರು.ರಾಜಪ್ರಸಾದ್ ಪೋಳ್ನಾಯ ಪ್ರಾರ್ಥಿಸಿದರು. ಸೇವಾಭಾರತಿಯ ಅಧ್ಯಕ್ಷ ಬಿ.ಕೃಷ್ಣಪ್ಪ ಗುಡಿಗಾರ್ ಸ್ವಾಗತಿಸಿ, ಕಾರ್ಯದರ್ಶಿ ಕೆ.ವಿನಾಯಕ ರಾವ್ ಪ್ರಸ್ತಾಪಿಸಿದ ಕಾರ್ಯಕ್ರಮವನ್ನು ದೀಕ್ಷಿತ್.ಡಿ.ವಿ. ನಿರ್ವಹಿಸಿ ಶಂಕರ್ ಗೌಡರ್ ಧನ್ಯವಾದವಿತ್ತರು.
ಬೆಂಗಳೂರಿನ ಅಸೋಷಿಯೇಶನ್ ಆಫ್ ಪೀಪಲ್ ವಿದ್ ಡಿಸೆಬಿಲಿಟಿ ಸಂಸ್ಥೆಯ ಸಹಕಾರದಲ್ಲಿ ಸೇವಾಭಾರತಿ ಹಾಗೂ ಸಕ್ಷಮ ಸಹಯೋಗದಲ್ಲಿ ಈ ಎರಡು ದಿನಗಳ ಶಿಬಿರ ಆಯೋಜನೆಗೊಂಡಿತ್ತು. ೨೩ ಶಿಬಿರಾರ್ಥಿಗಳು ಮೊದಲ ದಿನ ೧೫ ಶಿಬಿರಾರ್ಥಿಗಳು ಎರಡನೇ ದಿನ ಪಾಲ್ಗೊಂಡಿದ್ದರು. ಬೆಳ್ತಂಗಡಿ ತಾಲೂಕು ಅಲ್ಲದೆ ದೂರ ದೂರದ ಇತರೇ ತಾಲೂಕುಗಳಿಂದ ಆಗಮಿಸಿದ ಬೆನ್ನು ಮೂಳೆ ಮುರಿತಕ್ಕೊಳಗಾದವರಿಗೆ ವಿಶೇಷ ಮಾಹಿತಿ ಯೋಜನೆ ಉಪಕ್ರಮಗಳು ಔಷದೋಪಚಾರಗಳ ಬಗ್ಗೆ ತಿಳಿಸಲಾಯಿತು.
ಬೆನ್ನು ಮೂಳೆ ಮುರಿತಕ್ಕೊಳದಾವರಿಗಾಗಿ ಪುನಶ್ಚೇತನ ಕೇಂದ್ರ ದಾವಣಗೆರೆಯ ಲಿಂಗಪ್ಪ, ಸಾಮರ್ಥ ಪುನಶ್ಚೇತನ ಕೇಂದ್ರ ಕೊಪ್ಪಳದ ವಿರೂಪಾಕ್ಷರು ಸಂಪನ್ಮೂಲ ವ್ಯಕ್ತಿಯಾಗಿ ಕೇಂದ್ರ ಯೋಜನೆಗಳನ್ನು ತಿಳಿಯಪಡಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.